Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಟ್ರಂಪ್ ಗಡುವು ಮುಗಿಯಲು ಕ್ಷಣಗಣನೆಗೆ ಮೊದಲು ವಿದ್ಯುತ್ ಸ್ಥಾವರಗಳ ರಕ್ಷಣೆಗೆ ಇರಾನ್ ಜನತೆಯ ‘ಮಾನವ ಸರಪಳಿ’!

08/04/2026 9:05 AM

SHOCKING : ಗೊರಕೆ ಹೊಡೆಯುವವರಿಗೆ ಶೇ. 71 ರಷ್ಟು `ಹೃದಯಾಘಾತ’ ಸಂಭವಿಸುವ ಸಾಧ್ಯತೆ : ವರದಿ

08/04/2026 9:00 AM

ಶಾಲೆಗಳಲ್ಲಿ `ಮೊಬೈಲ್’ ಬ್ಯಾನ್ ಮಾಡಿದ್ರೆ ಮಕ್ಕಳ ನಡವಳಿಕೆಯಲ್ಲಿ ಮಹತ್ತರ ಸುಧಾರಣೆ : ವರದಿ

08/04/2026 8:57 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವಗೆ ಈ ಪ್ರಶ್ನೆ ಹಾಕಿದ MLC ರಮೇಶ್ ಬಾಬು, ಉತ್ತರಿಸ್ತಾರಾ?
KARNATAKA

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವಗೆ ಈ ಪ್ರಶ್ನೆ ಹಾಕಿದ MLC ರಮೇಶ್ ಬಾಬು, ಉತ್ತರಿಸ್ತಾರಾ?

By kannadanewsnow0909/02/2026 2:21 PM

ಬೆಂಗಳೂರು: ಕೇಂರ್ದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕರ್ನಾಟಕದ ರೈಲ್ವೆ ಯೋಜನೆಗಳ ಕುರಿತಂತೆ ಕೆಲ ಪ್ರಶ್ನೆಗಳನ್ನು ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಇಟ್ಟಿದ್ದಾರೆ. ಆ ಪ್ರಶ್ನೆಗಳಿಗೆ ಉತ್ತರಿಸ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಎಂಎಲ್ಸಿ ರಮೇಶ್ ಬಾಬು ಅವರು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಕರ್ನಾಟಕದ ರೈಲ್ವೆ ಯೋಜನೆಗಳ ಕುರಿತು ಸುಳ್ಳು ಪ್ರಚಾರದ ಜೊತೆಗೆ ಸುಳ್ಳು ಹೇಳಿಕೆ ನೀಡಿರುತ್ತಾರೆ. ಕೇಂದ್ರ ಬಿಜೆಪಿ ಕರ್ನಾಟಕದ ಮೇಲೆ ರೈಲ್ವೆ ಯೋಜನೆಗಳಾಗಲಿ, ಕೇಂದ್ರದ ಯೋಜನೆಗಳಾಗಲಿ, ಕೇಂದ್ರದ ಅನುದಾನಗಳಾಗಲಿ ಅಥವಾ ಸಹಾಯಧನವಾಗಲಿ ನೀಡುವ ಕುರಿತು ನಿರಂತರ ಅನ್ಯಾಯ ಮಾಡುತ್ತಿದೆ ಎಂದಿದ್ದಾರೆ.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ “ಬುಲೆಟ್ ಟ್ರೈನ್ ಕಾರಿಡಾರ್‌ಗಳಿಂದ ಕರ್ನಾಟಕಕ್ಕೆ ಲಾಭ” ಎಂದು ಹೇಳಿರುವುದು ಪೂರ್ಣ ಸುಳ್ಳು ಅಸಂಬದ್ಧ ಮತ್ತು ಜನರನ್ನು ದಾರಿ ತಪ್ಪಿಸುವ ಪ್ರಚಾರವಾಗಿದೆ. ಇತರೆ ರಾಜ್ಯಗಳಿಗೆ ನೀಡಿರುವ ಯೋಜನೆಗಳಲ್ಲಿ ಮುಂದುವರೆದ ಭಾಗವಾಗಿ ಕರ್ನಾಟಕವನ್ನು ತಲುಪುತ್ತಿರುವ ರೈಲು ಯೋಜನೆಗಳಿಗೆ ಕರ್ನಾಟಕಕ್ಕೆ ನೀಡಿರುವ ಯೋಜನೆಗಳ ರೀತಿಯಲ್ಲಿ ಹಳಿತಪ್ಪಿಸುವ ಪ್ರಯತ್ನದಲ್ಲಿ ಹೇಳಿಕೆ ನೀಡಿರುತ್ತಾರೆ. ಬುಲೆಟ್ ಟ್ರೈನ್ ಕಾರಿಡಾರ್ ಕರ್ನಾಟಕಕ್ಕೆ ಲಾಭವಾಗುತ್ತದೆ ಎನ್ನುವುದು ರಾಜಕೀಯ ವಂಚನೆ ಹೊರತು ಇನ್ನೇನೂ ಅಲ್ಲ ಎಂದು ಗುಡುಗಿದ್ದಾರೆ.

