Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯುಜಿಸಿ ನೆಟ್ ಜೂನ್ 2026: ಆನ್‌ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ವಿಸ್ತರಣೆ; ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಪೋಕ್ಸೊ ಪ್ರಕರಣದಲ್ಲಿ ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು ಮಂಜೂರು

BREAKING: 1ನೇ ತರಗತಿ ದಾಖಲಾತಿ ವಯೋಮಿತಿ ಸಡಿಲಿಕೆ: ವಾರದಲ್ಲಿ ಸೂಕ್ತ ತೀರ್ಮಾನಕ್ಕೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಸರ್ಕಾರಿ ಭೂಮಿ’ ಒತ್ತುವರಿಯಾದ್ರೆ ಸುಮ್ಮನಿರಲ್ಲ: ‘ವಿಎ’ಗಳಿಗೆ ‘ಶಾಸಕ ಬೇಳೂರು ಗೋಪಾಲಕೃಷ್ಣ’ ಖಡಕ್ ವಾರ್ನಿಂಗ್
KARNATAKA

‘ಸರ್ಕಾರಿ ಭೂಮಿ’ ಒತ್ತುವರಿಯಾದ್ರೆ ಸುಮ್ಮನಿರಲ್ಲ: ‘ವಿಎ’ಗಳಿಗೆ ‘ಶಾಸಕ ಬೇಳೂರು ಗೋಪಾಲಕೃಷ್ಣ’ ಖಡಕ್ ವಾರ್ನಿಂಗ್

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನಲ್ಲಿ ಸರ್ಕಾರಿ ಭೂಮಿ, ಕಾಡುಗಳನ್ನು ಕಡಿದು ಕೃಷಿಗಾಗಿ ಭೂಮಿ ಒತ್ತುವರಿ ಮಾಡಲಾಗುತ್ತಿದೆ. ಇದನ್ನು ನಿಯಂತ್ರಿಸೋ ಕ್ರಮ ವಹಿಸಬೇಕು. ಸರ್ಕಾರಿ ಭೂಮಿ ಒತ್ತುವರಿಯಾದ್ರೆ ನಾನು ಸುಮ್ಮನಿರಲ್ಲ ಅಂತ ವಿಎಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಇಂದು ಸಾಗರ ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಪ್ರಗತಿ ಪರಿಶೀಲನಾ ಸಭೆಯನ್ನು ಕಂದಾಯ ಇಲಾಖೆಯ ವಿಎಗಳೊಂದಿಗೆ ನಡೆಸಿದರು. ತಾಲೂಕಿನಲ್ಲಿ ಎಕರೆಗಟ್ಟಲೆ ಒತ್ತುವರಿಗೆ ಅವಕಾಶ ನೀಡಬಾರದು. ಒಂದು ವೇಳೆ ಹಾಗೆ ಒತ್ತುವರಿ ಮಾಡಿದ್ರೆ ಅಂತವರ ವಿರುದ್ಧ ದೂರು ದಾಖಲಿಸಿ, ಕೇಸ್ ಹಾಕುವಂತೆ ಸೂಚಿಸಿದರು.

ನಾಡಕಲಸಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 48 ಎಕರೆ ಒತ್ತುವರಿ ತೆರವುಗೊಳಿಸಿ

ನಾಡಕಲಸಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತ್ಯಾಗರ್ತಿ ಬಳಿ 48 ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ. ಈ ಭೂಮಿಯನ್ನು ಗೋಶಾಲೆಗೆ ಮೀಸಲಿರಿಸಿದಂತ ಜಮೀನಾಗಿದೆ. ಈ ಕೂಡಲೇ 48 ಎಕರೆ ಒತ್ತುವರಿ ಜಮೀನು ತೆರವುಗೊಳಿಸಬೇಕು. ತ್ಯಾಗರ್ತಿ ಸಮೀಪದಲ್ಲಿ ಗೋಶಾಲೆ ನಿರ್ಮಾಣ ಮಾಡಲು ಆದೇಶ ಮಾಡಬೇಕು ಎಂಬುದಾಗಿ ತಹಶೀಲ್ದಾರರಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಸೂಚಿಸಿದರು.

