ಶಿವಮೊಗ್ಗ: ಜನಿವಾರವು ಬ್ರಾಹ್ಮಣ ಸಮುದಾಯದ ಸಂಕೇತವಾಗಿದೆ. ಅದನ್ನು ಅವರು ಎಷ್ಟು ಶಾಸ್ತ್ರೋಕ್ತವಾಗಿ ಹಾಕಿರುತ್ತಾರೆ ಎಂಬುದನ್ನು ನೋಡಿದರು, ಆ ಸಮುದಾಯದವರಿಗೆ ಅದರ ಮಹತ್ವ ಗೊತ್ತು. ಸಿಇಟಿ ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿ ಜನಿವಾರ ತೆಗೆಸಿದ್ದು ಸರಿಯಲ್ಲ. ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಇಂದು ಸಾಗರ ನಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಗೆ ಭೇಟಿ ನೀಡಿ, ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಿಇಟಿ ಪರೀಕ್ಷೆ ಬರೆಯಲು ಬಂದಂತ ಅಭ್ಯರ್ಥಿಯ ಜನಿವಾರ ತೆಗೆಸಿದ ಘಟನೆಯನ್ನು ಖಂಡಿಸುತ್ತೇನೆ. ಜನಿವಾರ ಅಂದ್ರೆ ಆ ಸಮುದಾಯದ ಭಾವನೆಯ ಒಂದು ಸಂಕೀತವಾಗಿದೆ. ಆ ಸಮುದಾಯದಲ್ಲಿ ಜನಿವಾರಕ್ಕೆ ಅಷ್ಟೇ ಮಹತ್ವವಿದೆ. ಜನಿವಾರವನ್ನು ಪರೀಕ್ಷೆಯ ವೇಳೆಯಲ್ಲಿ ತೆಗೆಯಬೇಕು ಎನ್ನುವ ಕೀಳುಮಟ್ಟಕ್ಕೆ ಅಧಿಕಾರಿಗಳು ಇಳಿದಿದ್ದು ಖಂಡನೀಯ, ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಾನು ಸರ್ಕಾರದ ವಿರುದ್ಧವೇ ಉಗ್ರವಾದ ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಕೆ ನೀಡಿದರು.
ಯಾವುದೇ ಸಮುದಾಯವನ್ನು, ಯಾವುದೇ ಧಾರ್ಮಿಕತೆಯನ್ನು ಟೀಕಿಸುವುದು ಸರಿಯಲ್ಲ. ಹೀಗೆ ಜನಿವಾರ ತೆಗೆಯುವುದು ತಪ್ಪು. ಜನಿವಾರದ ಘಟನೆಯನ್ನು ನಾನು ಖಂಡಿಸುತ್ತೇನೆ. ಯಾರು ಈ ರೀತಿ ಮಾಡಿದ್ದಾರೋ ತುಂಬಾ ಬೇಸರದ ಸಂಗತಿಯಾಗಿದೆ. ಈ ಘಟನೆಯನ್ನು ಬ್ರಾಹ್ಮಣ ಸಮುದಾಯದವರು ಖಂಡಿಸಿದ್ದಾರೆ. ಸಿಎಂ ಸಿದ್ಧರಾಮಯ್ಯ ಕೂಡ ಖಂಡಿಸಿ, ಸೂಕ್ತ ಕ್ರಮಕ್ಕೆ ಆದೇಶಿಸಿದ್ದಾರೆ. ಜನಿವಾರದ ವಿಚಾರದಲ್ಲಿ ಗೋಪಾಲಕೃಷ್ಣ ಬೇಳೂರು ಸರ್ಕಾರ ಕ್ರಮ ಕೈಗೊಳ್ಳುತ್ತದೋ ಬಿಡುತ್ತದೋ ಗೊತ್ತಿಲ್ಲ. ನಾನಂತೂ ಬಿಡುವುದಿಲ್ಲ. ಈ ಘಟನೆಯನ್ನು ಉಗ್ರವಾಗಿ ಖಂಡಿಸುತ್ತೇನೆ. ಭಾವನೆಗಳಿಗೆ ಧಕ್ಕೆ ತರುವಂತ ಕೆಲಸವನ್ನು ಯಾರೂ ಮಾಡಬಾರದು ಎಂದರು.
ವರದಿ: ವಸಂತ ಬಿ ಈಶ್ವರಗೆರೆ
ಹಿರಿಯ ಪತ್ರಕರ್ತ ‘ರವಿಕುಮಾರ್ ಟೆಲೆಕ್ಸ್’ಗೆ ‘ಹವ್ವಾ ಹಸನ್ ಫೌಂಡೇಶನ್ ಅಬ್ಲುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ’
BREAKING : ಕನ್ನಡಿಗನ ಮೇಲೆ ಹಲ್ಲೆ ನಡೆಸಿದ ‘ವಿಂಗ್ ಕಮಾಂಡರ್ ‘ವಿರುದ್ಧ ಕಠಿಣ ಕ್ರಮ : CM ಸಿದ್ದರಾಮಯ್ಯ ಆದೇಶ.!