ಕೇಂದ್ರ ಸರ್ಕಾರವು ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ, ಆಗಿನ ರೈಲ್ವೆ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕಕ್ಕಾಗಿ ಪ್ರಸ್ತಾಪಿಸಿದ್ದ ಅನೇಕ ಮಹತ್ವದ ರೈಲ್ವೆ ಯೋಜನೆಗಳನ್ನು ಇಂದಿನವರೆಗೆ ಜಾರಿಗೆ ತರಲು ವಿಫಲವಾಗಿದೆ ಎಂದಿದ್ದಾರೆ.

ಹೊಸ ರೈಲು ಮಾರ್ಗಗಳು, ಡಬ್ಲಿಂಗ್ ಮತ್ತು ಎಲೆಕ್ಟ್ರಿಫಿಕೇಶನ್ ಯೋಜನೆಗಳು, ಉತ್ತರ ಕರ್ನಾಟಕ–ಹೈದರಾಬಾದ್, ಕಲಬುರಗಿ–ಬೀದರ್, ಹುಬ್ಬಳ್ಳಿ–ಅಂಕೋಲಾ ಮುಂತಾದ ಸಂಪರ್ಕ ಯೋಜನೆಗಳು, ದಕ್ಷಿಣ ಪಶ್ಚಿಮ ರೈಲ್ವೆ ವಲಯದ ಬಲವರ್ಧನೆ ಈ ಎಲ್ಲಾ ಯೋಜನೆಗಳು ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ವರ್ಷಗಳ ಕಾಲ ಧೂಳು ತಿನ್ನುತ್ತಿವೆ. ಇದು ಕೇವಲ ಆಡಳಿತ ವೈಫಲ್ಯವಲ್ಲ, ಕರ್ನಾಟಕದ ವಿರುದ್ಧದ ಕೇಂದ್ರ ಬಿಜೆಪಿ ಸರ್ಕಾರದ ರಾಜಕೀಯ ಪ್ರತೀಕಾರ ಎಂಬುದಾಗಿ ಹೇಳಿದ್ದಾರೆ.

ಬಿಜೆಪಿಯ ಒಳಗುಂಪುಗಾರಿಕೆಯ ಇನ್ನೊಂದು ಸ್ಪಷ್ಟ ಉದಾಹರಣೆ ಎಂದರೆ ಕರ್ನಾಟಕಕ್ಕೆ ಸಂಬಂಧಿಸಿದ ರೈಲ್ವೆ ವಿಷಯದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕದ ರೈಲ್ವೆ ರಾಜ್ಯ ಸಚಿವರಾದ ಶ್ರೀ ಸೋಮಣ್ಣ ಅವರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸದೇ ಇರುವುದು. ಇದು ಕೇವಲ ಶಿಷ್ಟಾಚಾರದ ಉಲ್ಲಂಘನೆ ಅಲ್ಲ. ಬಿಜೆಪಿಯ ಒಳಜಗಳ, ಗುಂಪುಗಾರಿಕೆ ಮತ್ತು ಕರ್ನಾಟಕದ ನಾಯಕರನ್ನು ತುಳಿದು ಹಾಕುವ ಮನಸ್ಥಿತಿಯ ಪ್ರತಿಬಿಂಬ ಎಂಬುದಾಗಿ ಕಿಡಿಕಾರಿದ್ದಾರೆ.

