ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದಲ್ಲಿ ಜೈಲು ಪಾಲಾಗಿದ್ದಂತ ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ ನಿನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಜಾಮೀನು ನೀಡಿತ್ತು. ಇಂದು ಜೈಲಿನಿಂದ ರಿಲೀಸ್ ಆದ ಬೆನ್ನಲ್ಲೇ ಹೆಚ್.ಡಿ ರೇವಣ್ಣ ಟೆಂಪಲ್ ರನ್ ನಲ್ಲಿ ತೊಡಗಿದ್ದಾರೆ.
ಹೌದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಹೊರ ಬರುತ್ತಿದ್ದಂತೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರನ್ನು ಪದ್ಮನಾಭ ನಗರದ ನಿವಾಸದಲ್ಲಿ ಭೇಟಿಯಾದರು. ಆ ಬಳಿಕ, ಅಲ್ಲಿನ ದೇವರ ಕೋಣೆಗೆ ತೆರಳಿ ಪೂಜೆ ಕೂಡ ನೆರವೇರಿಸಿದ್ದಾರೆ.
ಅಲ್ಲಿಂದ ಬೆಂಗಳೂರಿನ ಜೆಪಿ ನಗರದಲ್ಲಿ ಇರುವಂತ ತಿರುಮಲ ಲಕ್ಷ್ಮೀ ವೆಂಕಟೇಶ್ವರ ದೇವಾಲಯಕ್ಕೆ ತೆರಳಿದಂತ ಅವರು, ವಿಶೇಷ ಪೂಜೆಯನ್ನು ಸಲ್ಲಿಸಿದರು. ಜೊತೆಗೆ ಕುಂಬಳಕಾಯಿ, ಈಡುಗಾಯಿ ಹೊಡೆದು ದೃಷ್ಠಿ ತೆಗೆಸಿ, ಒಬ್ಬರೇ ಪೂಜೆ ಮಾಡಿದ್ರು. ಅಲ್ಲಿಂದ ಬಸವನಗುಡಿಯಲ್ಲಿರುವಂತ ಕಾರಂಜಿ ಆಂಜನೇಯ ದೇವಸ್ಥಾನಕ್ಕೆ ತೆರಳಿದಂತ ಅವರು, ಅಲ್ಲಿಯೂ ವಿಶೇಷ ಪೂಜೆ ಸಲ್ಲಿಸಿದರು.
ಇಲ್ಲಿಂದ ನೇರವಾಗಿ ಬೆಂಗಳೂರಿನ ನಿವಾಸಕ್ಕೆ ತೆರಳಿದಂತ ಅವರು, ಸಂಪ್ರದಾಯದಂತೆ ಮನೆ ಒಳಗೆ ಹೋಗಿ, ಕೆಲ ಕಾಲವಿದ್ದು, ಹೊರ ಬಂದರು. ಇಲ್ಲಿಂದ ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ, ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಶೃಂಗೇರಿಯ ಶಾರದಾಂಬೆ ದೇವಸ್ಥಾನಕ್ಕೂ ಭೇಟಿ ನೀಡೋ ಸಾಧ್ಯತೆ ಇದೆ.
ವಿಜಯಪುರ : ಮೂರು ಮಕ್ಕಳ ಸಾವಿನ ಪ್ರಕರಣ : ಪಾಲಿಕೆ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ‘FIR’ ದಾಖಲು
ರಾಜ್ಯದಲ್ಲೊಂದು ‘ಅಮಾನವೀಯ’ ಘಟನೆ: ಸಾಲ ತೀರಿಸಲು ಗಂಡು ಮಗುವನ್ನೇ ಮಾರಿದ ‘ಪಾಪಿ ತಂದೆ’