Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆದಾಯ ತೆರಿಗೆದಾರರೇ ಗಮನಿಸಿ : ಏ.1 ರಿಂದ ಜಾರಿಗೆ ಬರಲಿದೆ ಈ 10 ಹೊಸ ನಿಯಮಗಳು |New Income tax Rules

14/03/2026 2:06 PM

ಈ ಟಿಪ್ಸ್ ಫಾಲೋ ಮಾಡಿದ್ರೆ ವರ್ಷಗಳ ಹಳೆಯ `ಮೂಲವ್ಯಾಧಿ’ ಒಂದೇ ವಾರದಲ್ಲಿ ಮಾಯ !

14/03/2026 1:50 PM

ಅಮೆರಿಕದ 4 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿಮಾನ ಸಂಚಾರ ಸ್ತಬ್ಧ: ‘ರಾಸಾಯನಿಕ ವಾಸನೆ’ಯಿಂದ ಪ್ರಯಾಣಿಕರಲ್ಲಿ ಆತಂಕ

14/03/2026 1:41 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 127 ಕೋಟಿ ವೆಚ್ಚದಲ್ಲಿ ಶಿಂಷಾ ಎಡ ದಂಡೆಯ ಕೆರೆ, ನಾಲೆಗಳ ಆಧುನೀಕರಣ: ಮದ್ದೂರು ಶಾಸಕ ಕೆ.ಎಂ.ಉದಯ್
KARNATAKA

127 ಕೋಟಿ ವೆಚ್ಚದಲ್ಲಿ ಶಿಂಷಾ ಎಡ ದಂಡೆಯ ಕೆರೆ, ನಾಲೆಗಳ ಆಧುನೀಕರಣ: ಮದ್ದೂರು ಶಾಸಕ ಕೆ.ಎಂ.ಉದಯ್

By kannadanewsnow0913/02/2026 10:43 PM

ಮಂಡ್ಯ : ಶಿಂಷಾ ಎಡ ದಂಡೆ ವ್ಯಾಪ್ತಿಯ ಕೆರೆ ಮತ್ತು ನಾಲೆಗಳ ಆಧುನಿಕರಣಕ್ಕೆ 127 ಕೋಟಿ ರೂ ಅನುದಾನ ಬಿಡುಗಡೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ‌.ಕೆ.ಶಿವಕುಮಾರ್ ಒಪ್ಪಿಗೆ ನೀಡಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಶುಕ್ರವಾರ ಹೇಳಿದರು.

ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಕೆರೆ ಸೌಂದರ್ಯಕರಣ ಕಾಮಗಾರಿಗೆ ಅಂದಾಜು 4 ಕೋಟಿ ವೆಚ್ಚದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಸೋಮನಹಳ್ಳಿ ಕೆರೆಯನ್ನು ಸೌಂದರ್ಯಕರಣ ಮಾಡಲು 4 ಕೋಟಿ ವೆಚ್ಚದಲ್ಲಿ ಚಾಲನೆ ನೀಡಲಾಗಿದ್ದು, ಇದರಲ್ಲಿ ಏರಿ ಅಗಲೀಕರಣ, ವಾಕಿಂಗ್ ಪಾತ್, ಗ್ರಿಲ್ ಹಾಗೂ ವಿದ್ಯುತ್ ಕಂಬಗಳ ನಿರ್ಮಾಣ ಮಾಡಲಾಗುವುದು ಇದರ ಜೊತೆಗೆ ಇನ್ನು ಒಂದು ತಿಂಗಳೊಳಗೆ ಹೆಚ್ಚುವರಿಯಾಗಿ 5 ಕೋಟಿ ಅನುದಾನ ನೀಡಿ ಅದರಲ್ಲಿ ಒತ್ತುವರಿ ತೆರವು, ಹೂಳು ಎತ್ತುವುದು, ಹೊಸ ತೂಬುಗಳ ನಿರ್ಮಾಣ ಹಾಗೂ ಹೆಚ್ಚುವರಿ ನೀರು ತುಂಬಿಸಲು ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಕೆಸ್ತೂರು ಮತ್ತು ಸೋಮನಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ರೈತರಿಗೆ ಯಾವುದೇ ಶಾಶ್ವತ ನೀರಾವರಿ ಯೋಜನೆಗಳಿಲ್ಲ. ಹೀಗಾಗಿ ಶಿಂಷಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಿಸಬೇಕಾಗಿದೆ. ಈ ವ್ಯಾಪ್ತಿಯ ಕೆರೆ ಮತ್ತು ನಾಲೆಗಳು ಸೂಕ್ತ ನಿರ್ವಹಣೆ ಇಲ್ಲದೇ ಸಾಕಷ್ಟು ಶಿಥಿಲಗೊಂಡಿದ್ದು, ಹಾಗಾಗಿ 127 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂದಿನ ಸಭೆಯಲ್ಲಿ ಹಣ ಬಿಡುಗಡೆಗೆ ಒಪ್ಪಿಗೆ ನೀಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭರವಸೆ ನೀಡಿದ್ದಾರೆ ಎಂದರು.

