ಶಿವಮೊಗ್ಗ: ಅಧಿಕಾರ ಅಂತಸ್ತು ಶಾಶ್ವತವಲ್ಲ. ಆದರೇ ಹೃದಯ ವೈಶಾಲ್ಯತೆ ಮಾತ್ರ ಶಾಶ್ವತ ಅನ್ನೋದಕ್ಕೆ ಸಾಕ್ಷಿಯೇ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಎಂಬುದು ಆ ಭಾಗದ ಜನರ ಮಾತು. ಈಗ ತಾಜಾ ಉದಾಹರಣೆ ಎನ್ನುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಅಜ್ಜಿಗೆ ಸಹಾಯ ಮಾಡಿ ಜನ-ಮನ ಗೆದ್ದಿದ್ದಾರೆ. ಶಾಸಕರಂದ್ರೆ ಹೀಗೆ ಇರ್ಬೇಕು ಅಲ್ವ? ಎನ್ನುವಂತ ಹೃದಯ ವೈಶಾಲ್ಯತೆಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ತಮ್ಮನ್ನು ಭೇಟಿಯಾಗುವ ಜನರನ್ನು ನಗುಮುಖದಿಂದಲೇ ಸ್ವಾಗತಿಸೋದು ಹುಟ್ಟು ಗುಣವೇ ಆಗಿದೆ. ಯಾರೇ ಕಷ್ಟ ಅಂತ ತಮ್ಮ ಬಳಿ ಬಂದ್ರು ಅವರನ್ನು ಪ್ರೀತಿಯಿಂದ ಮಾತನಾಡಿಸುವಂತ ಶಾಸಕರು, ತಮ್ಮ ಕೈಲಾದ ಸಹಾಯವನ್ನು, ಅವರ ಕೆಲಸವನ್ನು ತಕ್ಷಣ ಮಾಡಿಯೇ ಕಳುಹಿಸೋದು. ಹೀಗಾಗಿ ಕ್ಷೇತ್ರದಲ್ಲಿ ಜನಾನುರಾಗಿ ನಾಯಕರಾಗಿದ್ದಾರೆ.
ಕೆಲ ದಿನಗಳ ಹಿಂದೆ ತಮ್ಮ ಪ್ರವಾಸದ ನಿಮಿತ್ತ, ಸಾಗರ ವ್ಯಾಪ್ತಿಯಲ್ಲಿ ವಿಪರೀತ ಮಳೆಯಾಗುತ್ತಿರುವ ಕಾರಣ ಸಂತ್ರಸ್ತರ ಜನರನ್ನು ಸಾಂತ್ವಾನಿಸಿ, ಪರಿಹಾರ ದೊರಕಿಸಿಕೊಡುವಂತ ಕಾರ್ಯಕ್ಕಾಗಿ ಹೊಸನಗರ ತೆರಳಿ, ಮರಳಿ ಸಾಗರ ವಾಪಾಸ್ ಆಗುತ್ತಿದ್ದರು. ಈ ಮಾರ್ಗಮಧ್ಯದ ಹುಲಿದೇವರ ಬದನದ ಬಳಿ ಹಣ್ಣಾದ ಇಳಿ ದೇಹದ ವೃದ್ಧೆ ನಾಗಮ್ಮ ಎಂಬುವರು ಕೋಲನ್ನು ಊರಿಕೊಂಡು ದಾರಿ ಪಕ್ಕದಲ್ಲಿ ನಡೆದು ಹೋಗುತ್ತಿದ್ದದ್ದು ಕಂಡ ಶಾಸಕ ಗೋಪಾಲಕೃಷ್ಣ ಬೇಳೂರು, ತಕ್ಷಣವೇ ಕಾರು ನಿಲ್ಲಿಸಿ, ಕಾರಿನಿಂದ ಇಳಿದು ಹತ್ತಿರ ತೆರಳಿ ಅಜ್ಜಿಯನ್ನು ಮಾತನಾಡಿಸಿದ್ದಾರೆ.
ಅಜ್ಜಿ ಎಲ್ಲಿಗೆ ಹೋಗ್ತಾ ಇದ್ದೀಯ? ಈ ವಯಸ್ಸಿನಲ್ಲಿ ಮನೆಯಲ್ಲಿ ಇರಬೇಕು ತಾನೇ? ಹುಷಾರಾಗಿ ದಾರಿ ದಾಟಬೇಕು ಅಂತ ಮಮತೆಯ ನುಡಿಯಾಡಿದರು. ಅಲ್ಲದೇ ನಿನಗೇನು ಬೇಕು ಅಂತ ಕೇಳಿದ್ದಕ್ಕೆ ಅಜ್ಜಿ ನೀವು ಏನು ಕೊಟ್ಟರೂ ಸರಿಯೇ ಎನ್ನುವಂತ ಮಾತು ಕೇಳಿದಂತ ಶಾಸಕ ಗೋಪಾಲಕೃಷ್ಣ ಬೇಳೂರು ಕೆಲ ಕಾಲ ತಬ್ಬಿಬ್ಬಾದರು. ಆ ಬಳಿಕ ನಗು ನಗುತ್ತಲೇ ತಮ್ಮ ಜೇಬಿನಿಂದ ಹಣ ತೆಗೆದು ವಯೋವೃದ್ಧೆಯ ಕೈಗಿತ್ತರು. ಅಜ್ಜಿ ಹುಷಾರಾಗಿ ಹೋಗು, ಹೊರಗೆಲ್ಲ ಓಡಾಡಬೇಡ. ಹುಷಾರಾಗಿ ಇರಬೇಕು ಅಂತ ಹೇಳಿ, ಹಿರಿಯ ಜೀವದ ಆಶೀರ್ವಾದ ಪಡೆದು ತೆರಳಿದಂತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೀಡಿಯೋ ವೀಕ್ಷಿಸಿದಂತ ನೆಟ್ಟಿಗರು ಶಾಸಕರ ಹೃದಯ ವೈಶಾಲ್ಯತೆಯನ್ನು ಕೊಂಡಾಡುತ್ತಿದ್ದಾರೆ.
ಆ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಹೃದಯ ವೈಶಾಲ್ಯತೆಯ ವೈರಲ್ ವೀಡಿಯೋ ಈ ಕೆಳಗಿದೆ ನೋಡಿ..
ಈಗ ಆಧಾರ್ ಕಾರ್ಡ್ ನವೀಕರಣಕ್ಕೆ ಈ ದಾಖಲೆಗಳು ಕಡ್ಡಾಯ: ಹೀಗಿವೆ UIDAI ಹೊಸ ನಿಯಮಗಳು | Aadhaar Update