ನವದೆಹಲಿ : ಸಂಸತ್ತಿನ ಬಜೆಟ್ ಅಧಿವೇಶನದ ಆರಂಭದಲ್ಲಿ ಅಧ್ಯಕ್ಷೆ ದ್ರೌಪದಿ ಮುರ್ಮು ಭಾಷಣ ಮಾಡಿದರು, ಮರುದಿನ ಅಂದರೆ ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ಮಧ್ಯಂತರ ಬಜೆಟ್ ಮಂಡಿಸಿದರು. ಇಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಯಾವುದೇ ಗ್ಯಾರಂಟಿ ಇಲ್ಲದ ಕಾಂಗ್ರೆಸ್ ನಾಯಕರು ಮೋದಿಯವರ ಗ್ಯಾರಂಟಿಯನ್ನ ಪ್ರಶ್ನಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ಕಾಲೇಳೆದರು.
ನಮ್ಮ 10 ವರ್ಷಗಳು ಟಾಪ್ 5 ಆರ್ಥಿಕತೆಯಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ನಮ್ಮ ದೊಡ್ಡ ಮತ್ತು ನಿರ್ಣಾಯಕ ನಿರ್ಧಾರಗಳಿಗಾಗಿ ನಾವು ನೆನಪಿನಲ್ಲಿ ಉಳಿಯುತ್ತೇವೆ. ಆ ಸಂಕಷ್ಟದ ಅವಧಿಯಿಂದ ದೇಶವನ್ನ ಹೊರತರಲು ನಾವು ತುಂಬಾ ಶ್ರಮಿಸಿದ್ದೇವೆ ಎಂದರು.
ಇನ್ನು ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯ ಬಲಪಡಿಸಲು ಮೋದಿ 3.0 ಅತ್ಯಗತ್ಯ ಎಂದು ಪ್ರಧಾನಿ ಮೋದಿ ರಾಜ್ಯಸಭೆಯಲ್ಲಿ ಹೇಳಿದರು. ಇನ್ನು ಇದೇ ವೇಳೆ ಸರ್ಕಾರ ಸಾಧನೆಗಳನ್ನ ಸಭಾ ಸದಸ್ಯರ ಮುಂದಿಟ್ಟರು. ಇನ್ನು ತಮ್ಮ 3ನೇ ಅವಧಿಯಲ್ಲಿ ಭಾರತ ವಿಶ್ವದ 3ನೇ ಅತಿದೊಡ್ಡ ಅರ್ಥಿಕತೆಯಾಗುವುದು ಖಂಡಿತ ಎಂದು ಹೇಳಿದರು.
BREAKING : ಚುನಾವಣೆ ಮುನ್ನಾದಿನ ಪಾಕ್’ನಲ್ಲಿ ಸರಣಿ ಬಾಂಬ್ ಸ್ಫೋಟ ; 22 ಮಂದಿ ಸಾವು, ಹಲವರಿಗೆ ಗಾಯ
BREAKING: ‘ದೆಹಲಿ ಚಲೋ’ ವಿರೋಧಿಸಿ ಪ್ರತಿಭಟನೆ: ‘ಬಿವೈ ವಿಜಯೇಂದ್ರ’ ಸೇರಿ ಹಲವು ‘BJP ನಾಯಕ’ರನ್ನು ಪೊಲೀಸರು ಬಂಧನ
BREAKING : ಜಾರ್ಖಂಡ್ ಮಾಜಿ ಸಿಎಂ ‘ಹೇಮಂತ್ ಸೊರೆನ್’ ಮತ್ತೆ 5 ದಿನ ‘ED ಕಸ್ಟಡಿ’ಗೆ ಕಳುಹಿಸಿದ ಕೋರ್ಟ್