ಗದಗ: ನಗರದಲ್ಲಿನ ಮನೆಯೊಂದಕ್ಕೆ ಹಾಡಹಗಲೇ ನುಗ್ಗಿರುವಂತ ಐವರು ದುಷ್ಕರ್ಮಿಗಳು ಮನೆಯಲ್ಲಿರುವಂತ ಟಿವಿ, ಫ್ರಿಜ್ಡ್ ಧ್ವಂಸಗೊಳಿಸಿದ್ರೇ, ಮನೆ ಮುಂದೆ ನಿಂತಿದ್ದಂತ ಜೀಪಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮರೆದಿದ್ದಾರೆ.
ಗದಗ ನಗರದ ಪಂಚಾಕ್ಷರಿ ನಗರದಲ್ಲಿ ಹಾಡು ಹಗಲೇ ಮನೆಗೆ ನುಗ್ಗಿರುವಂತ ಐವರು ದುಷ್ಕರ್ಮಿಗಳು ಮನೆಯಲ್ಲಿದ್ದಂತ ಟಿವಿ, ಫ್ರಿಡ್ಜ್ ಧ್ವಂಸಗೊಳಿಸಿದ್ದಾರೆ. ಇದನ್ನು ಪ್ರಶ್ನಿಸಿದಂತ ಮನೆಯಲ್ಲಿನ ಮಹಿಳೆಯೊಬ್ಬರ ಸೀರೆಯನ್ನು ಹಿಡಿದು ಎಳೆದಾಡಿರೋದಾಗಿ ಅಸಭ್ಯವಾಗಿಯೂ ವರ್ತಿಸಿರೋದಾಗಿ ತಿಳಿದು ಬಂದಿದೆ.
ಇನ್ನೂ ಮನೆಯ ಮುಂದೆ ನಿಂತಿದ್ದಂತ ಜೀಪಿಗೂ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಜೀವು ಧಗಧಗಿಸಿ ಹೊತ್ತಿ ಉರಿದಿದೆ. ಪ್ರಕಾಶ್ ನಿಡಗುಂದಿ ಎಂಬುವರಿಗೆ ಸೇರಿದ ಮನೆಯಲ್ಲೇ ಹೀಗೆ ಐವರು ದುಷ್ಕರ್ಮಿಗಳು ಅಟ್ಟಹಾಸವನ್ನು ಮರೆದಿರೋದಾಗಿದೆ.
ಈ ಘಟನೆಯ ಹಿಂದೆ ಹುಯಿಲಗೋಳ ಗ್ರಾಮ ಪಂಚಾಯ್ತಿ ಸದಸ್ಯರಾದಂತ ಮಿಲಿಂದರ್ ಕಾಳೆ, ನಾಗರಾಜ್ ಕಾಳೆ ವಿರುದ್ಧ ಮನೆಯವರು ಆರೋಪ ಮಾಡಿದ್ದಾರೆ. ಇವರ ಕುಮ್ಮಕ್ಕಿನಿಂದಲೇ ಐವರು ದುಷ್ಕರ್ಮಿಗಳು ನಮ್ಮ ಮನೆಗೆ ನುಗ್ಗಿ ಅಟ್ಟಹಾಸ ಮರೆದಿದ್ದಾರೆ. ನಮ್ಮ ಜೀವನಕ್ಕೆ ಏನಾದ್ರೂ ಆದ್ರೇ ಇವರೇ ಹೊಣೆಗಾರರು ಎಂಬುದಾಗಿ ಹೇಳಿದ್ದಾರೆ.
ಸದಸ್ಯ ಗದಗ ಬಡವಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮನೆಗೆ ನುಗ್ಗಿ ಅಟ್ಟಹಾಸ ಮೆರೆದಂತ ಐವರು ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ.
ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ: ಮೂವರನ್ನು ಬೆತ್ತಲೆಗೊಳಿಸಿ ‘ಮರ್ಮಾಂಗ’ಕ್ಕೆ ಕರೆಂಟ್ ಶಾಕ್ ಕೊಟ್ಟು ಟಾರ್ಚರ್