ಶಿವಮೊಗ್ಗ: ಕಾಗೋಡು ತಿಮ್ಮಪ್ಪನವರಿಗೆ ಈಗಾಗಲೇ ದೇವರಾಜ ಅರಸು ಪ್ರಶಸ್ತಿಯನ್ನು ಸರ್ಕಾರ ನೀಡಿ ಗೌರವಿಸಿದೆ. ಆ ಬಳಿಕ ಅವರಿಗೆ ಪ್ರಶಸ್ತಿಗಳ ಸುರಿಮಳೆಯೇ ಬಂದಿದೆ. ಇಂದು ನಾಗರೀಕ ಸನ್ಮಾನ ಅತ್ಯಂತ ಮಹತ್ವದ್ದು. ಅದು ಈ ಭೂಮಿ ಕೊಟ್ಟಂತ ನಾಯಕನಿಗೆ ಸಲ್ಲಬೇಕಾಗದ್ದು. ಆದರೂ ಅವರಿಗೆ ಡಾಕ್ಟರೇಟ್ ನೀಡಬೇಕು. ಡಾ.ಕಾಗೋಡು ತಿಮ್ಮಪ್ಪ ಆಗಬೇಕು. ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ವಿವಿಯಿಂದ ಗೌರವ ಡಾಕ್ಟರೇಟ್ ಕೊಡಲೇಬೇಕು ಎಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತಾಳಗುಪ್ಪದಲ್ಲಿ ಮಾಜಿ ಸ್ಪೀಕರ್, ಹಿರಿಯ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಅವರಿಗೆ ನಾಗರೀಕ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಭೂಮಿಯನ್ನು ಕೊಡುವಂತ ನಿರ್ಧಾರ ಯಾರು ಮಾಡಲಿಲ್ಲ. ಕರ್ನಾಟಕದಲ್ಲಿ ರೈತರ ಪರವಾಗಿ ಧ್ವನಿ ಎತ್ತಿದವರು ಇಬ್ಬರು ಮಾತ್ರ. ಒಬ್ಬರು ದಿವಂಗತ ಎಸ್ ಬಂಗಾರಪ್ಪನವರು, ಮತ್ತೊಬ್ಬರು ನಮ್ಮ ನಾಯಕರಾದಂತ ಕಾಗೋಡು ತಿಮ್ಮಪ್ಪನವರು. ಈ ಮಲೆನಾಡು ಭಾಗದ ಜನರಿಗೆ ಭೂಮಿಯನ್ನು ಕೊಟ್ಟಂತ ಮಹಾನ್ ನಾಯಕರು ಇವರು ಎಂದರು.
ರೈತರು ಕಾರು, ಭಂಗಲೆ, ಮನೆ ಕಟ್ಟಿಸಿಕೊಂಡಿದ್ದೀರಿ ಅಂದರೇ, ಅದು ಕಾಗೋಡು ತಿಮ್ಮಪ್ಪನವರ ಪ್ರತಿಫಲ. ಜನಸಾಮಾನ್ಯರಿಗೆ ಭೂಮಿ ಇಲ್ಲದಂತ ಸಂದರ್ಭದಲ್ಲಿ ಭೂಮಿ ಕೊಡಿಸಿದಂತವರು ಕಾಗೋಡು ಸತ್ಯಗ್ರಹದ ಮೂಲಕ ಕಾಗೋಡು ತಿಮ್ಮಪ್ಪನವರು. ಈ ಹೋರಾಟದಲ್ಲಿ ಕಾಗೋಡು ಮಾಸ್ತಮ್ಮನನ್ನು ನೆನೆಯಲೇ ಬೇಕು ಎಂದರು.
ದೇವರಾಜು ಅರಸು ಪ್ರಶಸ್ತಿ ಸಿಕ್ಕಿರೋದಷ್ಟೇ ಅಲ್ಲ. ಅವರಿಗೆ ಡಾಕ್ಟರೇಟ್ ಪ್ರಶಸ್ತಿ ಕೊಡಿಸಬೇಕು ಎಂಬುದಾಗಿ ತೀರ್ಮಾನಿಸಲಾಗಿದೆ. ಶಿವಪ್ಪ ನಾಯಕ ಕೃಷಿ ವಿವಿಗೆ ಭೂಮಿ ಕೊಡಲಾಗಿದೆ. ಇಂತಹ ವಿವಿಯಿಂದ ಕಾಗೋಡು ತಿಮ್ಮಪ್ಪ ಅವರಿಗೆ ಡಾಕ್ಟರೇಟ್ ಕೊಡಬೇಕು. ಆಗ ವಿವಿಗೂ ಒಂದು ಹೆಮ್ಮ. ನಮ್ಮ ನಾಯಕರಿಗೆ ಡಾಕ್ಟರೇಟ್ ಕೊಟ್ಟ ಖುಷಿ ನಮಗೂ ಇರಲಿದೆ ಎಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಒತ್ತಾಯಿಸಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING: ಜಮ್ಮು-ಕಾಶ್ಮೀರದಲ್ಲಿ ಮತ್ತೆ ಭಯೋತ್ಪದಕರ ಅಟ್ಟಹಾಸ: ಇಬ್ಬರು ವಲಸೆ ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ
Rain Alert : ರಾಜ್ಯದಲ್ಲಿ ಇನ್ನೆರಡು ದಿನ ಭಾರಿ ಮಳೆ : ಈ 13 ಜಿಲ್ಲೆಗಳಲ್ಲಿ ‘ಯಲ್ಲೋ’ ಅಲರ್ಟ್ ಘೋಷಣೆ