ಬೆಂಗಳೂರು: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ತೊಡೆತಟ್ಟಿ ಹೇಳಿಕೆ ನೀಡಿದ್ದಂತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಹೈಕಮಾಂಟ್ ಶೋಕಾಸ್ ನೋಟಿಸ್ ನೀಡಿ ಶಾಕ್ ನೀಡಿತ್ತು. ಈ ನೋಟಿಸ್ ಗೆ 9 ಪುಟಗಳ ಉತ್ತರವನ್ನು ನೀಡಿರುವಂತ ಶಾಸಕ ಯತ್ನಾಳ್, ಅದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧವೇ ದೂರು ನೀಡಿದ್ದಾರೆ.
ಬಿಜೆಪಿ ಹೈಕಮಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಪಕ್ಷ ವಿರೋಧಿ ಹೇಳಿಕೆಯಿಂದಾಗಿ ಶೋಕಾಸ್ ನೋಟಿಸ್ ನೀಡಲಾಗಿತ್ತು. ಕೆಲ ದಿನಗಳ ಹಿಂದೆ ನೀಡಿದ್ದಂತ ನೋಟಿಸ್ ಗೆ 72 ಗಂಟೆಗಳ ಒಳಗಾಗಿ ಉತ್ತಿರಿಸುವಂತೆ ಸೂಚಿಸಲಾಗಿತ್ತು. ಈ ಮೊದಲು ನೀಡಿದ್ದಂತ ನೋಟಿಸ್ ಗೆ ನೀಡಿದ್ದಂತ ಉತ್ತರಕ್ಕೆ ಬಿಜೆಪಿ ಹೈಕಮಾಂಡ್ ತೃಪ್ತಿಯಾಗಿಲ್ಲ ಎನ್ನಲಾಗಿತ್ತು.
ಇನ್ನೂ ಬಿಜೆಪಿ ಹೈಕಮಾಂಡ್ ನೀಡಿದ್ದಂತ 2ನೇ ನೋಟಿಸ್ ಗೆ ಶಾಸಕ ಯತ್ನಾಳ್ ಬರೋಬ್ಬರಿ 9 ಪುಟಗಳ ಪ್ರತ್ಯುತ್ತರ ನೀಡಿದ್ದಾರೆ ಎನ್ನಲಾಗಿದೆ. ಈ ಉತ್ತರವು ಈ ಹಿಂದೆ ನೀಡಿದ್ದಂತ ಉತ್ತರವನ್ನೇ ಕಾಪಿ ಪೇಸ್ಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಹಳೆಯ ನೋಟಿಸ್ ಗೆ ನೀಡಿದ ಉತ್ತರವನ್ನು ಉಲ್ಲೇಖಿಸಿರುವಂತ ಶಾಸಕ ಯತ್ನಾಳ್, ನಿರ್ಧಿಷ್ಟ ವಿಷಯದ ಬಗ್ಗೆ ಹೆಚ್ಚು ಸ್ಪಷ್ಟ ಉತ್ತರ ನೀಡಿಲ್ಲ ಎನ್ನಲಾಗಿದೆ. ಇದರ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧವೇ 9 ಪುಟಗಳ ಪ್ರತ್ಯುತ್ತರದಲ್ಲಿ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ.
BREAKING: ಫೆ.20ರವರೆಗೆ ಮೈಸೂರಿಗೆ ತೆರಳಲು ‘ನಟ ದರ್ಶನ್’ಗೆ ಕೋರ್ಟ್ ಅನುಮತಿ | Actor Darshan
BREAKING: ಬೆಳಗಾವಿಯಲ್ಲಿ ದರ್ಗಾ ಬಳಿಯ ‘ಜಿಲೆಟಿನ್ ಕಟ್ಟಿ’ ಸ್ಪೋಟ, ಬೆಚ್ಚಿ ಬಿದ್ದ ಜನರು
BIG NEWS: ರಾಜ್ಯದಲ್ಲಿ ಇನ್ನೂ ಜೀವಂತ ‘ಸಾಮಾಜಿಕ ಬಹಿಷ್ಕಾರ’ ಪದ್ದತಿ: ನಿವಾರಣೆಗೆ ‘ಗ್ರಾಮ ಆಡಳಿತ’ ಮೀನಾಮೇಷ