ಈಗಾಗಲೇ ಸೋಮನಹಳ್ಳಿ ಬಳಿ 220 ಕೆ.ವಿ ಸಬ್ ಸ್ಟೇಷನ್ ನಿರ್ಮಾಣ ಮಾಡಲು 180 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅಗ್ರಿಮೆಂಟ್ ಕೂಡ ಆಗಿ ಅಂತಿಮ ಘಟ್ಟಕ್ಕೆ ತಲುಪಿದೆ.
ಇಂಧನ ಸಚಿವ ಕೆ.ಜೆ.ಜಾರ್ಜ್ ಅವರನ್ನು ಶಿಲಾನ್ಯಾಸ ಮಾಡಲು ಆಹ್ವಾನ ಮಾಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಮಾ.6 ರಂದು ರಾಜ್ಯದ ಬಜೆಟ್ ಮಂಡನೆ ಮಾಡುತ್ತಿದ್ದು, ಈಗಾಗಲೇ ಕ್ಷೇತ್ರದ ಹಲವು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುವಂತೆ ವಿವಿಧ ಇಲಾಖೆಗಳ ಸಚಿವರಿಗೆ ಮನವಿ ಮಾಡಿದ್ದೇನೆ. ಅದರಲ್ಲಿ ಮುಖ್ಯವಾಗಿ ತಾಲೂಕು ಆಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ಸಾಕಷ್ಟು ಒತ್ತಡ ಉಂಟಾಗುತ್ತಿದ್ದು,
ಹೀಗಾಗಿ ಮೇಲ್ದರ್ಜೆಗೆರಿಸಲು 30 ಕೋಟಿ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತೋಟಗಾರಿಕೆ ಇಲಾಖೆ ಜಾಗದಲ್ಲಿ ಟ್ರಾಮಾಕೇರ್ ( ಆಸ್ಪತ್ರೆ )ಸೆಂಟರ್ ತೆರಯಲು 5 ಎಕರೆ ಜಮೀನನ್ನು ಮೀಸಲಿಡಲಾಗಿದ್ದು, ಸರ್ಕಾರದ ಹಂತದಲ್ಲಿ ಪತ್ರ ವ್ಯವಹಾರ ಕೂಡ ನಡೆಯುತ್ತಿದೆ ಎಂದು ಹೇಳಿದರು.

ಮದ್ದೂರು ನಗರದಲ್ಲಿಯೇ ಡಿವೈಎಸ್ಪಿ ಸಬ್ ಡಿವಿಷನ್ ಕಛೇರಿ ತೆರೆಯಲು ಅಂತಿಮ ಘಟ್ಟದಲ್ಲಿತ್ತು. ಆದರೆ ಕೆಲವು ಕಾರಣಾಂತರಗಳಿಂದ ಕೈ ತಪ್ಪಿದ್ದು, ಗೃಹ ಸಚಿವರನ್ನು ಭೇಟಿ ಮಾಡಿ ಅನುಮೋದನೆ ಪಡೆಯಲಾಗುವುದು. ಹಾಗೂ ತಾಲೂಕು ಕ್ರೀಡಾಂಗಣದ ಅಭಿವೃದ್ಧಿಗೆ 9 ಕೋಟಿ ರೂ ಅನುದಾನ ಬಿಡುಗಡೆಗೆ ಸದನದಲ್ಲೂ ಪ್ರಸ್ತಾಪ ಮಾಡಿದ್ದೆ. ಆದರೆ, ಸಚಿವರು ತಾಲೂಕು ಕ್ರೀಡಾಂಗಣಕ್ಕೆ ಅಷ್ಟೊಂದು ಅನುದಾನ ನೀಡಲು ಸಾಧ್ಯವಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ಅಭಿವೃದ್ಧಿ ಮಾಡಲು ಅನುದಾನ ನೀಡುತ್ತಿದ್ದು, ನಗರದ ವ್ಯಾಪ್ತಿಯಲ್ಲಿಯೇ‌ 10 ಎಕರೆ ವಿಸ್ತೀರ್ಣದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣ ಮಾಡಲು ಸರ್ವೆ ಪ್ರಕ್ರಿಯೆ ನಡೆಯುತ್ತಿದ್ದು, ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಭರವಸೆ ನೀಡಿದರು.

ಇದೇ ವೇಳೆ ಗ್ರಾ.ಪಂ ಮಾಜಿ ಅಧ್ಯಕ್ಷ ಸಿ.ಟಿ‌.ಶಂಕರ್, ಮನ್ ಮುಲ್ ನಿರ್ದೇಶಕ ಹರೀಶ್ ಬಾಬು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್‌.ಎಚ್.ರಾಜೇಂದ್ರ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಪ್ರೀತಂ, ಕೆಡಿಪಿ ಸದಸ್ಯ ಸಿದ್ದರಾಜು ಮುಖಂಡರಾದ ಚಿಕ್ಕೇಗೌಡ, ಕೆ.ಎಂ.ರವಿ, ಸಿಪಾಯಿ ಶ್ರೀನಿವಾಸ್, ಪ್ರವೀಣ್, ಚಂದ್ರು, ಶಂಕರ್, ಅಪ್ಪೇಗೌಡ, ಸುರೇಶ್, ರಮೇಶ್ ಮತ್ತಿತರರು ಇದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

Share. Facebook Twitter LinkedIn WhatsApp Email

Related Posts

ಈ ಟಿಪ್ಸ್ ಫಾಲೋ ಮಾಡಿದ್ರೆ ವರ್ಷಗಳ ಹಳೆಯ `ಮೂಲವ್ಯಾಧಿ’ ಒಂದೇ ವಾರದಲ್ಲಿ ಮಾಯ !

