ಶಿವಮೊಗ್ಗ: ನಾಳೆ ಸಾಗರದ ನೆಹರೂ ಮೈದಾನದಲ್ಲಿ ಅಗತ್ಯವಿರುವಂತ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಆ ಮೂಲಕ 70 ಲಕ್ಷದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆಯನ್ನು ನೀಡಲಿದ್ದಾರೆ.
ಈ ಕುರಿತಂತೆ ಸಾಗರ ನಗರಸಭಎ ಪೌರಾಯುಕ್ತ ಹೆಚ್.ಕೆ ನಾಗಪ್ಪ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ನಾಳೆ ಸಂಜೆ.5 ಗಂಟೆಗೆ ಸಾಗರದ ನೆಹರೂ ಮೈದಾನದಲ್ಲಿ ಅತಿ ಅವಶ್ಯಕತೆ ಇರುವಂತ ವಿವಿಧ ಅಭಿವೃದ್ಧಿ ಕಾಮಗಾರಿಗಳಇಗೆ ಸಾಗರ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತದ ಅಧ್ಯಕ್ಷರಾದಂತ ಗೋಪಾಲಕೃಷ್ಣ ಬೇಳೂರು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.
ನಾಳೆ ನೆಹರೂ ಮೈದಾನದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಯಾವೆಲ್ಲ ಕಾಮಗಾರಿಗೆ ಶಂಕುಸ್ಥಾಪನೆ?
1. ನೆಹರು ಮೈದಾನದಲ್ಲಿ ಜವಾಹರ್ ಲಾಲ್ ನೆಹರೂ ಬಯಲು ರಂಗಮಂದಿರ- ರೂ.40 ಲಕ್ಷ
2. ವಾಯುವಿಹಾರಿಗಳ ಸುರಕ್ಷತೆಗಾಗಿ ಚೈನ್ ಲಿಂಗ್ ಬೇಲಿ ನಿರ್ಮಾಣ- ರೂ.10 ಲಕ್ಷ
3. ಸರ್ವ ಋತು ವಾಕಿಂಗ್ ಟ್ರ್ಯಾಕ್ ಗಾಗಿ ಚಾವಣಿ ನಿರ್ಮಾಣ- ರೂ.20 ಲಕ್ಷ
ನಾಳೆಯ ಈ ಕಾರ್ಯಕ್ರಮದಲ್ಲಿ ಸಾಗರ ನಗರದ ಸಂಘ ಸಂಸ್ಥೆಗಳು, ನಾಗರೀಕರು ಹೆಚ್ಚಿನ ಸಂಖ್ಯೆಲ್ಲಿ ಪಾಲ್ಗೊಂಡು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ ಮನವಿ ಮಾಡಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
Watch Video: ‘ಶಾಸಕ’ರ ಮೇಲಿನ ಪ್ರೀತಿಯ ಅಭಿಮಾನಕ್ಕೆ ಹಾಡು ಬರೆದು ಹಾಡಿದ ‘ಶಾಲಾ ಮಕ್ಕಳು’
ಸಾಗರದ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಗೆ ಹಿತರಕ್ಷಣಾ ಸಮಿತಿ ಭರ್ಜರಿ ತಯಾರಿ: 33 ಅಭ್ಯರ್ಥಿಗಳು ಕಣಕ್ಕೆ
BIG NEWS: ಜಾತಿಗಣತಿ ವರದಿಯೆಂದು ಗೊಂದಲಕಾರಿ ಮಾಹಿತಿ ಶೇರ್ ಮಾಡಿದ ವ್ಯಕ್ತಿ ವಿರುದ್ಧ ದೂರು ದಾಖಲು








