ಬಳ್ಳಾರಿ : 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ನಕಲು ತಡೆಗಟ್ಟುವ ಮೂಲಕ ಜಿಲ್ಲೆಯ ಫಲಿತಾಂಶವನ್ನು ಉತ್ತಮಪಡಿಸಲು ಮತ್ತು ವಿದ್ಯಾರ್ಥಿಗಳ ಕಲಿಕಾ ಗೊಂದಲಗಳನ್ನು ಪರಿಹರಿಸಲು ಮಾ.09 ರಿಂದ ಪರೀಕ್ಷೆ ಪ್ರಾರಂಭವಾಗುವವರೆಗೆ ಪ್ರತಿದಿನ ಬೆಳಿಗ್ಗೆ 09 ರಿಂದ ಸಂಜೆ 06 ಗಂಟೆಯವರೆಗೆ (ಭಾನುವಾರ ಮತ್ತು ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ) ವಿಶೇಷ ‘ಮೊಬೈಲ್ ಫೋನ್-ಇನ್’ ಸಹಾಯವಾಣಿ ಕಾರ್ಯಕ್ರಮ ಆಯೋಜಿಸಲಾಗಿದೆ.
ವಿದ್ಯಾರ್ಥಿಗಳಿಗಾಗಿ ತಮಗೆ ಗೊಂದಲಗಳಿರುವ ಪ್ರತಿ ವಿಷಯದ ಕ್ಲಿಷ್ಟಾಂಶಗಳನ್ನು ಸುಲಭವಾಗಿ ಮನವರಿಕೆ ಮಾಡಿಕೊಡಲು ಅನುಭವಿ ಸಂಪನ್ಮೂಲ ಶಿಕ್ಷಕರ ತಂಡವನ್ನು ನೇಮಿಸಲಾಗಿದೆ. ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ತಂಡದಲ್ಲಿ ಇರಲಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷಾ ಭಯ ಹೋಗಲಾಡಿಸಿ, ವಿಷಯವಾರು ತಮಗಿರುವ ಸಂದೇಹಗಳನ್ನು ದೂರವಾಣಿ ಕರೆಯ ಮೂಲಕ ನೇರವಾಗಿ ಶಿಕ್ಷಕರಿಂದ ಪರಿಹರಿಸಿಕೊಳ್ಳಬಹುದು.
*ವಿಷಯವಾರು ಸಂಪನ್ಮೂಲ ಶಿಕ್ಷಕರು ಮತ್ತು ಅವರ ಮೊಬೈಲ್ ವಿವರ(ಶಾಲಾ ನಡೆಯುವ ವೇಳೆಯಲ್ಲಿ):*
*ಇಂಗ್ಲಿಷ್ ವಿಷಯ:*
ಪ್ರತಿ ಸೋಮವಾರ ಶಾಲೆ ನಡೆಯುವ ವೇಳೆಯಲ್ಲಿ ಮಾಹಿತಿಗಾಗಿ ಬಳ್ಳಾರಿ ಬಾಪೂಜಿನಗರ ಸರ್ಕಾರಿ ಪ್ರೌಢಶಾಲೆಯ ಮಧುಸೂಧನ್ ಮೊ.8792134436, ಅಂದ್ರಾಳ್ ಸರ್ಕಾರಿ ಪ್ರೌಢಶಾಲೆಯ ವಿಜಯಭೂಷಣ ಜೋಶಿ ಮೊ.9844394840, ಬಳ್ಳಾರಿ ವಿಡಿಎಚ್‌ಎಲ್ ಬಿ.ಆರ್.ಮಹೇಶ ಮೊ.9448632895, ಮಿಲ್ಲರಪೇಟೆಯ ಸರ್ಕಾರಿ ಉರ್ದು ಪ್ರೌಢಶಾಲೆಯ ರೋಜಲಿಯಾ ಮೊ.9900518696. ತಂಡದ ಮೇಲ್ವಿಚಾರಕರಾಗಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸಿ.ಕೊಟ್ರೇಶ್ (ಮೊ.6363232825) ಇರುವರು.