ಸಮನ್ವಯತೆಯಿಂದ ಕೆಲಸ ಮಾಡಬೇಕು

ಸಾಗರ ತಾಲೂಕಿನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ವೈಲ್ಡ್ ಲೈಫ್ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಜೊತೆಗೂಡಿ ಕೆಲಸ ಮಾಡಬೇಕು. ಸಮನ್ವಯತೆಯಿಂದ ಒಟ್ಟಾಗಿ ಕೆಲಸ ಮಾಡಬೇಕು ಎಂದರು.

ಅಧಿಕಾರಿಗಳ ಮೇಲೆ ಹಲ್ಲೆ ಸಹಿಸುವುದಿಲ್ಲ

ನಾನು ನಮ್ಮ ಅಧಿಕಾರಿಗಳ ಮೇಲೆ ಹಲ್ಲೆ ಮಾಡುವುದನ್ನು ಸಹಿಸುವುದಿಲ್ಲ. ಹಾಗಂತ ಅಕ್ರಮದಲ್ಲಿ ತೊಗಿದ್ದು ನನಗೆ ಗೊತ್ತಾದ್ರೆ ಸುಮ್ಮನಿರುವ ಮನುಷ್ಯ ನಾನಲ್ಲ ಅಂತ ಅಧಿಕಾರಿಗಳು, ಸಾರ್ವಜನಿಕರಿಗೆ ಎಚ್ಚರಿಕೆಯನ್ನು ಶಾಸಕ ಬೇಳೂರು ಗೋಪಾಲಕೃಷ್ಣ ನೀಡಿದರು.

ಮಳೆಹಾನಿ ಪ್ರದೇಶಗಳಿಗೆ ತಕ್ಷಣವೇ ಹೋಗಿ

ಮಳೆಹಾನಿ ಪ್ರದೇಶಗಳಿಗೆ ತಕ್ಷಣವೇ ಹೋಗಬೇಕು. ಸ್ಥಳ ಮಹಜರ್ ಮಾಡಿ ಕೂಡಲೇ ಸಂತ್ರಸ್ತರಿಗೆ ಪರಿಹಾರ ನೀಡುವ ಕ್ರಮ ಕೈಗೊಳ್ಳಬೇಕು. ಪಿಡಿಓಗಳಿಗೆ ಈಗಾಗಲೇ ಮನೆಯಿಂದ ಮನೆಗೆ ಹಾನಿಯಾದ್ರೇ 10,000 ಕೊಡುವಂತೆ ಸೂಚಿಸಲಾಗಿದೆ. ಮಳೆಯಿಂದ ಮನೆ ಹಾನಿಯಾದ್ರೇ ಸರಿಯಾದ ರೀತಿಯ ವರದಿ ನೀಡಬೇಕು. ಆದಷ್ಟು ಸರಿಯಾಗಿ ಪರಿಹಾರ ನೀಡುವ ಕ್ರಮವಾಗಬೇಕು ಎಂಬುದಾಗಿ ವಿಎಗಳಿಗೆ ಸೂಚಿಸಿದರು.

ಸೂರನಗದ್ದೆ ಜಗದೀಶ್ ವಿರುದ್ಧ ಕ್ರಿಮಿನಲ್ ಕೇಸ್ ಬುಕ್ ಮಾಡಿ

ಸೂರನಗದ್ದೆ ಜಗದೀಶ್ ಎಂಬುವರು ಕಾಡು ಒತ್ತುವರಿ ಮಾಡಿ ಅಕ್ರಮವಾಗಿ ಬೇಲಿ ಹಾಕಲಾಗಿದೆ. ಈಗಾಗಲೇ ಬೇಲಿ ಹಾಕಿದಂತ ವೇಳೆಯಲ್ಲಿ ತೆರವುಗೊಳಿಸಲಾಗಿತ್ತು. ಈಗ ಮತ್ತೆ ಬೇಲಿ ತೆರವುಗೊಳಿಸಿದ್ರೂ ಮತ್ತೆ ಹಾಕಿದ್ದಾರೆ ಎಂಬುದಾಗಿ ವಿಎಗಳು ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಗಮನಕ್ಕೆ ತಂದರು.

