ಚಿಕ್ಕಬಳ್ಳಾಪುರ: ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಪ್ರೇಮಾಮೃತ ಸಭಾಂಗಣದಲ್ಲಿ ನಡೆದ ಸತ್ಯ ಸಾಯಿ ಸಮೂಹ ಸಂಸ್ಥೆಗಳ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಸುಮಾರು ಐದು ದಶಕಗಳ ಕಾಲ ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಮಾಡಿರುವ ಸಾಧನೆಗೆ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಕ್ಷೇತ್ರದ ಜನಪ್ರಿಯ ಶಾಸಕರಾದ ಟಿ .ಬಿ ಜಯಚಂದ್ರ ರವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರಿದೀಪ್ ಸಿಂಗ್ ಪುರಿ ಅವರಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸತ್ಯ ಸಾಯಿ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಸದ್ಗುರು ಪರಮಪೂಜ್ಯ ಶ್ರೀ ಮಧುಸೂದನ ಸಾಯಿ ಸ್ವಾಮಿಜಿಗಳು, ಕುಲಪತಿ ನರಸಿಂಹಮೂರ್ತಿರವರು, ಉಪಕುಲಪತಿ ಶ್ರೀಕಂಠ ಮೂರ್ತಿ ರವರು ಉಪಸ್ಥಿತರಿದ್ದರು.
ಇನ್ನು ಬರಿ ಟಿ.ಬಿ.ಜಯಚಂದ್ರ ಅಲ್ಲ, “ಡಾ.ಟಿ.ಬಿ.ಜಯಚಂದ್ರ”
ದೇಶದಲ್ಲಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಸಮೂಹ ಸಂಸ್ಥೆ ಸಾರ್ವಜನಿಕ ಸೇವೆಯಲ್ಲಿ ಸುಮಾರು ಐದು ದಶಕಗಳ ಕಾಲ ಸಂದಿಸಿರುವ ಸೇವೆಗೆ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಟಿ.ಬಿ.ಜಯಚಂದ್ರ ರವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ದಿನಾಂಕ 21-07-2024 ಗುರುವಾರ ಗುರು ಪೂರ್ಣಿಮಾ ದಿನವಾದ ಇಂದು ಮುದ್ದೇನಹಳ್ಳಿ ಸತ್ಯ ಸಾಯಿ ಗ್ರಾಮದ ಶ್ರೀ ಸತ್ಯ ಸಾಯಿ ಪ್ರೇಮಾಮೃತ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇತರೆ 6 ಮಂದಿಯೊಂದಿಗೆ ಟಿ.ಬಿ.ಜಯಚಂದ್ರರವರು ಗೌರವ ಪದವಿ ಸ್ವೀಕರಿಸಿದರು.
ನಿಜಕ್ಕೂ ಇದು ಓರ್ವ ಸಾಧಕನಿಗೆ ಸಂದ ಗೌರವ. ತನ್ನ ಜೀವಮಾನವಿಡೀ ರೈತರು, ನೀರಾವರಿ,ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚು ಹೋರಾಟ ಮಾಡಿ ಸಾಕಷ್ಟು ಹೆಸರು ಮಾಡಿ ಬರದ ನಾಡನ್ನು ಬಂಗಾರ ಮಾಡಿದ ಜನನಾಯಕ. ನಿಜಕ್ಕೂ ಧೀಮಂತ ನಾಯಕನಿಗೆ ಸಂದ ಗೌರವವಾಗಿದೆ.
BREAKING: ಕೇರಳದಲ್ಲಿ ‘ನಿಪಾ ವೈರಸ್’ಗೆ ಮೊದಲ ಬಲಿ: 14 ವರ್ಷದ ಬಾಲಕ ಸಾವು | Nipah virus
ರಾಜ್ಯದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ʻಪ್ರಬುದ್ಧ ಯೋಜನೆʼ ಮುಂದುವರಿಕೆ