*ಗಣಿತ ವಿಷಯ:*
ಪ್ರತಿ ಮಂಗಳವಾರ ಶಾಲಾ ನಡೆಯುವ ವೇಳೆಯಲ್ಲಿ ಬಸಮ್ಮ ಅನುದಾನಿತ ಪ್ರೌಢಶಾಲೆಯ ಬಿ.ಎಂ.ನಾಗರಾಜಯ್ಯ ಮೊ.9986861964, ಡಿ.ಅಂತಾಪುರ ಸರ್ಕಾರಿ ಪ್ರೌಢಶಾಲೆಯ ಕೆ.ವಿ.ಆನಂದ ಮೊ.9886680134/9019870324, ಹಿರಾಳ್‌ಕುಡಂ ಸರ್ಕಾರಿ ಉರ್ದು ಪ್ರೌಢಶಾಲೆಯ ಸೈಯದ್ ಇರ್ಫಾನ್ ಮೊ.9481047568, ಕುರುಗೋಡು ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಅರುಣ್ ಮೊ.9844080610, ಕೊಳಗಲ್ ಸರ್ಕಾರಿ ಪ್ರೌಢಶಾಲೆಯ ಜಯರಾಜ್.ಕೆ.ಆರ್ ಮೊ.9845002181, ತಂಡದ ಮೇಲ್ವಿಚಾರಕರಾಗಿ ಎಸ್‌ಎಸ್‌ಕೆ ಕಚೇರಿಯ ಡಿವೈಪಿಸಿಯ ಕೃಷ್ಣಯ್ಯ ಶೆಟ್ಟಿ (ಮೊ.9449312565) ಇರುವರು.
*ಸಮಾಜ ವಿಜ್ಞಾನ ವಿಷಯ:*
ಪ್ರತಿ ಬುಧವಾರ ಎಸ್‌ಇಎಸ್ ಬಾಲಕಿಯರ ಪ್ರೌಢಶಾಲೆಯ ಕಲ್ಲಯ್ಯ ಹಿರೇಮಠ ಮೊ.9164516695, ಕುರುಗೋಡು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಶ್ರೀಕಾಂತ ಮೊ.9481436365, ಬಳ್ಳಾರಿ ತಾಲ್ಲೂಕು ಹಗರಿಫಾರಂ ಸರ್ಕಾರಿ ಪ್ರೌಢಶಾಲೆಯ ಹೆಚ್.ಈಶ್ವರಪ್ಪ ಮೊ.9449300605, ಜಾನೆಕುಂಟೆ ಸರ್ಕಾರಿ ಪ್ರೌಢಶಾಲೆಯ ರಾಜಶೇಖರ ಗೌಡ.ಹೆಚ್ ಮೊ.9481415847, ತೋರಣಗಲ್ಲು ಸರ್ಕಾರಿ ಪ್ರೌಢಶಾಲೆಯ ದೊಡ್ಡಬಸವ ಮೊ.9110228893, ಎಂ.ಸೂಗೂರು ಸರ್ಕಾರಿ ಪ್ರೌಢಶಾಲೆಯ ದೇವಪ್ಪ ಮೊ.998075610, ಮಿಲ್ಲರಪೇಟೆಯ ಸರ್ಕಾರಿ ಉರ್ದು ಪ್ರೌಢಶಾಲೆಯ ಜಮೇದಾರ್.ಆರ್.ಕೆ ಮೊ.9480993366. ತಂಡದ ಮೇಲ್ವಿಚಾರಕ ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕ ಹಾಗೂ ಚಾಗನೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಈರಣ್ಣ ಬಡಿಗೇರ್ (ಮೊ.9449134937) ಗೆ ಸಂಪರ್ಕಿಸಬಹುದು.
