ಬೆಂಗಳೂರು ದಕ್ಷಿಣ: ಬೈಕಿನಲ್ಲಿ ತೆರಳುತ್ತಿದ್ದಂತ ಶಾಸಕ ಸಿ.ಪಿ ಯೋಗೇಶ್ವರ್ ಅವರ ಭಾವಗೆ ಟಾಟಾ ಏಸ್ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ತಿಪ್ಪಮಾರನಹಳ್ಳಿ ಬಳಿಯಲ್ಲಿ ಶಾಸಕ ಸಿ.ಪಿ ಯೋಗೇಶ್ವರ್ ಅವರ ಭಾವ ಶಿವಲಿಂಗಯ್ಯ(57) ತೆರಳುತ್ತಿದ್ದರು. ಅವರಿಗೆ ತಿಟ್ಟಮಾರನಹಳ್ಳಿ ಬಳಿ ತಗಚಗೆರೆ ಗ್ರಾಮದಲ್ಲಿ ಟಾಟಾ ಏಸ್ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ.
ಮೃತ ಶಿವಲಿಂಗಯ್ಯ ಅವರು ಶಾಸಕ ಸಿ.ಪಿ ಯೋಗೇಶ್ವರ್ ದೊಡ್ಡಪ್ಪನ ಮಗಳ ಪತಿಯಾಗಿದ್ದರು. ಬೈಕ್ ಸವಾರ ಶಿವಲಿಂಗಯ್ಯ ತಲೆ, ಕಾಲಿಗೆ ಗಂಭೀರವಾಗಿ ಗಾಯವಾಗಿತ್ತು. ತೀವ್ರ ರಕ್ತಸ್ತ್ರಾವವಾಗಿ ಆಸ್ಪತ್ರೆಗೆ ಸಾಗಿಸುತ್ತಿದ್ದಂತ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ರಾಮಲಿಂಗಾರೆಡ್ಡಿ, ಸೌಮ್ಯಾರೆಡ್ಡಿ ಮಹತ್ವದ ಹೆಜ್ಜೆ: ಉಚಿತವಾಗಿ ಮಣ್ಣಿನ ಗಣಪತಿ ವಿತರಣೆ
ಸುಪ್ರಸಿದ್ಧ ಸಾಗರದ ‘ಮಾರಿಕಾಂಬಾ ಜಾತ್ರಾ ಮಹೋತ್ಸವ’ಕ್ಕೆ ಮುಹೂರ್ತ ಫಿಕ್ಸ್