ನವದೆಹಲಿ: ಭಾರತದ 79 ನೇ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 2035 ರ ವೇಳೆಗೆ ಗಡಿಯಾಚೆಗಿನ ದಾಳಿಗಳನ್ನು ತಡೆಯಲು ಭಾರತವು ವೈಮಾನಿಕ ರಕ್ಷಣಾ ವ್ಯವಸ್ಥೆಯಾದ ಸುದರ್ಶನ ಚಕ್ರ ಮಿಷನ್ ಅನ್ನು ಪ್ರಾರಂಭಿಸಲಿದೆ ಎಂದು ಘೋಷಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡಿದರು.
ಸುದರ್ಶನ ಚಕ್ರ ಮಿಷನ್ ಅನ್ನು ಶಕ್ತಿಯುತ, ಬಹುಸ್ತರದ ರಕ್ಷಣಾ ವ್ಯವಸ್ಥೆ ಎಂದು ಬಣ್ಣಿಸಿದ ಪಿಎಂ ಮೋದಿ, ಇದು “ನಮ್ಮ ದೇಶವನ್ನು ಉಳಿಸುವುದಲ್ಲದೆ, ಆ ಶತ್ರು ದೇಶಕ್ಕೆ ಸೂಕ್ತ ಉತ್ತರವನ್ನು ನೀಡುತ್ತದೆ” ಎಂದು ಹೇಳಿದರು.