ಬೆಂಗಳೂರು : ಸಾರ್ವತ್ರಿಕ ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿದ ‘ಮಾದರಿ ನೀತಿ ಸಂಹಿತೆ’ ಹಿನ್ನೆಲೆಯಲ್ಲಿ, ನಿಗಮದ ಬಸ್ ನಿಲ್ದಾಣಗಳಲ್ಲಿ ಮತ್ತು ಬಸ್ಸುಗಳ ಮೇಲಿನ ಜಾಹೀರಾತುಗಳನ್ನು ತೆರವುಗೊಳಿಸುವಂತೆ ಆದೇಶಿಸಲಾಗಿದೆ.
ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ, ಸಾರ್ವತ್ರಿಕ ಲೋಕಸಭಾ ಚುನಾವಣೆ- 2024 ರ ವೇಳಾಪಟ್ಟಿಯು ದಿನಾಂಕ 16-03-2024 ರಂದು ಘೋಷಣೆಯಾಗಿದ್ದು, ‘ಮಾದರಿ ನೀತಿ ಸಂಹಿತೆ’ ತಕ್ಷಣದಿಂದಲೇ ಜಾರಿಯಾಗಿರುತ್ತದೆ. ಆದುದರಿಂದ. ನಿಗಮದ ಬಸ್ ನಿಲ್ದಾಣಗಳು / ಘಟಕಗಳು ಮತ್ತು ಬಸ್ಸುಗಳ ಮೇಲಿನ ಜಾಹೀರಾತುಗಳನ್ನು ತೆರವುಗೊಳಿಸುವ ಸಂಬಂಧ, ಕೆಳಕಂಡಂತೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.
- ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ನಿಗಮದ ಬಸ್ಸುಗಳ ಮೇಲೆ, ಹಾಗೂ ಬಸ್ ನಿಲ್ದಾಣ / ಘಟಕಗಳಲ್ಲಿ ಹೋರ್ಡಿಂಗ್ಸ್ ಮತ್ತು ಗ್ಲೋಸೈನ್ ಫಲಕಗಳಲ್ಲಿ, ಯಾವುದೇ ರಾಜಕೀಯ ನೇತಾರರ ಭಾವಚಿತ್ರ / ರಾಜಕೀಯ ಪಕ್ಷ / ವ್ಯಕ್ತಿ / ವಿಷಯಗಳಿಗೆ ಸಂಬಂಧಿಸಿದ ಜಾಹೀರಾತುಗಳು ಇದ್ದಲ್ಲಿ ಅವುಗಳನ್ನು ಕೂಡಲೇ ತೆರವುಗೊಳಿಸಲು ಅಗತ್ಯ ಕ್ರಮ ವಹಿಸುವುದು.
- ಚುನಾವಣೆ ನೀತಿ ಸಂಹಿತೆ ಮುಕ್ತಾಯವಾಗುವವರೆಗೆ, ನಿಗಮದ ಬಸ್ಸುಗಳ ಮೇಲೆ, ಬಸ್ ನಿಲ್ದಾಣ / ಘಟಕಗಳಲ್ಲಿ ಹೋರ್ಡಿಂಗ್ಸ್ ಮತ್ತು ಗ್ಲೋಸೈನ್ ಫಲಕಗಳಲ್ಲ. ಯಾವುದೇ ರಾಜಕೀಯ ನೇತಾರರ ಭಾವಚಿತ್ರ / ರಾಜಕೀಯ ಪಕ್ಷ / ವ್ಯಕ್ತಿ / ವಿಷಯಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು ಪ್ರದರ್ಶಿಸದಂತೆ ಕ್ರಮ ವಹಿಸುವುದು.
- ಒಂದು ವೇಳೆ ಚುನಾವಣೆ ನೀತಿ ಸಂಹಿತೆ ಜಾರಿಯ ಅವಧಿಯಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದಲ್ಲ, ಚುನಾವಣಾ ಆಯೋಗದ ಕ್ರಮಕ್ಕೆ ಸಂಬಂಧಿಸಿದವರನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು.
ಮೇಲಿನಂತೆ ಅಗತ್ಯ ಕ್ರಮ ತೆಗೆದುಕೊಂಡು, ದಿನಾಂಕ 18-03-2024 ರಂದು ಬೆಳಗ್ಗೆ 11.00 ಗಂಟೆಯೊಳಗಾಗಿ, ಅನುಸರಣಾ ವರದಿ ನೀಡಲು ಕೋರಲಾಗಿದೆ.