ಕರ್ನಾಟಕದ ವಿಷಯದ ಮೇಲೆ ಕರ್ನಾಟಕದ ಸಚಿವರೇ ಇಲ್ಲದೆ ಪತ್ರಿಕಾಗೋಷ್ಠಿ ಯಾಕೆ? ಇದು ಕೇಂದ್ರ ಸರ್ಕಾರದ ತೀರ್ಮಾನವೇ, ಅಥವಾ ಬಿಜೆಪಿ ಒಳರಾಜಕೀಯದ ಫಲವೇ? ಉತ್ತರ ಭಾರತದ ರಾಜ್ಯಗಳಿಗೆ ಸಾವಿರಾರು ಕೋಟಿ ರೂ. ಯೋಜನೆಗಳು, ಕರ್ನಾಟಕಕ್ಕೆ ಮಾತ್ರ ಭ್ರಮೆ ಮತ್ತು ಸುಳ್ಳು ಹೇಳಿಕೆಗಳೇ? ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಕರ್ನಾಟಕದ ಜನತೆಗೆ ಸ್ಪಷ್ಟ ಉತ್ತರ ಕೊಡಬೇಕು ಎಂದಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವಧಿಯಲ್ಲಿ ಪ್ರಸ್ತಾಪಿಸಲಾದ ಯೋಜನೆಗಳನ್ನು ಯಾಕೆ ಜಾರಿಗೆ ತರಲಾಗಿಲ್ಲ? ಕರ್ನಾಟಕಕ್ಕೆ ನೀಡಬೇಕಾದ ನ್ಯಾಯಸಮ್ಮತ ರೈಲ್ವೆ ಅನುದಾನವನ್ನು ಯಾಕೆ ತಡೆಹಿಡಿಯಲಾಗಿದೆ? ಸೋಮಣ್ಣರನ್ನು ಪತ್ರಿಕಾಗೋಷ್ಠಿಯಿಂದ ದೂರವಿಟ್ಟ ಹಿನ್ನಲೆಯಲ್ಲಿ ಯಾರು ಹೊಣೆ? ಎಂದು ಕೇಳಿದ್ದಾರೆ.

ಕರ್ನಾಟಕವನ್ನು ಎರಡನೇ ದರ್ಜೆಯ ರಾಜ್ಯವಾಗಿ ಕಾಣುವ ಈ ಧೋರಣೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಇದು ಕೇವಲ ಅಭಿವೃದ್ಧಿಯ ಪ್ರಶ್ನೆಯಲ್ಲ. ನ್ಯಾಯ, ಗೌರವ ಮತ್ತು ಫೆಡರಲಿಸಂ ಮೇಲಿನ ದಾಳಿ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಕಾರಣಕ್ಕೆ ಪದೇಪದೇ ಇಂತಹ ಅನ್ಯಾಯಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ಮೇಲೆ ನಡೆಸುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರದ ಈ ಕ್ರಮವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಖಂಡಿಸಿದ್ದಾರೆ.

ರೈಲ್ವೆ ಪ್ರಯಾಣಿಕರ ಗಮನಕ್ಕೆ: ಮೈಸೂರು ವಿಭಾಗದ ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ

Share. Facebook Twitter LinkedIn WhatsApp Email

Related Posts

ನಾಳೆ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ : `ವೋಟರ್ ಐಡಿ’ ಇಲ್ಲದಿದ್ದರೆ ಈ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು.!

