ಶಿವಮೊಗ್ಗ: ಬಳಸಗೋಡಲ್ಲಿ ಜನರು ಅರಣ್ಯ ಭೂಮಿ ಒತ್ತುವರಿ ಮಾಡಿರುವುದಾಗಿ ಸಾಗರದ ಅರಣ್ಯ ಇಲಾಖೆಯ ಅಧಿಕಾರಿಗಳು ನೋಟಿಸ್ ನೀಡಿದ್ದರು. ಇದು ಪ್ರತಿಭಟನೆಗೂ ಕಾರಣವಾಗಿತ್ತು. ಇದರಿಂದ ಸಿಟ್ಟಗೊಂಡ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಸಾಗರದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಪುಲ್ ಕ್ಲಾಸ್ ತೆಗೆದುಕೊಂಡರು.
ಇಂದು ಸಾಗರದ ಪ್ರವಾಸಿ ಮಂದಿರದಲ್ಲಿ ಅರಣ್ಯಾಧಿಕಾರಿಗಳ ಸಭೆ ನಡೆಸಿದಂತ ಅವರು, ನನ್ನ ಗಮನಕ್ಕೆ ಬಾರದೇ ಜನರಿಗೆ ನೋಟಿಸ್ ಕೊಟ್ಟಿದ್ದು ಏಕೆ ಎಂಬುದಾಗಿ ತರಾಟೆಗೆ ತೆಗೆದುಕೊಂಡರು. ಯಾವುದೇ ಕಾರಣಕ್ಕೂ ಜನರಿಗೆ ಒತ್ತುವರಿ ಸಂಬಂಧ ನನ್ನ ಗಮನಕ್ಕೆ ಬಾರದೇ ನೋಟಿಸ್ ನೀಡದಂತೆ ಖಡಕ್ ಸೂಚನೆ ನೀಡಿದರು.
ಬಳಸಗೋಡಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿ ನಿರ್ಮಿಸಲು ಉದ್ದೇಶಿಸಲಾಗಿದೆ. ನಮಗೆ 100 ಎಕರೆ ಬೇಕಿದೆ. ಆದರೇ ಅಲ್ಲಿ 80 ಎಕರೆ ಇದೆ ಎಂಬುದಾಗಿ ಗಮನಕ್ಕೆ ಬಂದಿದೆ. ಯಾವುದೇ ಒತ್ತುವರಿಯಾಗದಂತೆ ಇಲಾಖೆಯವರು ಗಮನ ಹರಿಸಬೇಕು ಎಂದು ಸೂಚಿಸಿದರು.
ಬೆಳ್ಳಂದೂರು ಅರಣ್ಯ ಭೂಮಿ ವಿಚಾರವಾಗಿಯೂ ಚರ್ಚಿಸಿದಂತ ಅವರು, ಕಾನೂನು ಪ್ರಕಾರ ಗೇಣಿದಾರರಿಗೆ ಮೂರು ಎಕರೆ ಬಗರ್ ಹುಕುಂ ಅಡಿಯಲ್ಲಿ ಭೂಮಿ ನೀಡಲು ಅವಕಾಶವಿದೆ. ಅದನ್ನು ಎಲ್ಲರಿಗೂ ಕಾನೂನು ಪ್ರಕಾರ ಹಂಚಿಕೆ ಮಾಡಲಾಗುತ್ತದೆ. ಆದರೇ ಹೊಸದಾಗಿ ಸಾಗರ ತಾಲ್ಲೂಕಿನಲ್ಲಿ ಎಲ್ಲಿಯೂ ಅರಣ್ಯ ಭೂಮಿ ಒತ್ತುವರಿ ಮಾಡದಂತೆ ಕ್ರಮವಹಿಸಲು ಸೂಚಿಸಿದರು.
ಈ ಸಭೆಯಲ್ಲಿ ಸಾಗರ ಡಿಎಫ್ಓ ಮೋಹನ್ ಕುಮಾರ್, ಎಸಿಎಫ್ ರವಿ.ಕೆ, ರವೀಂದ್ರ ನಾಯಕ್, ವೈಲ್ಡ್ ಲೈಫ್ ಕಾರ್ಗಲ್ ಪ್ರಭಾರ ಉಪ ವಲಯ ಅರಣ್ಯಾಧಿಕಾರಿ ಸಿಂಧು, ಸಾಗರ ಆರ್ ಎಫ್ ಓ ಅಣ್ಣಪ್ಪ, ಕೂಗಾರು ವೈಲ್ಡ್ ಲೈಭ್ ಆರ್ ಎಫ್ ಓ ಮಹೇಶ್, ಅಂಬಾರಗೋಡ್ಲು ಆರ್ ಎಫ್ ಓ ಶಾಂತಪ್ಪ ಪೂಜಾರ್, ಹೊಸನಗರ ಆರ್ ಎಫ್ ಓ ಅನಿಲ್ ಕುಮಾರ್, ಕಾರ್ಗಲ್ ಆರ್ ಎಫ್ ಓ ರಾಘವೇಂದ್ರ ಅಗಸೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ.., ಸಂಪಾದಕರು
ಆರೋಗ್ಯ ಸಂಜೀವಿನಿ ಜಾರಿ: ಸಿಎಂ, ಡಿಸಿಎಂಗೆ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಧನ್ಯವಾದ
BREAKING: ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆ ಕೈಗೊಳ್ಳುವ ಶಿಕ್ಷಕರಿಗೆ ಗೌರವಧನ ಬಿಡುಗಡೆ ಮಾಡಿ ಸರ್ಕಾರ ಆದೇಶ