ನವದೆಹಲಿ: ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಅವರನ್ನು ಮಂಗಳವಾರ ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್‌ನ ಅಥ್ಲೀಟ್ಗಳ ಆಯೋಗದ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ. 49 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಚಾನು, ಈ ಬೆಳವಣಿಗೆಯನ್ನು ಸಹ ವೇಟ್‌ಲಿಫ್ಟರ್‌ಗಳ ಧ್ವನಿಯನ್ನು ಎತ್ತಿಹಿಡಿಯುವ ಅವಕಾಶ ಎಂದು ವ್ಯಾಖ್ಯಾನಿಸಿದ್ದಾರೆ.
ಫೆಡರೇಶನ್ನ ಅಥ್ಲೀಟ್ಗಳ ಆಯೋಗದ ಅಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಿದ ಭಾರತೀಯ ವೇಟ್ಲಿಫ್ಟಿಂಗ್ ಫೆಡರೇಶನ್ಗೆ ನನ್ನ ಅಪಾರ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಸಹ ವೇಟ್ ಲಿಫ್ಟರ್ ಗಳ ಧ್ವನಿಯನ್ನು ಪ್ರತಿನಿಧಿಸುವ ಮತ್ತು ಎತ್ತಿಹಿಡಿಯುವ ಅವಕಾಶವು ನನಗೆ ಬಹಳ ಹೆಮ್ಮೆಯ ವಿಷಯವಾಗಿದೆ ಎಂದು ಟೋಕಿಯೊ ಪದಕ ವಿಜೇತೆ ಮೀರಾಬಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನನ್ನ ಪಾತ್ರದೊಂದಿಗೆ ಬರುವ ಜವಾಬ್ದಾರಿಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡುತ್ತೇನೆ. ಬಾಹ್ಯ ಅಂಶಗಳಿಂದ ವಿಚಲಿತರಾಗದೆ ನಾವು ಕ್ರೀಡೆಯತ್ತ ಗಮನ ಹರಿಸುವುದನ್ನು ಮುಂದುವರಿಸಬಹುದು ಎಂದು ಖಚಿತಪಡಿಸಿಕೊಳ್ಳಲು ಕ್ರೀಡಾಪಟುಗಳ ಧ್ವನಿ ಮತ್ತು ದೃಷ್ಟಿಕೋನಗಳನ್ನು ಎಲ್ಲಾ ಪ್ರಮುಖ ಚಾನೆಲ್ಗಳಲ್ಲಿ ಹರಡುವ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.