ಶಿವಮೊಗ್ಗ: ಆರ್ ಬಿ ಡಿ ಮೋಟಾರ್ಸ್ ನ ರಾಯಲ್ ಎನ್ ಫೀಲ್ಡ್ ಶೋ ರೂಂ ಮಾರಾಟ ಮಳಿಗೆಯನ್ನು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಉದ್ಘಾಟಿಸಿದರು. ಈ ಮೂಲಕ ಸಾಗರದಲ್ಲಿ ಆರ್ ಬಿ ಡಿ ಮೋಟಾರ್ಸ್ ನ ರಾಯಲ್ ಎನ್ ಫೀಲ್ಡ್ ಶೋ ರೂಂ ಗ್ರಾಂಡ್ ಓಪನ್ ಆದಂತೆ ಆಗಿದೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಜೋಗ ರಸ್ತೆಯಲ್ಲಿ ಆರ್ ಬಿ ಡಿ ಮೋಟಾರ್ಸ್ ನೂತನ ರಾಯಲ್ ಎನ್ ಫೀಲ್ಡ್ ಶೋ ರೂಂ ಅನ್ನು ನಟ ಮಾಸ್ಟರ್ ಆನಂದ್ ಜೊತೆಗೂಡಿ ಶಾಸಕ ಗೋಪಾಲಕೃಷ್ಣ ಬೇಳೂರು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ, ಮಾರಾಟಕ್ಕೆ ಚಾಲನೆ ನೀಡಿದರು.
ಈ ಬಳಿಕ ಮಾತನಾಡಿದಂತ ಅವರು ಸಾಗರದಲ್ಲಿ ರಾಯಲ್ ಎನ್ ಫೀಲ್ಡ್ ಶೋ ರೂಂ ಓಪನ್ ಆಗಿದೆ. ಇಂದಿನ ಯುವಕರ ಬೈಕ್ ಕ್ರೇಜ್ ತಣಿಸೋದಕ್ಕೆ ಬುಲೆಟ್ ಗಳು ಇಲ್ಲಿಯೇ ಲಭ್ಯವಾಗಲಿದೆ. ಯುವಕರ ಅಚ್ಚು ಮೆಚ್ಚಿನ ಮಾರಾಟ ಮಳಿಗೆ ಸಾಗರದಲ್ಲಿ ತೆರೆದಿದ್ದು ಸಂತೋಷದ ವಿಷಯವಾಗಿದೆ. ಸಾಗರದ ಶಾಸಕನಾದಂತ ನನಗೂ ಹೆಸರು, ಆರ್ ಬಿ ಡಿ ಮೋಟಾರ್ಸ್ ಗೂ ಕೀರ್ತಿ ಎಂದು ಹೇಳಿದರು.
ರಾಯಲ್ ಎನ್ ಫೀಲ್ಡ್ ಬೈಕ್ ಗಳನ್ನು ಯುವಕರು, ಐಟಿ-ಬಿಟಿ ಉದ್ಯೋಗಿಗಳು ಹೆಚ್ಚು ಹೆಚ್ಚು ಇಷ್ಟ ಪಡುತ್ತಾರೆ. ನನ್ನ ಮಗ ಕೂಡ ಇದೇ ಬೈಕ್ ಖರೀದಿಗೆ ಮುಂದಾಗಿದ್ದಾನೆ. ಸಾಗರದಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್ ಮಾರಾಟ ಮಳಿಗೆಯನ್ನು ತೆರೆದು ಆರ್ ಬಿ ಡಿ ಮೋಟಾರ್ಸ್ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಿಕೊಡುವಂತ ಕೆಲಸ ಮಾಡಿದೆ. ಈ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ. ಮಾಲೀಕರಾದಂತ ಜಲೀಲ್, ಮಹೇಶ್ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿ ಎಂಬುದಾಗಿ ಶುಭ ಹಾರೈಸಿದರು.
