ಶಿವಮೊಗ್ಗ: ಜಿಲ್ಲೆಯ ಸಾಗರದ ಮಡಸೂರು ಗ್ರಾಮದ ಜನತೆಗೆ ಶಾಸಕ ಗೋಪಾಲಕೃಷ್ಣ ಬಿಗ್ ಗಿಫ್ಟ್ ನೀಡಿದ್ದಾರೆ. ಅದೇ ಸಾಗರದ ಮಡಸೂರು ಗ್ರಾಮದಲ್ಲಿ ಸಾರ್ವಜನಿಕ ಆಟದ ಮೈದಾನದ ಉದ್ದೇಶಕ್ಕಾಗಿ ಸುಮಾರು 2 ಎಕರೆ ಭೂಮಿ ಮಂಜೂರು ಮಾಡಿಸಿ ಆದೇಶಿಸಿದ್ದಾರೆ.
ಈ ಕುರಿತಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದು, ಸಾಗರ ತಾಲ್ಲೂಕು ಕಸಬಾ ಹೋಬಳಿ ಮಡಸೂರು ಗ್ರಾಮದ ಸ.ನಂ. 60 ಎ ರಲ್ಲಿ 2-00 ಎಕರೆ ವಿಸ್ತೀರ್ಣದ ಜಮೀನನ್ನು ಸಾರ್ವಜನಿಕ ಆಟದ ಮೈದಾನದ ಉದ್ದೇಶಕ್ಕಾಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಮಡಸೂರು ಗ್ರಾಮ ಪಂಚಾಯಿತಿ ಇವರಿಗೆ ಸಾಗರ ತಾಲ್ಲೂಕು ಇವರಿಗೆ ಕಾಯ್ದಿರಿಸುವ ಕುರಿತು ಉಪವಿಭಾಗಾಧಿಕಾರಿಗಳು, ಸಾಗರ ರವರು ಹಾಗೂ ತಹಶೀಲ್ದಾರ್, ಸಾಗರ ತಾಲ್ಲೂಕು ರವರು ಉಲ್ಲೇಖ (1) & (2) ರಂತೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ ಎಂದಿದ್ದಾರೆ.
ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ ಪ್ರಸ್ತಾಪಿತ ಮಡಸೂರು ಗ್ರಾಮದ ಸ.ನಂ. 60 ರ ಜಮೀನು ಮೂಲತಃ ಕಂದಾಯ ದಾಖಲಾತಿಯಂತೆ ಸರ್ಕಾರಿ ಬಂಜರು ಎಂಬುದಾಗಿ ದಾಖಲಾಗಿದ್ದು, ಪ್ರಸಕ್ತ ಸಾಲಿನ ಪಹಣಿ ದಾಖಲೆಯಂತೆ ಸರ್ವೆ ನಂ 60 ರಲ್ಲಿ 22-28 ಎಕರೆ ವಿಸ್ತೀರ್ಣ ಇದ್ದು, ಕಂದಾಯ ಇಲಾಖೆಯ ಜಾಗವಾಗಿರುತ್ತದೆ. ಮಡಸೂರು ಗ್ರಾಮದಲ್ಲಿ ಒಟ್ಟು 582 ಜಾನುವಾರುಗಳಿರುತ್ತವೆ. ಗ್ರಾಮದಲ್ಲಿ ಜಾನುವಾರುಗಳಿಗೆ ಅನುಗುಣವಾಗಿ ಸಾಕಷ್ಟು ಜಮೀನು ಲಭ್ಯವಿರುವ ಕುರಿತು ವರದಿ ಸಲ್ಲಿಸಿರುತ್ತಾರೆ ಎಂದು ಹೇಳಿದ್ದಾರೆ.
