ಬೆಂಗಳೂರು: ಹಾಸನದ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಮಹಿಳೆಯರೊಬ್ಬರು ಲೈಂಗಿಕ ದೌರ್ಜನ್ಯ ಪ್ರಕರಮ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಇಂದು ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಮೇ.16ರಂದು ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಒಂದು ದಿನದ ಮಟ್ಟಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಮೇ.17ರಂದು ಜಾಮೀನು ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ನ್ಯಾಯಪೀಠವು, ಅರ್ಜಿಯ ವಿಚಾರಣೆ ನಡೆಸಿತು.
ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ನ ನ್ಯಾಯಪೀಠದ ಮುಂದೆ ಎಸ್ಐಟಿ ಪರ ಎಸ್ ಪಿಪಿ ಜಾಯ್ನಾ ಕೊಥಾರಿ ಅವರು ಆರಂಭದಲ್ಲಿ ವಾದ ಮಂಡಿಸಿದರು. ಅವರು ಐಪಿಸಿ ಸೆಕ್ಷನ್ 436ರಡಿ ದಾಖಲಾಗಿರುವಂತ ಪ್ರಕರಣದಲ್ಲಿ ಜಾಮೀನು ಅರ್ಜಿ ಊರ್ಜಿತವಲ್ಲ. ಈಗಾಗಲೇ ಈ ಪ್ರಕರಣದಲ್ಲಿ ಹೆಚ್.ಡಿ ರೇವಣ್ಣ ಅವರು ಕೋರ್ಟ್ ಮುಂದೆ ಶರಣಾಗಿದ್ದಾರೆ. ಐಪಿಸಿ ಸೆಕ್ಷನ್ 376ರಡಿ ಜೀವಾವಧಿ ಶಿಕ್ಷೆ ಇದೆ. ಇದು ಜಾಮೀನು ರಹಿತ ಅಪರಾಧವಾಗಿದೆ ಎಂಬುದಾಗಿ ವಾದಿಸಿದರು.
ಹೆಚ್.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದಂತ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಹಿಳೆಯ ದೂರಿನ ಅಂಶಗಳನ್ನು ಓದಿ ನ್ಯಾಯಪೀಠಕ್ಕೆ ತಿಳಿಸಿದರು. ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಈ ಕೋರ್ಟ್ ವ್ಯಾಪ್ತಿಗೆ ಬರೋದಿಲ್ಲ. ರೇವಣ್ಣ, ಪ್ರಜ್ವಲ್ ಇಬ್ಬರ ವಿರುದ್ಧವೂ ಲೈಂಗಿಕ ದೌರ್ಜನ್ಯ ಆರೋಪವಿದೆ ಎಂದರು.
ರೇವಣ್ಣ, ಪ್ರಜ್ವಲ್ ವಿರುದ್ಧದ ದೂರು ವಿಭಜಿಸಬಾರದು. ಇಬ್ಬರ ವಿರುದ್ಧವೂ ಎಸ್ಐಟಿ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ. ಈಗಲೇ ಹೆಚ್.ಡಿ ರೇವಣ್ಣ ವಿರುದ್ದ ಅತ್ಯಾಚಾರ ಆರೋಪವಿಲ್ಲ ಎಂದು ಹೇಳಲಾಗುವುದಿಲ್ಲ ಎಂಬುದಾಗಿ ತಮ್ಮ ವಾದ ಮಂಡಿಸಿದರು.
ಈ ಬಳಿಕ ಎಸ್ಐಟಿ ಪರ ಎಸ್ ಪಿಪಿ ಅಶೋಕ್ ನಾಯಕ ವಾದ ಮಂಡಿಸಿ ಮುಕ್ತಾಯದ ಬಳಿಕ ಹೆಚ್.ಡಿ ರೇವಣ್ಣ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡನೆ ಆರಂಭಿಸಿದರು. ನಾನು ಸುಮ್ಮನೆ ಇದ್ದೀನಿ ಅಂತ ಏನೇನೋ ವಾದಿಸುತ್ತಿದ್ದಾರೆ. ನಾವು ಜಾಮೀನು ನೀಡ ಬಹುದಾದಂತ ಪ್ರಕರಣಗಳಲ್ಲಿ ಜಾಮೀನು ಕೋರಿದ್ದೇವೆ. ನನ್ನ ಕಕ್ಷಿದಾರನಿಗೆ ಜಾಮೀನು ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು.
ವಾದ-ಪ್ರತಿವಾದವನ್ನು ಆಲಿಸಿದಂತ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ಮೇ.20ರ ಇಂದಿಗೆ ಆದೇಶ ಕಾಯ್ದಿರಿಸಿತ್ತು. ಅಲ್ಲದೇ ಅಲ್ಲಿಯವರೆಗೆ ಮಧ್ಯಂತರ ಜಾಮೀನು ಮುಂದುವರಿಸಿತ್ತು. ಇಂದು ಕಾಯ್ದಿರಿಸಿದ್ದಂತ ಆದೇಶವನ್ನು ಪ್ರಕಟಿಸಿದ್ದು, ಹೊಳೆನರಸೀಪುರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣಗೆ ಜಾಮೀನು ಮಂಜೂರು ಮಾಡಿದೆ. 5 ಲಕ್ಷ ಬಾಂಡ್, ಒಬ್ಬರ ಶೂರಿಟಿಯನ್ನು ಒದಗಿಸುವಂತೆಯೂ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಜಾಮೀನು ಆದೇಶದಲ್ಲಿ ತಿಳಿಸಿದೆ.
BIG NEWS: ಮುಂದಿನ ವರ್ಷದಿಂದ ‘SSLC ಗ್ರೇಸ್ ಮಾರ್ಕ್ಸ್’ ರದ್ದತಿಗೆ ‘ಸಿಎಂ ಸಿದ್ಧರಾಮಯ್ಯ’ ಆದೇಶ