ನಟ ಮಾಸ್ಟರ್ ಆನ್ ಮಾತನಾಡಿ ರಾಯಲ್ ಎನ್ನುವ ಹೆಸರಿನಲ್ಲೇ ರಾಯಲ್ ಇದೆ. ರಾಯಲ್ ಅಂದ್ರೆ ಶ್ರೀ. ಶ್ರೀ ಅಂದ್ರೆ ಲಕ್ಷ್ಮೀ. ರಾಯಲ್ ಬಿಲ್ಡರ್ ಅಂಡ್ ಡೆವಲಪರ್ ನಲ್ಲಿಯೂ ರಾಯಲ್ ಇದೆ. ಶ್ರೀಧರನ ಸ್ಥಳದಲ್ಲಿ ರಾಯಲ್ ಎನ್ ಫೀಲ್ಡ್ ಶೋ ರೂಂ ತೆರೆದಿರುವುದು ಉತ್ತಮವಾದಂತ ಬೆಳವಣಿಗೆಯಾಗಿದೆ. ಆರ್ ಬಿ ಡಿ ಮೋಟಾರ್ಸ್ ರಾಯಲ್ ಎನ್ ಫೀಲ್ಡ್ ಶೋ ರೂಂ ತೆರೆದು ಸ್ಥಳೀಯ ಜನರಿಗೆ ಉದ್ಯೋಗ ನೀಡಿ, ಆರ್ ಬಿ ಡಿಯ ಮಹೇಶ್, ಜಲೀಲ್ ಅನ್ನದಾತರಾಗಿದ್ದಾರೆ. ರಾಯಲ್ ಬಿಲ್ಡರ್ ಎನ್ನುವ ಹೆಸರಿನಲ್ಲಿ ಲಾಯಲ್ಟಿ ಇದೆ. ಆ ಶ್ರೀಧರ ಸ್ವಾಮಿಯ ದಯೆ, ಕೃಪೆ ಇರಲಿದೆ. ಶ್ರೀಧರನೇ ಆ ರಾಯಲ್ ನಲ್ಲಿ ಸೇರಿಕೊಂಡಿದ್ದಾನೆ ಎಂದರು.
ಬೈಕ್ ತೆಗೆದುಕೊಳ್ಳೋದು ಮುಖ್ಯವಲ್ಲ. ಅದರ ಜೊತೆಗೆ ಬೈಕ್ ಅಕ್ಸೆಸೆರೀಸ್ ಕಡೆಗೂ ಗಮನ ಕೊಡಬೇಕು. 350ಕ್ಕೂ ಹೆಚ್ಚು ಸಿಸಿ ಬೈಕ್ ಓಡಿಸುವಾಗ ಕಂಪನಿಯ ಅಕ್ಸೆಸೆರಿಸ್ ಖರೀದಿಸಿ. ಅದು ಹೆಲ್ಮೆಟ್ ಇರಲೀ, ಜಾಕೆಟ್ ಇರಲೀ ಬೇರೆ ಯಾವುದೇ ಇರಲೇ, ಶೋ ರೂಂನಲ್ಲಿಯೇ ಖರೀದಿಸಿ. ಕಡಿಮೆ ಎಂಬುದಾಗಿ ಬೇರೆಡೆ ಖರೀದಿಸಬೇಡಿ. ಕಂಪನಿಯವರೇ ಆ ಬೈಕ್ ಅನುಸಾರವಾಗಿ ಅದಕ್ಕೆ ಹೊಂದಿಕೆಯಾಗುವಂತ ಸುರಕ್ಷತೆಯ ಅಕ್ಸೆಸೆರಿಸ್ ತಯಾರಿಸಿರುತ್ತಾರೆ ಎಂಬುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಮೈತ್ರಿ ಪಾಟೀಲ್, ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಸದಸ್ಯರಾದಂತ ಮಧು ಮಾಲತಿ, ಗಣೇಶ್ ಪ್ರಸಾದ್, ಜಾಕೀರ್, ಕಲಸೆ ಚಂದ್ರಪ್ಪ, ಟಿ.ಡಿ ಮೇಘರಾಜ್, ಗಣೇಶ್ ಶ್ರೀನಿವಾಸ್ ಮೇಸ್ತ್ರಿ, ರವಿ ಕುಗ್ವೆ, ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್.ಎನ್, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಜಯರಾಂ ಸೂರನಗದ್ದೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಮಾಲತೇಶ್ ಸೇರಿದಂತೆ ಇತರರೆ ಗಣ್ಯರು ಹಾಜರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(KUWJ)’ದ ಚುನಾವಣೆಗೆ ಮುಹೂರ್ತ ಫಿಕ್ಸ್
BREAKING: ಸ್ಯಾಂಡಲ್ ವುಡ್ ಹಿರಿಯ ನಟ ಉಮೇಶ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು: ಸ್ಥಿತಿ ಗಂಭೀರ
BIG NEWS: ಮಾಜಿ ಪ್ರಧಾನಿ ದೇವೇಗೌಡರು ಅರೋಗ್ಯವಾಗಿದ್ದಾರೆ, ಆತಂಕಪಡಬೇಕಿಲ್ಲ: ಹೆಚ್.ಡಿ.ಕುಮಾರಸ್ವಾಮಿ