ಪದೇ ಪದೇ ಅಕ್ರಮವಾಗಿ ಒತ್ತುವರಿ ಮಾಡುತ್ತಿರುವಂತ ಸೂರನಗದ್ದೆ ಜಗದೀಶ್ ವಿರುದ್ಧ ಕ್ರಿಮಿನಲ್ ಕೇಸ್ ಬುಕ್ ಮಾಡುವಂತೆ ತಹಶೀಲ್ದಾರ್ ಗೆ ತಿಳಿಸಿದರು. ಪೊಲೀಸರಿಗೆ ಸೂಚಿಸಿ, ತಕ್ಷಣವೇ ಈ ಕ್ರಮವಾಗಬೇಕು ಅಂತ ಖಡಕ್ ಆದೇಶವನ್ನು ಇಂದಿನ ಕಂದಾಯ ಇಲಾಖೆಯ ವಿಎಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಡಿದರು.

ಭೂ ಒತ್ತುವರಿ ಸ್ಕ್ವಾಡ್ ರಚನೆಗೆ ಆಗ್ರಹ

ಈಗಾಗಲೇ ಇಂಧನ ಇಲಾಖೆ ಸೇರಿದಂತೆ ಇತರೆ ಇಲಾಖೆಯಲ್ಲಿ ವಿಜ್ಯುಲೆನ್ಸ್ ಟೀಂ ಪ್ರತ್ಯೇಕವಾಗಿದೆ. ಆದ್ರೇ ಭೂಮಿ ಒತ್ತುವರಿ ಸಂಬಂಧ ಒತ್ತುವರಿ ತೆರವು ಸ್ಕ್ವಾಡ್ ಇಲ್ಲ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕಂದಾಯ ಸಚಿವ ಕೃಷ್ಣಭೈರೇಗೌಡ ಅವರೊಂದಿಗೆ ಚರ್ಚಿಸಲಾಗಿದೆ. ಪ್ರತ್ಯೇಕವಾಗಿ ಭೂಮಿ ಒತ್ತುವರಿ ಸ್ಕ್ವಾಡ್ ರಚಿಸೋದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಮುಂಬರುವಂತ ವಿಧಾನಮಂಡಲದ ಅಧಿವೇಶನದಲ್ಲೂ ಈ ಬಗ್ಗೆ ಮಾತನಾಡುತ್ತೇನೆ ಎಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.

ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬನ್ನಿ

ಸಾಗರದ ಮಿನಿ ವಿಧಾನಸೌಧದಲ್ಲಿನ ಕಂದಾಯ ಇಲಾಖೆ ಕಚೇರಿಗೆ ಸರಿಯಾದ ಸಮಯಕ್ಕೆ ಅಧಿಕಾರಿ, ಸಿಬ್ಬಂದಿಗಳು ಬರಬೇಕು. ಜನರ ಕೆಲಸ ತ್ವರಿತವಾಗಿ ಆಗಬೇಕು. ಸರ್ಕಾರದ ಕೆಲಸ ದೇವರ ಕೆಲಸದಂತೆ ಮಾಡಬೇಕು ಎಂಬುದಾಗಿ ಹೇಳಿದರು.

ಮಳೆಗಾಲ ಮುಗಿಯುವವೆಗೂ ಯಾರಿಗೂ ರಜೆ ಇಲ್ಲ

ಮಳೆಗಾಲ ಆರಂಭಗೊಂಡಿದೆ. ಅಲ್ಲಲ್ಲಿ ಮಳೆಯಿಂದ ಹಾನಿಗಳು ಉಂಟಾಗುತ್ತಿವೆ. ವಿಎಗಳು ಮನೆಹಾನಿ, ಕೊಟ್ಟಿಗೆ ಹಾನಿಯಂತ ಸಂದರ್ಭದಲ್ಲಿ ತ್ವರಿತ ಮಾಹಿತಿ ನೀಡಿ, ಪರಿಹಾರದ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಕ್ರಮವಹಿಸೋ ಕಾರಣ ಮಳೆಗಾಲ ಮುಗಿಯುವವರೆಗೂ ಯಾರಿಗೂ ರಜೆ ಇಲ್ಲ. ಯಾರಿಗೂ ರಜೆ ಹಾಕೋದಕ್ಕೆ ಅವಕಾಶವಿಲ್ಲ ಎಂದರು.

