ಬೆಂಗಳೂರು: ನನ್ನ ಮೇಲೆ ಸುಳ್ಳು ಅತ್ಯಾಚಾರ ದೂರು ನೀಡಿದ್ದರ ಹಿಂದೆ ಆರ್ ಆರ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದಂತ ಕುಸುಮಾ ಹನುಮಂತರಾಯಪ್ಪ ಅವರ ಕೈವಾಡವಿದೆ ಅಂತ ಶಾಸಕ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನ್ನ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ಹಾಕಲಾಗಿದೆ. ಈ ಬಗ್ಗೆ ನಾನು ಆದಿಚುಂಚನಗಿರಿಯ ಕಾಲ ಭೈರವ ದೇಗುಲಕ್ಕೆ ಬರುತ್ತೇನೆ. ಕುಸುಮಾ ಕೂಡ ಬರಲಿ. ಅತ್ಯಾಚಾರ ದೂರು ನೀಡಿದಂತವರು ಪರಿಚಯವೇ ಇಲ್ಲ ಅಂತ ದೇವರ ಮುಂದೆ ಪ್ರಮಾಣ ಮಾಡಲಿ ಎಂಬುದಾಗಿ ಸವಾಲ್ ಹಾಕಿದರು.
ವಿದ್ಯಾವಂತೆ, ಬುದ್ಧಿವಂತೆಯಾದ ನೀವು ಈ ಮಟ್ಟದ ಕೀಳು ರಾಜಕಾರಣಕ್ಕೆ ಇಳಿಯಬೇಡಿ. ಕ್ಷೇತ್ರದಲ್ಲಿ ಕೆಲಸ ಮಾಡಲು ಸಹಾಯ ಮಾಡಿ, ಬರೀ ಅಪಪ್ರಾಚಾರ ಮಾಡಬೇಡಿ ಅಂತ ಕಿಡಿಕಾರಿದರು.
BREAKING: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಗೌರವಾರ್ಥ ಸ್ಮಾರಕ ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧಾರ
SHOCKING: ‘ಚಹಾ ಚೀಲ’ಗಳು ಶತಕೋಟಿ ಹಾನಿಕಾರಕ ‘ಮೈಕ್ರೋಪ್ಲಾಸ್ಟಿಕ್’ಗಳನ್ನು ಬಿಡುಗಡೆ: ಅಧ್ಯಯನ | Teabags