ಬೆಂಗಳೂರು: ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದೇವೇಳೆ ಸತೀಶ್ ರೆಡ್ಡಿ ಇಷ್ಟೆಲ್ಲ ಗೂಂಡಾವರ್ತಿ ಮಾಡಿದ್ದು, ಅವರನ್ನು ಬಂಧಿಸಿದ್ದೀರಾ ಎಂದು ಪ್ರಶ್ನಿಸಿದರು. ಸರಕಾರ ಯಾಕೆ ಅವರನ್ನು ಬಂಧಿಸಿಲ್ಲ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ನಾಯಕರು ಮತ್ತು ಶಾಸಕರನ್ನು ಬಂಧಿಸಬೇಕೇ ಹೊರತು ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರನ್ನಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಜೀವ ಬಲಿ ಪಡೆದ ಹೊಸ ವರ್ಷದ ಮೊದಲ ದಿನವಾಗಿದೆ. ಗೂಂಡಾ ರಾಜ್ಯದ ಸಂದೇಶ ಇದೆಂದು ತಿಳಿಸಿದರು.
ಶಾಸಕ ಮತ್ತು ಅವರ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಬೇಕಿತ್ತು. ಆದರೆ, ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರ ಮೇಲೆ ದೂರು ದಾಖಲಿಸುವ ಪ್ರಯತ್ನ ನಡೆದಿದೆ. ಅವರು ಯಾವ ರೀತಿ ಇದರಲ್ಲಿ ಭಾಗಿ ಆಗಿದ್ದಾರೆ? ಗುಂಡು ಹಾರಿಸಿದ್ದು ಯಾರು? ಎಂದು ಕೇಳಿದರು.
ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದೇವೇಳೆ ಸತೀಶ್ ರೆಡ್ಡಿ ಇಷ್ಟೆಲ್ಲ ಗೂಂಡಾವರ್ತಿ ಮಾಡಿದ್ದು, ಅವರನ್ನು ಬಂಧಿಸಿದ್ದೀರಾ ಎಂದು ಪ್ರಶ್ನಿಸಿದರು. ಸರಕಾರ ಯಾಕೆ ಅವರನ್ನು ಬಂಧಿಸಿಲ್ಲ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ನಾಯಕರು ಮತ್ತು ಶಾಸಕರನ್ನು ಬಂಧಿಸಬೇಕೇ ಹೊರತು ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರನ್ನಲ್ಲ ಎಂದು ತಿಳಿಸಿದರು.
ಎಲ್ಲ ಕುಚೇಷ್ಟೆಯ ಕಾರ್ಯ ಕಾಂಗ್ರೆಸ್ಸಿನವರಿಂದಲೇ ಹೊರತು ಇದು ನಮ್ಮ ಪಕ್ಷದ ಶಾಸಕರ ಕಡೆಯಿಂದ ಆಗಿಲ್ಲ. ಆದ್ದರಿಂದ ಈ ಗೂಂಡಾವರ್ತನೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.