ವರದಿ: ವಸಂತ ಬಿ ಈಶ್ವರಗೆರೆ

BIG NEWS: ಸದ್ಯಕ್ಕೆ ‘ಸ್ಯಾಂಡಲ್ ವುಡ್’ನಿಂದ ‘ನಟ ದರ್ಶನ್’ ನಿಷೇಧವಿಲ್ಲ: ಎನ್.ಎಂ ಸುರೇಶ್ ಸ್ಪಷ್ಟನೆ

ರಾಜ್ಯದ ಜನತೆಗೆ ಗುಡ್ ನ್ಯೂಸ್: ಶೀಘ್ರವೇ ಹೊಸದಾಗಿ ‘254 ನಮ್ಮ ಕ್ಲಿನಿಕ್’ ಆರಂಭ

Share. Facebook Twitter LinkedIn WhatsApp Email

Related Posts

ಪೋಕ್ಸೊ ಪ್ರಕರಣದಲ್ಲಿ ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು ಮಂಜೂರು

1 Min Read

BREAKING: 1ನೇ ತರಗತಿ ದಾಖಲಾತಿ ವಯೋಮಿತಿ ಸಡಿಲಿಕೆ: ವಾರದಲ್ಲಿ ಸೂಕ್ತ ತೀರ್ಮಾನಕ್ಕೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ!

2 Mins Read

ಮ್ಯಾಡ್ರಿಡ್‌ನ ‘ಗ್ಲೋಬಲ್ ವಾಟರ್ ಸಮಿಟ್ 2026’: ಜಾಗತಿಕ ಟಾಪ್ 5 ಪಟ್ಟಿಯಲ್ಲಿ ಮಿಂಚಿದ ಬೆಂಗಳೂರು ಜಲಮಂಡಳಿ!

3 Mins Read
Recent News

ಯುಜಿಸಿ ನೆಟ್ ಜೂನ್ 2026: ಆನ್‌ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ವಿಸ್ತರಣೆ; ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಪೋಕ್ಸೊ ಪ್ರಕರಣದಲ್ಲಿ ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು ಮಂಜೂರು

BREAKING: 1ನೇ ತರಗತಿ ದಾಖಲಾತಿ ವಯೋಮಿತಿ ಸಡಿಲಿಕೆ: ವಾರದಲ್ಲಿ ಸೂಕ್ತ ತೀರ್ಮಾನಕ್ಕೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ!

BREAKING: ಟ್ವಿಶಾ ಶರ್ಮಾ ಪ್ರಕರಣ: ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಭೋಪಾಲ್ ಕೋರ್ಟ್!

State News
KARNATAKA

ಪೋಕ್ಸೊ ಪ್ರಕರಣದಲ್ಲಿ ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು ಮಂಜೂರು

By ವಸಂತ ಬಿ ಈಶ್ವರಗೆರೆ KARNATAKA 1 Min Read

ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಅವರಿಗೆ ಎದುರಾಗಿದ್ದ ಸಂಭವನೀಯ ಪೋಕ್ಸೊ (POCSO) ಕಾಯ್ದೆಯಡಿ ಬಂಧನದ…

BREAKING: 1ನೇ ತರಗತಿ ದಾಖಲಾತಿ ವಯೋಮಿತಿ ಸಡಿಲಿಕೆ: ವಾರದಲ್ಲಿ ಸೂಕ್ತ ತೀರ್ಮಾನಕ್ಕೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ!

ಮ್ಯಾಡ್ರಿಡ್‌ನ ‘ಗ್ಲೋಬಲ್ ವಾಟರ್ ಸಮಿಟ್ 2026’: ಜಾಗತಿಕ ಟಾಪ್ 5 ಪಟ್ಟಿಯಲ್ಲಿ ಮಿಂಚಿದ ಬೆಂಗಳೂರು ಜಲಮಂಡಳಿ!

ಬಿಜೆಪಿ ನಾಯಕರು ಫೋಟೋ ಶೂಟ್ ಬಿಟ್ಟು ನಿತ್ಯ ಸಾರ್ವಜನಿಕ ಸಾರಿಗೆ ಬಳಸುತ್ತಾರಾ?: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.