ಪ್ರಸ್ತಾಪಿತ ಪ್ರದೇಶಕ್ಕೆ ರಸ್ತೆ ಸಂಪರ್ಕವಿದ್ದು, ಉದ್ದೇಶಿದ ಪ್ರದೇಶದಲ್ಲಿ ಭೂ ಮಂಜೂರಾತಿ ಸಂಬಂಧ ನಮೂನ- 50, 53 ಹಾಗೂ 57 ಅರ್ಜಿಗಳು ಇತ್ಯರ್ಥಪಡಿಸಲು ಬಾಕಿ ಇರುವುದಿಲ್ಲ . ಪ್ರಸ್ತಾಪಿತ ಪ್ರದೇಶವು ಖುಲ್ಲಾ ಇದ್ದು ಯಾವುದೇ ಒತ್ತುವರಿಯಾಗಿರುವುದಿಲ್ಲವೆಂದು ತಿಳಿಸಿರುತ್ತಾರೆ. ಹಾಗೂ ಕೋರಿಕ ಪ್ರದೇಶಕ್ಕೆ ಸಂಬಂಧಪಟ್ಟಂತೆ ಮೋಜಣಿ ನಕ್ಷೆಯನ್ನು ತಯಾರಿಸಿ ಚೆಕ್ಕುಬಂದಿ ವಿವರಗಳೊಂದಿಗೆ ವರದಿ ಸಲ್ಲಿಸಿರುತ್ತಾರೆ. ಹೈಟೆನ್ಸನ್ ವಿದ್ಯುತ್ ಲೈನ್ ಹಾದುಹೋಗಿರುವುದಿಲ್ಲ. ಹಾಗೂ ಯಾವುದೇ ಮರಗಿಡಗಳು ಇಲ್ಲದೇ ಇರುವ ಕುರಿತು ವರದಿ ಸಲ್ಲಿಸಿರುತ್ತಾರೆ. ಹಾಗೂ ಸದರಿ ಜಾಗವು ಸಾಗರ ತಾಲ್ಲೂಕು ಗ್ರಾಮಾಂತರ ವ್ಯಾಪ್ತಿಯೊಳಗೆ ಕೋರಿಕೆ ಪ್ರದೇಶವು ಖುಲ್ಲ ಇರುವುದರಿಂದ 2-00 ಎಕರೆ ವಿಸ್ತೀರ್ಣದ ಜಮೀನನ್ನು ಸಾರ್ವಜನಿಕ ಆಟದ ಮೈದಾನದ ಉದ್ದೇಶಕ್ಕಾಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಮಡಸೂರು ಗ್ರಾಮ ಪಂಚಾಯಿತಿ ಇವರಿಗೆ ಸಾಗರ ತಾಲ್ಲೂಕು ಇವರಿಗೆ ಕರ್ನಾಟಕ ಭೂ ಕಂದಾಯ ಕಾಯ್ದೆ -1964 ರ ಕಲಂ 71 ರಡಿಯಲ್ಲಿ ಕಾಯ್ದಿರಿಸುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ ಎಂದು ತಿಳಿಸಿದ್ದಾರೆ.
ಮುಂದುವರೆದು, ಸಾಗರ ತಾಲ್ಲೂಕು ಕಸಬಾ ಹೋಬಳಿ ಮಡಸೂರು ಗ್ರಾಮದ ಸ.ನಂ. 60 ಎ ರಲ್ಲಿ 2-00 ಎಕರೆ ವಿಸ್ತೀರ್ಣದ ಜಮೀನನ್ನು ಸಾರ್ವಜನಿಕ ಆಟದ ಮೈದಾನದ ಉದ್ದೇಶಕ್ಕಾಗಿ ಕಾಯ್ದಿರಿಸುವ ಕುರಿತು ಉಪಅರಣ್ಯ ಸಂರಕ್ಷಣಾಧಿಕಾರಿಗಳು, ಸಾಗರ ಪ್ರಾದೇಶಿಕ ಅರಣ್ಯ ವಿಭಾಗ, ಸಾಗರ ಇವರಿಂದ ಉಲ್ಲೇಖ (3) ರಂತೆ ವರದಿಯನ್ನು ಪಡೆಯಲಾಗಿದ್ದು ಪ್ರಸ್ತಾಪಿತ ಪ್ರದೇಶವು “ಯಾವುದೇ ಅಧಿಸೂಚಿತ / ಪರಿಭಾವಿತ ಅರಣ್ಯ ಪ್ರದೇಶದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬ ಕುರಿತು ಉಲ್ಲೇಖಿಸಿರುತ್ತಾರೆ ಎಂದಿದ್ದಾರೆ.
ಈ ಮೇಲ್ಕಂಡ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಹಾಗೂ ಪ್ರಸ್ತಾಪಿತ ಮಡಸೂರು ಗ್ರಾಮದ ಸರ್ವೆ ನಂ 121 ರ ಜಮೀನು ಸರ್ಕಾರಿ ಬಂಜರು ಎಂಬುದಾಗಿ ವರ್ಗೀಕೃತಗೊಂಡಿದ್ದು ಮೂಲತಃ ಕಂದಾಯ ಇಲಾಖೆಗೆ ಸೇರಿದ ಜಮೀನಾಗಿರುವುದರಿಂದ ಸಾಗರ ತಾಲ್ಲೂಕು ಕಸಬಾ ಹೋಬಳಿ ಮಡಸೂರು ಗ್ರಾಮದ ಸ.ನಂ. 60 ಎ ರಲ್ಲಿ 2-00 ಎಕರೆ ವಿಸ್ತೀರ್ಣದ ಜಮೀನನ್ನು ಸಾರ್ವಜನಿಕ ಆಟದ ಮೈದಾನದ ಉದ್ದೇಶಕ್ಕಾಗಿ ಕಾಯ್ದಿರಿಸುವುದು ಸೂಕ್ತವೆನಿಸಿದ್ದರಿಂದ ಈ ಕೆಳಗಿನಂತೆ ಆದೇಶಿಸಿದ್ದಾರೆ.