*ವಿಜ್ಞಾನ ವಿಷಯ:*
ಪ್ರತಿ ಗುರುವಾರ ಸಂಡೂರು ಛತ್ರಪತಿ ಶಿವಾಜಿ ವಿದ್ಯಾಮಂದಿರ ವಿಶ್ವನಾಥ.ಎಂ. ಮೊ.8660768012/9449139577, ಬಳ್ಳಾರಿಯ ಕಪ್ಪಗಲ್ ರಸ್ತೆಯ ಪ್ರೌಢಶಾಲೆಯ ವಿಶ್ವನಾಥ ಮೊ.9591566856, ಬಳ್ಳಾರಿ ಪೂರ್ವ ಹಗರಿಫಾರಂ ಸರ್ಕಾರಿ ಪ್ರೌಢಶಾಲೆಯ ಗಾದಿಲಿಂಗಪ್ಪ ಮೊ.9481435994, ಅನುದಾನಿತ ಉರ್ದು ಪ್ರೌಢಶಾಲೆಯ ವಾಯಿದಾ ಗಾಲಿಬ್ ಮೊ.9380565461, ದಮ್ಮೂರು ಸರ್ಕಾರಿ ಪ್ರೌಢಶಾಲೆಯ ಸುಮ ಮೊ.9663592157, ತಂಡದ ಮೇಲ್ವಿಚಾರಕ ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕಿ ವೇದಾವತಿ (ಮೊ.9620056204) ಇರುವರು.
*ಕನ್ನಡ ವಿಷಯ:*
ಪ್ರತಿ ಶುಕ್ರವಾರ ಬಂಡಿಹಟ್ಟಿಯ ಸರ್ಕಾರಿ ಪ್ರೌಢಶಾಲೆಯ ರಾಧ ಮೊ.8095753184, ಕಪ್ಪಗಲ್ ಸರ್ಕಾರಿ ಪ್ರೌಢಶಾಲೆಯ ನೇತ್ರಾ ಮೊ.8217871764, ಕೋಳುರು ಸರ್ಕಾರಿ ಪ್ರೌಢಶಾಲೆಯ ಹುಲೆಪ್ಪ ಮೊ.9483480302, ಮಿಲ್ಲರಪೇಟೆ ಸರ್ಕಾರಿ ಉರ್ದು ಪ್ರೌಢಶಾಲೆಯ ಹನುಮಪ್ಪ ಮೊ.9008474366, ಬಳ್ಳಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಹರಿಪ್ರಸಾದ್ ಮೊ.8722517436. ತಂಡದ ಮೇಲ್ವಿಚಾರಕ ಉಪನಿರ್ದೇಶಕರ ಕಚೇರಿಯ ಕ್ಷೇತ್ರ ಶಿಕ್ಷಣಾಧಿಕಾರಿ (ಮೊ.9742406665) ಇರುವರು.
*ಹಿಂದಿ ವಿಷಯ:*
ಪ್ರತಿ ಶನಿವಾರ ಬಳ್ಳಾರಿಯ ರೇಡಿಯೋ ಪಾರ್ಕ್ ಸರ್ಕಾರಿ ಪ್ರೌಢಶಾಲೆಯ ಟಿ.ಲಕ್ಷಿö್ಮÃ ಮೊ.9480753806, ಬಂಡಿಹಟ್ಟಿ ಪ್ರೌಢಶಾಲೆಯ ರಾಮತುಳಸಿ ಮೊ.9880842333, ಬಳ್ಳಾರಿ ಎಸ್.ಆರ್.ಕಾಲೋನಿ ಸರಕಾರಿ ಪ್ರೌಢಶಾಲೆಯ ಮೆಹಬೂಬ್ ಬಾಷಾ ಮೊ.9739458747. ತಂಡದ ಮೇಲ್ವಿಚಾರಕ ಎಪಿಸಿಎಸ್‌ಎಸ್‌ಕೆ ಕಚೇರಿಯ ಶಕೀಲ್ ಅಹಮ್ಮದ್ (ಮೊ.9916992857) ಇರುವರು.
ಮಾಹಿತಿಗಾಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ದೂ.08392-268239 ಹಾಗೂ ಮೊ.9448999329 ಗೆ ಸಂಪರ್ಕಿಸಬಹುದು.
ಬಳ್ಳಾರಿ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶವು ರಾಜ್ಯ ಮಟ್ಟದಲ್ಲಿ ಉತ್ತಮ ಸ್ಥಾನ ಪಡೆಯುವಂತಾಗಲು ಪ್ರತಿಯೊಬ್ಬ ವಿದ್ಯಾರ್ಥಿಯು ಈ ಸಹಾಯವಾಣಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬಿ.ಉಮಾದೇವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








