ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವೂರ್ ರಾಣಾನನ್ನು ಹಸ್ತಾಂತರಕ್ಕೆ ಎಲ್ಲಾ ಅಡೆತಡೆಗಳನ್ನು ಯುಎಸ್ ತೆಗೆದುಹಾಕಿದ ನಂತರ ಗುರುವಾರ ವಿಶೇಷ ವಿಮಾನದಲ್ಲಿ ಭಾರತಕ್ಕೆ ಕರೆತರುವ ಸಾಧ್ಯತೆಯಿದೆ.
ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ರಾಣಾ (64) ಅವರನ್ನು ಲಾಸ್ ಏಂಜಲೀಸ್ನ ಮೆಟ್ರೋಪಾಲಿಟನ್ ಬಂಧನ ಕೇಂದ್ರದಲ್ಲಿ ಇರಿಸಲಾಗಿತ್ತು.
26/11ರ ಮುಂಬೈ ದಾಳಿಯ ಆರೋಪಿಯನ್ನು ಭಾರತಕ್ಕೆ ಹಸ್ತಾಂತರಿಸಿರುವುದು ದೇಶ, ಎಂಇಎ ಮತ್ತು ಎನ್ಐಎಗೆ ದೊಡ್ಡ ಸಾಧನೆಯಾಗಿದೆ ಎಂದು ಎನ್ಐಎ ಮಾಜಿ ಡಿಜಿ ಯೋಗೇಶ್ ಚಂದರ್ ಮೋದಿ ಹೇಳಿದ್ದಾರೆ.
26/11 ದಾಳಿಯ ಆರೋಪಿ ನ್ಯಾಯಕ್ಕಾಗಿ ಕಾಯುತ್ತಿರುವುದರಿಂದ ಮೋದಿ ಸರ್ಕಾರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನರೇಂದ್ರ ಮನ್ ಅವರನ್ನು ನೇಮಿಸಿದೆ







