ಶಿವಮೊಗ್ಗ: ನಾಗರಾಜ್ ಗುಡ್ಡೇಮನೆ ಅವರ ಅರಮನೆ ವೃದ್ಧಾಶ್ರಮದಿಂದ ಹೊರ ತಂದಿರುವಂತ 2026ರ ಕ್ಯಾಲೆಂಡರ್ ಅನ್ನು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ತಮ್ಮ ಸ್ವಗೃಹದಲ್ಲಿ ಬಿಡುಗಡೆ ಮಾಡಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿರುವಂತ ಶಾಸಕ ಗೋಪಾಲಕೃಷ್ಣ ನಿವಾಸದಲ್ಲಿ ನಾಗರಾಜ್ ಗುಡ್ಡೇಮನೆ ನಡೆಸುತ್ತಿರುವಂತ ಅರಮನೆ ವೃದ್ಧಾಶ್ರಮದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದಂತ ಅವರು, ಇಂದು ಕುಟುಂಬಗಳು ಹೊಡೆದು ಹೋಗುತ್ತಿವೆ. ಸಿಂಗಲ್ ಫ್ಯಾಮಿಲಿ ಲೈಫ್ ಹೆಚ್ಚಾಗಿದೆ. ಮಕ್ಕಳೊಂದಿಗೆ, ಸೊಸೆಯೊಂದಿಗೆ ಹಿರಿಯ ನಾಗರೀಕರು ಹೊಂದಾಣಿಕೆ ಮಾಡಿಕೊಳ್ಳುವುದೇ ಕಷ್ಟವಾಗಿದೆ. ಹೀಗಾಗಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಇದು ಖೇದಕರ ಸಂಗತಿಯಾಗಿದೆ ಎಂದರು.
ಅರಮನೆ ವೃದ್ಧಾಶ್ರಮದ ಎಲ್ಲಿದೆ? ಏನೆಲ್ಲಾ ಸೌಲಭ್ಯಗಳಿವೆ?
ಸಾಮಾಜಿಕ ಸೇವಕರಾದಂತ ನಾಗರಾಜ್ ಗುಡ್ಡೇಮನೆ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲ್ಲೂಕಿನ ಮೂಸವಳ್ಳಿ ಬಳಿಯಲ್ಲಿ ಅರಮನೆ ಎನ್ನುವಂತ ವೃದ್ಧಾಶ್ರಮವನ್ನು ಆರಂಭಿಸಿದ್ದಾರೆ. ಮಕ್ಕಳಿಂದ ದೂರವಾಗಿ ತಮ್ಮ ವಯೋಕಾಲದಲ್ಲಿ ಬದುಕುವಂತ ವೃದ್ಧರಿಗಾಗಿ ಈ ಆಶ್ರಮವನ್ನು ನಿರ್ಮಿಸಲಾಗಿದೆ. ಎಲ್ಲಾ ರೀತಿಯ ಸೌಲಭ್ಯವನ್ನು ಅರಮನೆ ವೃದ್ಧಾಶ್ರಮ ಒಳಗೊಂಡಿದೆ.
ಮಕ್ಕಳು ವಿವಿಧ ಕಾರಣದಿಂದಾಗಿ ತಮ್ಮ ವಯಸ್ಸಾದ ತಂದೆ-ತಾಯಿಗಳನ್ನು ನೋಡಿಕೊಳ್ಳಲು ಸಾಧ್ಯವಾಗದಂತವರು, ಇಲ್ಲಿಗೆ ಕರೆದುಕೊಂಡು ಬಂದು ಸೇರಿಸಬಹುದು. ಅವರಿಗೆ ಉತ್ತಮ ಸೌಲಭ್ಯದೊಂದಿಗೆ ಮನೆಯ ವಾತಾವರಣವನ್ನು ಒದಗಿಸಿಕೊಡುವಂತ ಕೆಲಸವನ್ನು ಮಾಡಲಿದ್ದೇವೆ. ಸಾಗರದ ಸಮೀಪದ ಸಿದ್ದಾಪುರದ ಮೂಸವಳ್ಳಿ ಗ್ರಾಮದಲ್ಲಿ ಅರಮನೆ ವೃದ್ಧಾಶ್ರಮ ಇದಾಗಿದೆ.
ಅರಮನೆ ವೃದ್ಧಾಶ್ರಮದಲ್ಲಿ ಉತ್ತಮ ಆಹಾರ, ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ, ಔಷದಗಳ ಪೂರೈಕೆ, ತರಬೇತಿ ಪಡೆದ ಆಯಾಗಳ ಮೂಲಕ ವೃದ್ಧರ ಸೇವೆಯ ಕೆಲಸವನ್ನು ಮಾಡಲಿದೆ. ಈಗಾಗಲೇ ಐದಾರು ವೃದ್ಧರನ್ನು ಅರಮನೆ ವೃದ್ಧಾಶ್ರಮದಲ್ಲಿ ಪೋಷಣೆ ಮಾಡಲಾಗುತ್ತಿದೆ.

ಅರಮನೆ ವೃದ್ಧಾಶ್ರಮಕ್ಕೆ ಸೇರಿಸಲು 9900133833ಗೆ ಸಂಪರ್ಕಿಸಲು ಮನವಿ
ಈ ಬಗ್ಗೆ ಮಾಹಿತಿ ಹಂಚಿಕೊಂಡ ನಾಗರಾಜ್ ಗುಡ್ಡೇಮನೆ ಅವರು, ಹಿರಿಯರ ಸೇವೆ ಮಾಡುವ ಉದ್ದೇಶದಿಂದ ಅರಮನೆ ವೃದ್ಧಾಶ್ರಮ ನಡೆಸಲಾಗುತ್ತಿದೆ. ಪೋಷಕರೊಂದಿಗೆ ಹೊಂದಾಣಿಕೆಯಾದಂತವರು ತಮ್ಮ ವಯೋ ವೃದ್ಧರನ್ನು ಇಲ್ಲಿಗೆ ಕರೆದುಕೊಂಡು ಬಂದು ಸೇರಿಸಬಹುದಾಗಿದೆ. ಅವರನ್ನು ಉತ್ತಮ ರೀತಿಯಲ್ಲಿ ಪಾಲನೆ ಮಾಡುವ ಜವಾಬ್ದಾರಿ ನಮ್ಮದಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಅರಮನೆ ವೃದ್ಧಾಶ್ರಮಕ್ಕೆ ವೃದ್ಧರನ್ನು ಸೇರಿಸೋದಕ್ಕೆ 9900133833 ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು ಎಂಬುದಾಗಿ ಹೇಳಿದ್ದಾರೆ.
ಇಂದು ಅರಮನೆ ವೃದ್ಧಾಶ್ರಮದ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ವೇಳೆ ಸಾಗರ ನಗರಸಭೆಯ ಮಾಜಿ ವಿರೋಧಪಕ್ಷದ ನಾಯಕ ಗಣಪತಿ ಮಂಡಗಳಲೆ, ಮಾಜಿ ಎಪಿಎಂಸಿ ಅಧ್ಯಕ್ಷ, ಸೂರನಗದ್ದೆ ಮಂಜು, ಧನಂಜಯ ಆರೋಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ.., ಸಂಪಾದಕರು..
ನಾಳೆಯಿಂದ ‘ಸಿಗಂದೂರು ಜಾತ್ರಾ’ ಮಹೋತ್ಸವ: ‘ಭಕ್ತರ ಸ್ವಾಗತ’ಕ್ಕೆ ಸಕಲ ಸಿದ್ಧತೆ








