ಮೈಸೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಕರಿಯಣ್ಣ ಎಂದಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಸಚಿವ ಜಮೀರ್ ಅಹ್ಮದ್ ವಿರುದ್ಧ ಮುಗಿ ಬಿದ್ದಿದ್ದರು. ಅಲ್ಲದೇ ಜನಾಂಗೀಯ ನಿಂದನೆಯ ಹೇಳಿಕೆ ನೀಡಿದ್ದಂತ ಜಮೀರ್ ವಿರುದ್ಧ ಕಿಡಿಕಾರಿದ್ದರು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವಂತ ಅವರು, ನಾನು ಮೊದಲಿನಿಂದಲೇ ಕರಿಯಣ್ಣ ಅಂತಾನೇ ಕರೆಯೋದು. ಇದಕ್ಕೆ ನೋವಾಗಿದ್ದರೇ ಕ್ಷಮೆ ಕೇಳುವೆ ಎಂದಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ನಾನು ಹೆಚ್.ಡಿ ಕುಮಾರಸ್ವಾಮಿ ಅವರನ್ನು ಮೊದಲಿನಿಂದಲೂ ಕುಮಾರಣ್ಣ ಅಂತಾನೇ ಕರೆಯೋದು. ಅವರು ನನ್ನ ಕುಳ್ಳ ಅಂತ ಕರೆಯುತ್ತಾರೆ. ಆ ಕಾರಣದಿಂದಲೇ ನಾನು ಕರಿಯಣ್ಣ ಅಂತ ಕುಮಾರಸ್ವಾಮಿ ಕರೆದಿದ್ದು ಎಂಬುದಾಗಿ ಸ್ಪಷ್ಟ ಪಡಿಸಿದರು.
ಜೆಡಿಎಸ್ ಮುಖಂಡರಿಗೆ ನಾನು ಕುಮಾರಸ್ವಾಮಿ ಅವರನ್ನು ಕರಿಯಣ್ಣ ಅಂತ ಕರೆದಿದ್ದರಿಂದ ನೋವಾಗಿದೆ ಎಂಬುದಾಗಿ ತಿಳಿದು ಬಂದಿದೆ. ನನ್ನ ಕರಿಯಣ್ಣ ಹೇಳಿಕೆಯಿಂದ ನೋವಾಗಿದ್ದರೇ ದಯವಿಟ್ಟು ಕ್ಷಮಿಸಿ ಎಂಬುದಾಗಿ ಕ್ಷಮೆಯನ್ನು ಕೋರಿದರು.
BREAKING : ನಾನು ಅತ್ಯಾಚಾರ ಮಾಡಿದ್ರೆ ರಕ್ತ ಕಾರಿ ಸಾಯುತ್ತೇನೆ : ಬಿಜೆಪಿ ಶಾಸಕ ಮುನಿರತ್ನ ಹೇಳಿಕೆ