ಶಿವಮೊಗ್ಗ: ವಿದ್ಯುತ್ ಮತ್ತು ರಸ್ತೆ ಸಂಪರ್ಕ ಇಲ್ಲದ ಕಗ್ಗತಲ ಗ್ರಾಮ ಉರುಳುಗಲ್ಲು ಮತ್ತಿತರ ಗ್ರಾಮಗಳನ್ನು ಹೊಂದಿರುವ ಬಾನುಕುಳಿ ಗ್ರಾಮ ಪಂಚಾಯಿತಿಯಲ್ಲಿ ಅರಣ್ಯ ಕಾರ್ಖಾನೆ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಸಾಗರ ಶಾಸಕಾರಾದ ಬೇಳೂರು ಗೋಪಾಲಕೃಷ್ಣರವರು ಮತ್ತು ಶಿವಮೊಗ್ಗ ನೂತನ ಜಿಲ್ಲಾಧಿಕಾರಿ ಹೆಗಡೆ ಜಂಟಿಯಾಗಿ ಜನಸ್ಪಂದನ ಸಭೆ ನಡೆಸಿ ಜನರ ಅಹವಾಲು ಆಲಿಸಿದರು.
ಉರುಳುಗಲ್ಲು ಕತ್ತಲು ಕಳೆಯಬೇಕು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಅರಣ್ಯ ಇಲಾಖೆ ಅನಗತ್ಯ ತಡೆ ಒಡ್ಡುವುದು ನಿಲ್ಲಬೇಕು ಎಂದು ಪ್ರಾಸ್ತಾವಿಕ ಮಾತಲ್ಲಿ ಗಟ್ಟಿಯಾಗಿ ದ್ವನಿಸಿದ ಬೇಳೂರು ಸಭೆಯ ಕೊನೆಯಲ್ಲಿ ಜಿಲ್ಲಾಧಿಕಾರಿ ಮತ್ತೂ ಜಿಲ್ಲಾ ಅರಣ್ಯ ಸಂರಕ್ಷಣಾ ಅಧಿಕಾರಿಯ ಎದುರೇ ಅರಣ್ಯ ಅಧಿಕಾರಿಗಳಿಗೆ ಸರಣಿ ಪ್ರಶ್ನೆಗಳ ಜತೆ ಅಂತಿಮವಾಗಿ ಅತಿರೇಕ ಮಾಡಬೇಡಿ ಎಂದು ಸಾರ್ವಜನಿಕರ ಎದುರೇ ಕ್ಲಾಸ್ ತೆಗೆದುಕೊಂಡರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಜನರ ಅಹವಾಲು ಆಲಿಸುವ ಜತೆ ಉರುಲುಗಲ್ಲು ವಿದ್ಯುತ್ ಸಮಸ್ಯೆ ಬಗ್ಗೆ ಫಾರೆಸ್ಟ್ ಕ್ಲಿಯರೆನ್ಸ್ ಬಗ್ಗೆ ವಿಶೇಷ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಜಂಟಿ ಸರ್ವೆ ಪ್ರಕ್ರಿಯೆ ಹದಿನೈದು ದಿನದಲ್ಲಿ ಆರಂಭ ಮಾಡುವ ಬಗ್ಗೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕರು ಬಹಳ ಸ್ಪಷ್ಟವಾಗಿ ರೈತರ ಪರ ನಿಂತದ್ದು, ಕೆಲವು ಅಗತ್ಯ ಕಾಮಗಾರಿಗೆ ಅನುದಾನವನ್ನ ಸ್ಥಳದಲ್ಲಿ ಘೋಷಣೆ ಮಾಡಿದ್ದು ಬಹಳ ಮುಖ್ಯವಾಗಿ ಬಹಳ ಸಹನೆಯಿಂದ ಜನರ ಸಮಸ್ಯೆ ಆಲಿಸಿ ಸಭೆಯನ್ನು ನಿಯಂತ್ರಿಸಿ ಜನರಲ್ಲಿ ವಿಶ್ವಾಸ ತುಂಬಿದ್ದು ಗಮನಾರ್ಹವಾಗಿತ್ತು.
‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ’ಗೆ ಲೋಕಸಭಾ ಚುನಾವಣೆಗೆ ‘ಕರಡು ಪ್ರಣಾಳಿಕೆ’ ಸಲ್ಲಿಕೆ
‘ಏರ್‌ಪೋರ್ಟ್’ಗೆ ಬರಲು ತಡ ಮಾಡಿದ ‘ಪತ್ನಿ’: ‘ಪತಿ’ ಮಾಡಿದ್ದೇನು ಗೊತ್ತಾ?