ಬೆಂಗಳೂರು: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರನ್ನು ಇಡಿ ಬಂಧಿಸಿರುವುದು ಕಾನೂನು ಬಾಹಿರವೆಂದು ಪ್ರಶ್ನಿಸಿದ್ದಂತ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಇಡಿ ಅಧಿಕಾರಿಗಳು ಆನ್ ಲೈನ್ ಗೇಮಿಂಗ್ ಅಕ್ರಮದ ಕಾರಣದಿಂದ ದಾಳಿ ನಡೆಸಿದ ಬಳಿಕ ಬಂದಿಸಿತ್ತು. ಈ ಇಡಿ ಬಂಧನವನ್ನು ಪ್ರಶ್ನಿಸಿ ಪತ್ನಿ ಆರ್.ಡಿ ಚೈತ್ರಾ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಕೆಸಿ ವೀರೇಂದ್ರ ಪತ್ನಿ ಆರ್ ಡಿ ಚೈತ್ರಾ ಅವರು ಇಡಿ ಬಂಧನ ಕಾನೂನು ಬಾಹಿರವೆಂದು ಘೋಷಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ.ಐ ಅರುಣ್ ಅವರಿದ್ದಂತ ಏಕಸದಸ್ಯ ನ್ಯಾಯಪೀಠವು ವಜಾಗೊಳಿಸಿದೆ.
ಈ ಅರ್ಜಿ ವಿಚಾರಣೆ ವೇಳೆ ವೀರೇಂದ್ರ ಪಪ್ಪಿ ಅವರ ಕುರಿತಾಗಿ ಎಫ್ಐಆರ್ ಒಂದು ಜಾಲ್ತಿಯಲ್ಲಿದೆ. ಕೋರ್ಟ್ ಪೊಲೀಸರು ಸಲ್ಲಿಸಿರುವಂತ ಬಿ ರಿಪೋರ್ಟ್ ಇನ್ನೂ ಅಂಗೀಕರಿಸಿಲ್ಲ. ಕೋರ್ಟ್ ಬಿ ರಿಪೋರ್ಟ್ ಅಂಗೀಕರಿಸಿದ ಬಳಿಕ ಪ್ರಕರಣ ರದ್ದು ಕೋರಬಹುದು ಎಂಬುದಾಗಿ ಅಭಿಪ್ರಾಯ ಪಟ್ಟಿದೆ.