08/04/2026 8:47 AM1 Min Read

ಸಾರ್ವಜನಿಕರೇ ಗಮನಿಸಿ : `ಡಿಜಿಟಲ್ ಅರೆಸ್ಟ್’ಗೆ ಒಳಗಾಗಿದ್ದರೆ ಭಯ ಬೇಡ, ಜಸ್ಟ್ ಹೀಗೆ ದೂರು ಸಲ್ಲಿಸಿ.!

08/04/2026 8:20 AM1 Min Read

ಮಾನಸಿಕ ಆರೋಗ್ಯ ಮತ್ತು ನೆಮ್ಮದಿಯ ಜೀವನಕ್ಕಾಗಿ ಈ 9 ದೈನಂದಿನ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

08/04/2026 8:00 AM2 Mins Read
Recent News

ಟ್ರಂಪ್ ಗಡುವು ಮುಗಿಯಲು ಕ್ಷಣಗಣನೆಗೆ ಮೊದಲು ವಿದ್ಯುತ್ ಸ್ಥಾವರಗಳ ರಕ್ಷಣೆಗೆ ಇರಾನ್ ಜನತೆಯ ‘ಮಾನವ ಸರಪಳಿ’!

08/04/2026 9:05 AM

SHOCKING : ಗೊರಕೆ ಹೊಡೆಯುವವರಿಗೆ ಶೇ. 71 ರಷ್ಟು `ಹೃದಯಾಘಾತ’ ಸಂಭವಿಸುವ ಸಾಧ್ಯತೆ : ವರದಿ

08/04/2026 9:00 AM

ಶಾಲೆಗಳಲ್ಲಿ `ಮೊಬೈಲ್’ ಬ್ಯಾನ್ ಮಾಡಿದ್ರೆ ಮಕ್ಕಳ ನಡವಳಿಕೆಯಲ್ಲಿ ಮಹತ್ತರ ಸುಧಾರಣೆ : ವರದಿ

08/04/2026 8:57 AM

BREAKING : ಇರಾನ್ ವಿರುದ್ಧದ ಕದನ ವಿರಾಮ ಘೋಷಣೆ : ಟ್ರಂಪ್ ನಿರ್ಧಾರ ಸ್ವಾಗತಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು

08/04/2026 8:50 AM
State News
KARNATAKA

ನಾಳೆ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ : `ವೋಟರ್ ಐಡಿ’ ಇಲ್ಲದಿದ್ದರೆ ಈ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು.!

By kannadanewsnow5708/04/2026 8:47 AM KARNATAKA 1 Min Read

ಬೆಂಗಳೂರು : ರಾಜ್ಯದ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಳೆ ಮತದಾನ ನಡೆಯಲಿದ್ದು, ಮತದಾರರು ತಮ್ಮ…

ಸಾರ್ವಜನಿಕರೇ ಗಮನಿಸಿ : `ಡಿಜಿಟಲ್ ಅರೆಸ್ಟ್’ಗೆ ಒಳಗಾಗಿದ್ದರೆ ಭಯ ಬೇಡ, ಜಸ್ಟ್ ಹೀಗೆ ದೂರು ಸಲ್ಲಿಸಿ.!

08/04/2026 8:20 AM

ಮಾನಸಿಕ ಆರೋಗ್ಯ ಮತ್ತು ನೆಮ್ಮದಿಯ ಜೀವನಕ್ಕಾಗಿ ಈ 9 ದೈನಂದಿನ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

08/04/2026 8:00 AM

ALERT : ಈ ತಪ್ಪು ಮಾಡಿದ್ರೆ ನಿಮ್ಮ ಮನೆಯಲ್ಲಿರುವ `AC’ ಬಾಂಬ್ ನಂತೆ ಬ್ಲ್ಯಾಸ್ಟ್ ಆಗಬಹುದು.!

08/04/2026 7:40 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.