ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ತನ್ನದೇ ಆದ ಇತಿಹಾಸವನ್ನು ಹೊಂದಿದೆ. 75 ಸದಸ್ಯರನ್ನು ವಿವಿಧ ಕ್ಷೇತ್ರಗಳಿಂದ ಆಯ್ಕೆ ಮಾಡಿ ಅಲ್ಲಿಂದ ಕಳುಹಿಸಿ ಕೊಡಲಾಗುತ್ತದೆ. ಈಗ ವಿಧಾನ ಪರಿಷತ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡರು ಸ್ಪರ್ಧಿಸಿದ್ದಾರೆ. ಇವರನ್ನು ಕಳೆದ 24 ವರ್ಷಗಳಿಂದ ನಾನು ಸದನದ ಒಳಗೆ ಹಾಗೂ ಹೊರಗೆ ನಿಕಟವರ್ತಿಯಾಗಿ ನೋಡಿದ್ದೇನೆ. ಈ ಎಲ್ಲ ಕ್ಷೇತ್ರಗಳ ಶಿಕ್ಷಕರ, ರೈತರ ಹಾಗೂ ಧ್ವನಿ ಇಲ್ಲದವರ ಪರವಾಗಿ ನಿರಂತರವಾಗಿ ಹೋರಾಟವನ್ನು ಮಾಡಿಕೊಂಡು ಬಂದಿದ್ದಾರೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಹೇಳಿದ್ದಾರೆ.
ಅವರು ಇಂದು ಮಂಡ್ಯದ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರೈತರ ಪರವಾಗಿ ಇವರು ನಿರಂತರವಾಗಿ ಧ್ವನಿ ಎತ್ತಿದ್ದಾರೆ. ಅಲ್ಲದೆ ಮಂಡ್ಯದಲ್ಲಿ ಮೈಶುಗರ್ ಫ್ಯಾಕ್ಟರಿ ಮರು ಪ್ರಾರಂಭ ಆಗುವುದರ ಹಿಂದೆ ಇವರ ಪಾತ್ರ ಸಿಂಹಪಾಲು ಇದೆ. ರೈತರಿಗೆ ಕಾಲ ಕಾಲಕ್ಕೆ ಹಣ ಪಾವತಿಯಾಗಬೇಕು. ಜೊತೆಗೆ ಹೊಸ ಕಾರ್ಖಾನೆ ಸ್ಥಾಪನೆಯಾಗಬೇಕು ಎಂದು ಸದನದಲ್ಲಿ ಹೋರಾಟ ಮಾಡುತ್ತಲೇ ಬಂದಿದ್ದಾರೆ ಎಂದು ಹೇಳಿದರು.
ಯಾರ ಸಮಸ್ಯೆ ಇದ್ದರೂ ಧ್ವನಿ ಎತ್ತುವ ನಾಯಕ
ಇದೆಲ್ಲದರ ಜೊತೆಗೆ ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ, ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವೇ ಇರಬಹುದು, ವೈದ್ಯಕೀಯ ಶಿಕ್ಷಣ ಇರಬಹುದು, ತಾಂತ್ರಿಕ ಶಿಕ್ಷಣ ಇರಬಹುದು, ಪಾಲಿಟೆಕ್ನಿಕ್’ಗೆ ಸಂಬಂಧಪಟ್ಟಂತೆ ಇರಬಹುದು, ಈ ರೀತಿಯ ಯಾವುದೇ ಸಮಸ್ಯೆಗಳಿದ್ದರೂ ಶಿಕ್ಷಕರ, ಉಪನ್ಯಾಸಕ ವರ್ಗದ, ವಿದ್ಯಾರ್ಥಿಗಳ ಪರವಾಗಿ ವಿಧಾನ ಪರಿಷತ್ತಿನಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಹೇಳಿದರು.
5ನೇ ಬಾರಿಗೆ ಆಯ್ಕೆ ಮಾಡಲು ಮನವಿ
ಶಿಕ್ಷಕ ಬಂಧುಗಳು ಇಂತಹ ಒಬ್ಬ ಪ್ರತಿನಿಧಿಯನ್ನು ಪಡೆಯಲು ಹೆಮ್ಮೆ ಪಡಬೇಕು. ಮರಿತಿಬ್ಬೇಗೌಡರು, ನಿಮ್ಮೆಲ್ಲರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಾರೆ. ಹೀಗಾಗಿ ಶಿಕ್ಷಕ ಬಂಧುಗಳು ಅವರ ಕೈ ಹಿಡಿದು 5ನೇ ಬಾರಿಗೆ ವಿಧಾನ ಪರಿಷತ್ತಿಗೆ ಕಳುಹಿಸಿಕೊಡಬೇಕು ಎಂದು ಶಾಸಕರಾದ ದಿನೇಶ್ ಗೂಳಿಗೌಡ ಮನವಿ ಮಾಡಿದರು.
ಜೂನ್ 3 ರಂದು ಚುನಾವಣೆ ನಡೆಯಲಿದ್ದು, ಮೈಸೂರು, ಮಂಡ್ಯ, ಹಾಸನ, ಚಾಮರಾಜ ನಗರ ಸೇರಿ 4 ಜಿಲ್ಲೆಗಳ ಶಿಕ್ಷಕರು ಸಮಯೋಚಿತವಾಗಿ ಚಿಂತಿಸಿ ಮರಿತಿಬ್ಬೇಗೌಡ ಅವರನ್ನು ಆಯ್ಕೆ ಮಾಡುವಂತೆ ಶಾಸಕ ದಿನೇಶ್ ಗೂಳಿಗೌಡ ಮನವಿ ಮಾಡಿದರು.
ಅಭ್ಯರ್ಥಿ ಮರಿತಿಬ್ಬೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಡಿ.ಗಂಗಾಧರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ, ನಗರಸಭೆ ಸದಸ್ಯ ಶ್ರೀಧರ್ ಹಾಗೂ ಶಿಕ್ಷಣ ಪ್ರತಿನಿಧಿಗಳು ಇದ್ದರು.
ನಾಗೇಂದ್ರರ ವಜಾ ಯಾಕಿಲ್ಲ? ಹಗರಣ CBI ತನಿಖೆಗೆ ಏಕೆ ಕೊಟ್ಟಿಲ್ಲ?: ಸಿ.ಟಿ.ರವಿ ಪ್ರಶ್ನೆ
Alert : ʻಮೊಬೈಲ್ʼ ಬಳಕೆದಾರೇ ಗಮನಿಸಿ : ಈ ಕರೆಗಳನ್ನು ಸ್ವೀಕರಿಸದಂತೆ ಸರ್ಕಾರ ಎಚ್ಚರಿಕೆ