14/03/2026 1:50 PM2 Mins Read

ALERT : ನೀವು ಬಳಸುವ `ಅಡುಗೆ ಎಣ್ಣೆ’ ಅಸಲಿಯೇ ಅಥವಾ ನಕಲಿಯೇ? ಮನೆಯಲ್ಲೇ ಹೀಗೆ ಪರೀಕ್ಷಿಸಿ !

14/03/2026 1:30 PM2 Mins Read

Ugadi 2026 : ಯುಗಾದಿ ಹಬ್ಬದ ಮಹತ್ವ, ದಿನಾಂಕ, ಪೂಜಾ ಸಮಯ, ಆಚರಣೆಯ ವಿಧಿ ವಿಧಾನಗಳು ಹೀಗಿವೆ !

14/03/2026 1:16 PM2 Mins Read
Recent News

ಆದಾಯ ತೆರಿಗೆದಾರರೇ ಗಮನಿಸಿ : ಏ.1 ರಿಂದ ಜಾರಿಗೆ ಬರಲಿದೆ ಈ 10 ಹೊಸ ನಿಯಮಗಳು |New Income tax Rules

14/03/2026 2:06 PM

ಈ ಟಿಪ್ಸ್ ಫಾಲೋ ಮಾಡಿದ್ರೆ ವರ್ಷಗಳ ಹಳೆಯ `ಮೂಲವ್ಯಾಧಿ’ ಒಂದೇ ವಾರದಲ್ಲಿ ಮಾಯ !

14/03/2026 1:50 PM

ಅಮೆರಿಕದ 4 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿಮಾನ ಸಂಚಾರ ಸ್ತಬ್ಧ: ‘ರಾಸಾಯನಿಕ ವಾಸನೆ’ಯಿಂದ ಪ್ರಯಾಣಿಕರಲ್ಲಿ ಆತಂಕ

14/03/2026 1:41 PM

ALERT : ನೀವು ಬಳಸುವ `ಅಡುಗೆ ಎಣ್ಣೆ’ ಅಸಲಿಯೇ ಅಥವಾ ನಕಲಿಯೇ? ಮನೆಯಲ್ಲೇ ಹೀಗೆ ಪರೀಕ್ಷಿಸಿ !

14/03/2026 1:30 PM
State News
KARNATAKA

ಈ ಟಿಪ್ಸ್ ಫಾಲೋ ಮಾಡಿದ್ರೆ ವರ್ಷಗಳ ಹಳೆಯ `ಮೂಲವ್ಯಾಧಿ’ ಒಂದೇ ವಾರದಲ್ಲಿ ಮಾಯ !

By kannadanewsnow5714/03/2026 1:50 PM KARNATAKA 2 Mins Read

ಮೂಲವ್ಯಾಧಿ (Piles) ಎನ್ನುವುದು ಸಾಮಾನ್ಯವಾದರೂ ಅತ್ಯಂತ ನೋವಿನಿಂದ ಕೂಡಿದ ಆರೋಗ್ಯ ಸಮಸ್ಯೆಯಾಗಿದೆ. ಮಲದ್ವಾರದ ಭಾಗದಲ್ಲಿ ರಕ್ತನಾಳಗಳ ಬಾವು ಮತ್ತು ರಕ್ತಸ್ರಾವ…

ALERT : ನೀವು ಬಳಸುವ `ಅಡುಗೆ ಎಣ್ಣೆ’ ಅಸಲಿಯೇ ಅಥವಾ ನಕಲಿಯೇ? ಮನೆಯಲ್ಲೇ ಹೀಗೆ ಪರೀಕ್ಷಿಸಿ !

14/03/2026 1:30 PM

Ugadi 2026 : ಯುಗಾದಿ ಹಬ್ಬದ ಮಹತ್ವ, ದಿನಾಂಕ, ಪೂಜಾ ಸಮಯ, ಆಚರಣೆಯ ವಿಧಿ ವಿಧಾನಗಳು ಹೀಗಿವೆ !

14/03/2026 1:16 PM

ಕೆಎಸ್‌ಆರ್‌ಟಿಸಿ ಅನುಕಂಪದ ಆಧಾರದ ನೇಮಕಾತಿ: ಇನ್ಮುಂದೆ ಮೃತ ನೌಕರರ ಮಗಳು, ಸಹೋದರಿಗೂ ಉದ್ಯೋಗ

14/03/2026 12:53 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.