ಶಿವಮೊಗ್ಗ: ರಾಜ್ಯ ಸರ್ಕಾರದಿಂದ ಸಿಗುವಂತ ಸರ್ಕಾರಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಕೃಷಿಯಲ್ಲಿ ಉತ್ತಮ ಸಾಧನೆ ಮಾಡುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಕಿವಿಮಾತು ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರವಾಸಿ ಮಂದಿರದ ಆವರಣದಲ್ಲಿ 13 ಅರ್ಹ ರೈತರಿಗೆ ಸಣ್ಣ ನೀರಾವರಿ ಇಲಾಖೆಯಿಂದ ಆರ್ಥಿಕವಾಗಿ ಹಿಂದುಳಿದವರಿಗೆ SCPTSP ಯೋಜನೆಯಡಿ ಸುಮಾರು 66 ಲಕ್ಷ ರೂ.ಗಳ ಉಪಕರಣಗಳನ್ನು ವಿತರಿಸಿ ಮಾತನಾಡಿದರು.
ರಾಜ್ಯ ಸರ್ಕಾರದಿಂದ ರೈತರಿಗೆ ಉಚಿತವಾಗಿ ಪಂಪ್ ಸೆಟ್ ಗಳನ್ನು ಇಂದು ವಿತರಣೆ ಮಾಡಲಾಗಿದೆ. ಇದರ ಒಟ್ಟು ಮೌಲ್ಯ 66 ಲಕ್ಷ ಆಗಿದೆ. ಎಲ್ಲರಿಗೂ ಚೆನ್ನಾಗಿ ನೀರು ಬಂದಿದೆ. ಸರ್ಕಾರದ ಯೋಜನೆಯಡಿ ರೈತರಿಗೆ ಪಂಪ್ ಸೆಟ್ ವಿತರಣೆಗೆ ಅವಕಾಶ ಮಾಡಿಕೊಟ್ಟಂತ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅವರಿಗೆ ಅಭಿನಂದಿಸುತ್ತೇನೆ. ಈ ಬಾರಿ ಇಷ್ಟು ಕೊಟ್ಟಿದ್ದಾರೆ. ಈ ವರ್ಷ ಜಾಸ್ತಿ ನೀಡುವಂತೆ ಕೋರುತ್ತೇನೆ. ಇದರಿಂದ ಬಹಳ ಜನರಿಗೆ ಉಪಯೋಗ ಆಗಲಿದೆ ಎಂದರು.
ಈ ಯೋಜನೆಗೆ ಅರ್ಜಿ ಸಲ್ಲಿಸುವಂತ ರೈತರು ಖಾತೆ ಇರಬೇಕು. ಮತ್ತೆ ಎರಡು ಎಕರೆ ಮೇಲ್ಪಟ್ಟವರಿಗೆ ಕೃಷಿ ಪಂಪ್ ಸೆಟ್ ಉಪಕರಣ ಪಡೆಯಲು ಅರ್ಹರಾಗಿರುತ್ತಾರೆ. ಈ ಯೋಜನೆಯಿಂದ ಕೃಷಿಕರ ಜೀವನ ಬೆಳಕಾಗಲಿದೆ ಎಂಬುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎಇಇ ಚರಣ್ ಎಸ್.ಬಿ, ಎಇ ಸಂತೋಷ್ ಕೆ.ಕೆ ಹಾಗೂ ಕಾಂಗ್ರೆಸ್ ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ಸೋಮಶೇಖರ ಲಾವಿಗೆರೆ, ಕಾಂಗ್ರೆಸ್ ಮುಖಂಡ ಚಂದ್ರಪ್ಪ ಎಲ್, ಸಾಗರ ಶಾಸಕರ ಆಪ್ತ ಸಹಾಯಕ ಟಿ.ಪಿ ರಮೇಶ್, ಕಾಂಗ್ರೆಸ್ ಮುಖಂಡರಾದಂತ ಗಿರೀಶ್ ಕೋವಿ, ಜಯರಾಮ್, ಚೇತನ್ ಕಣ್ಣೂರ್, ಕಲಸೆ ಚಂದ್ರಪ್ಪ, ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ
ಪ್ರತೀ ವರ್ಷ ವಿಧಾನಸೌಧದಲ್ಲಿ ‘ಸಾಹಿತ್ಯ, ಪುಸ್ತಕ ಹಬ್ಬ’ ಆಯೋಜನೆ: ಸಿಎಂ ಸಿದ್ಧರಾಮಯ್ಯ ಘೋಷಣೆ
ದಾಸರಹಳ್ಳಿ ವಲಯದ ‘IKEA’ಗೆ ಬಿಬಿಎಂಪಿ ಶಾಕ್: ಬರೋಬ್ಬರಿ ’65 ಲಕ್ಷ ದಂಡ’ ಸಮೇತ ಶುಲ್ಕ ವಸೂಲಿ