ಸಾಗರ ತಾಲ್ಲೂಕು ಕಸಬಾ ಹೋಬಳಿ ಮಡಸೂರು ಗ್ರಾಮದ ಸ.ನಂ 60 ರಲ್ಲಿ 2-00 ಎಕರೆ ಜಮೀನನ್ನು ಸಾರ್ವಜನಿಕ ಆಟದ ಮೈದಾನದ ಉದ್ದೇಶಕ್ಕಾಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಮಡಸೂರು ಗ್ರಾಮ ಪಂಚಾಯಿತಿ, ಸಾಗರ ತಾಲ್ಲೂಕು ಇವರಿಗೆ ನಕ್ಷೆಯಲ್ಲಿ ನಮೂದಿಸಿದ ಚೆಕ್ಕು ಬಂಧಿಗಳ ವಿವರಗಳಿಗೊಳಪಟ್ಟು ಹಾಗೂ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಕರ್ನಾಟಕ ಭೂ-ಕಂದಾಯ ಕಾಯ್ದೆ 1964 ರಕಲಂ 71 ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕಾಯ್ದಿರಿಸಿ ಆದೇಶಿಸಿದ್ದಾರೆ.
ಪ್ರಸ್ತಾಪಿತ ಜಮೀನಿನ ಚಕ್ಕುಬಂದಿ ವಿವರ :-
ಉತ್ತರಕ್ಕೆ: ರಿ.ಸ.ನಂ 60 ರ ಉಳಿಕೆ ಜಾಗ ಪೂರ್ವಕ್ಕೆ: ರಿ.ಸ.ನಂ 60 & 59
ದಕ್ಷಿಣಕ್ಕೆ: ರಿ.ಸ.ನಂ 60 ರ ಉಳಿಕೆ ಜಾಗ
ಪಶ್ಚಿಮಕ್ಕೆ: ರಿ.ಸ.ನಂ 60 ರ ಉಳಿಕೆ ಜಾಗ
ಷರತ್ತುಗಳು:-
1. ಜಮೀನನ್ನು ಯಾವ ಉದ್ದೇಶಕ್ಕೆ ಕಾಯ್ದಿರಿಸಲಾಗಿದೆಯೋ ಅದೇ ಉದ್ದೇಶಕ್ಕೆ ಮಾತ್ರ ಉಪಯೋಗಿಸತಕ್ಕದ್ದಾಗಿದೆ, ಸದರಿ ಉದ್ದೇಶ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಗಳಿಗೆ ಬಳಸುವಂತಿಲ್ಲ.
2. ಯಾವುದೇ ತಾತ್ಕಾಲಿಕ ಖಾಸಗಿ ಹಕ್ಕುಗಳನ್ನು ಸೃಷ್ಠಿಸತಕ್ಕದ್ದಲ್ಲ
3. ಸದರಿ ಉದ್ದೇಶಕ್ಕೆ ಕಾಯ್ದಿರಿಸಲಾದ ಜಮೀನು ಅವಶ್ಯಕತೆ ಇಲ್ಲವಾದಲ್ಲಿ ಪುನಃ ಕಂದಾಯ ಇಲಾಖೆಗೆ ವಾಪಸ್ಸು ಪಡೆಯುವ ಅಧಿಕಾರವು ಈ ಪ್ರಾಧಿಕಾರಕ್ಕೆ ಪ್ರದತ್ತವಾಗಿರುತ್ತದೆ.
4. ಸದರಿ ಜಮೀನನ್ನು ಯಾವುದೇ ರೀತಿಯಲ್ಲಿ ಒತ್ತುವರಿಯಾಗದಂತೆ ಕ್ರಮವಹಿಸುವುದು.
5. ಮುಂದಿನ 3 ವರ್ಷಗಳ ಅವಧಿಯೊಳಗೆ ಬಳಸತಕ್ಕದ್ದು, ತಪ್ಪಿದ್ದಲ್ಲಿ ಕಂದಾಯ ಇಲಾಖೆಗೆ ಮರು ವರ್ಗಾವಣೆ ಮಾಡುವ ಬಗ್ಗೆ ಷರತ್ತಿಗೆ ಒಳಪಟ್ಟಿರುತ್ತದೆ ಎಂದು ತಿಳಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ಸಾಗರದ ಆಸ್ಪತ್ರೆಯಲ್ಲಿ ‘ಜನರೇಟರ್ ಕಳ್ಳತನ’ ಕೇಸ್: ‘ಕಚೇರಿ ಅಧೀಕ್ಷಕ ಸುನೀಲ್’ ಸೇವೆಯಿಂದ ಅಮಾನತು
ಕೂಡಲೇ ರಾಜೀನಾಮೆ ನೀಡುವಂತೆ ಇಂಟೆಲ್ ಸಿಇಒಗೆ US ಅಧ್ಯಕ್ಷ ಟ್ರಂಪ್ ಕರೆಮಾಡಿ ಸೂಚನೆ | Intel CEO