ಬೆಂಗಳೂರು: ರಾಜ್ಯದಲ್ಲಿ ಇ-ಖಾತಾ ವ್ಯವಸ್ಥೆ ಕಡ್ಡಾಯಗೊಳಿಸಿದ ನಂತ್ರ ಹಲವು ಸಮಸ್ಯೆಗೆ ಕಾರಣವಾಗಿತ್ತು. ಈ ಸಮಸ್ಯೆ ನಿವಾರಣೆಗಾಗಿ ನವೆಂಬರ್.13ರಂದು ಕಂದಾಯ, ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿ ಸಚಿವ ನೇತೃತ್ವದಲ್ಲಿ ಮಹತ್ವದ ಸಭೆಯನ್ನು ನಿಗದಿ ಪಡಿಸಲಾಗಿದೆ. ಈ ಸಭೆಯಲ್ಲಿ ಇ-ಖಾತಾ ಸಮಸ್ಯೆಯಲ್ಲಿನ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
ಇಂದು ಕಂದಾಯ ಸಚಿವ ವಿಶೇಷ ಕರ್ತವ್ಯಾಧಿಕಾರಿ ನಿಶ್ಚಯ್ ಎನ್.ಕೆ ಅವರು ಸಭಾ ಸೂಚನಾ ಪತ್ರವನ್ನು ಹೊರಡಿಸಿದದಾರೆ. ಅದರಲ್ಲಿ ಸ್ಥಿರಾಸ್ತಿಗಳ ನೋಂದಣಿಗಾಗಿ, ಗ್ರಾಮಪಂಚಾಯಿತಿ ಮತ್ತು ಸ್ಥಳೀಯ ನಗರ ಸಂಸ್ಥೆಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಇ-ಖಾತೆಗಳನ್ನು ಶೀಘ್ರವಾಗಿ ವಿತರಿಸುವ ಕುರಿತು ಚರ್ಚಿಸಲು ಮಾನ್ಯ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಮತ್ತು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ, ಮಾನ್ಯ ನಗರಾಭಿವೃದ್ಧಿ ಸಚಿವರ ಹಾಗೂ ಪೌರಾಡಳಿತ ಮತ್ತು ಹಜ್ ಸಚಿವರ ಉಪಸ್ಥಿತಿಯಲ್ಲಿ ದಿನಾಂಕ:13/11/2024 ರಂದು ಬೆಳಿಗ್ಗೆ 11:00 ಗಂಟೆಗೆ ಕೊಠಡಿ ಸಂಖ್ಯೆ:222, ವಿಕಾಸ ಸೌಧ, ಬೆಂಗಳೂರು ಇಲ್ಲಿ ಸಭೆಯನ್ನು ಏರ್ಪಡಿಸಿದ್ದು, ಸದರಿ ಸಭೆಗೆ ಹಾಜರಾಗುವಂತೆ ತಮ್ಮನ್ನು ಕೋರಲು ಮಾನ್ಯ ಸಚಿವರಿಂದ ನಿರ್ದೇಶಿತನಾಗಿದ್ದೇನೆ ಎಂದಿದ್ದಾರೆ.
ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳು
1. ಸ್ಥಿರಾಸ್ತಿ ಸಂಬಂಧ ದಸ್ತಾವೇಜುಗಳ ನೋಂದಣಿಗಾಗಿ ಕಾವೇರಿ-2 ಇ-ಸ್ವತ್ತು ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶ ಮತ್ತು ತಂತ್ರಾಂಶವನ್ನು 2014 ರಿಂದಲೇ ಸಂಯೋಜನೆಗೊಳಿಸಿದ್ದು, ನೋಂದಣಿಗಾಗಿ ಇ-ಖಾತಾ ಕಡ್ಡಾಯವಾಗಿರುತ್ತದೆ. ಹಾಗಾಗಿ, ಸಾರ್ವಜನಿಕರಿಗೆ ದಸ್ತಾವೇಜು ನೋಂದಣಿಗಾಗಿ ಇ-ಖಾತಾ ತುರ್ತಾಗಿ ವಿತರಿಸುವ ಕುರಿತು.
2. ಮಂಗಳೂರು ಮತ್ತು ಇತರ ಕೆಲವು ಕಡೆ ವಿತರಿಸುತ್ತಿರುವ ಇ-ಆಸ್ತಿ ಖಾತೆಗಳಲ್ಲಿ ಸ್ಥಿರಾಸ್ತಿಯ ಅಳತೆಯ ವಿವರಗಳು ನಮೂದಾಗದೇ ಇರುವುದರಿಂದ, ಕಾವೇರಿ-2 ತಂತ್ರಾಂಶದಲ್ಲಿ ನೋಂದಣಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ.
3. ಕೃಷಿ ಜಮೀನು ಭೂ ಪರಿವರ್ತನೆ ನಂತರ ನಿವೇಶನ ಬಿಡುಗಡೆಗೊಳಿಸುವ ಪೂರ್ವದಲ್ಲಿ ಉದ್ಯಾನವನ (Park), CA ಸೈಟ್ ಮತ್ತು ರಸ್ತೆ ಜಮೀನುಗಳ ಪರಿತ್ರಾಜನ ಪತ್ರ ನೀಡಲು ಅನುಕೂಲವಾಗುವಂತೆ ಇರುವ ಜಮೀನಿಗೆ ಇ-ಖಾತೆ ಮಂಜೂರು ಮಾಡುವ ಕುರಿತು.
4. ಒಂದು ಸ್ಥಿರಾಸ್ತಿಯನ್ನು ವಿಭಜಿಸಿ, ಮಾರಾಟ ಮಾಡುವುದಕ್ಕಾಗಿ, ನೋಂದಣಿಗಾಗಿ ಇ-ಖಾತೆಯನ್ನು ವಿಭಜಿಸಬೇಕಾಗಿರುತ್ತದೆ. ವಿಭಜಿತ ಖಾತೆ ಇಲ್ಲದಿದ್ದಲ್ಲಿ ದಸ್ತಾವೇಜು ನೋಂದಣಿಗೆ ಸಾಧ್ಯವಾಗುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು, ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು.
5. ಮಹಾನಗರ ಪಾಲಿಕೆಗಳಲ್ಲಿ ನೀಡುತ್ತಿರುವ TDR ಗಳನ್ನು ಪುನರ್ ಉಪಯೋಗಿಸದಂತೆ ತಡೆಯಲು, TDR ಗಳಿಗೂ ಸಹ ಇ-ಖಾತೆಯನ್ನು ವಿತರಿಸುವ ಬಗ್ಗೆ.
6. ಆಸ್ತಿ ನೊಂದಣಿಯ ನಂತರ XML ದತ್ತಾಂಶವನ್ನು ಇ ವೃತ್ತಿಗೆ ಕಳುಹಿಸಿದ ನಂತರ ಖಾತೆ ಮಾಡುವ/ತಿರಸ್ಕರಿಸುವ ಬಗ್ಗೆ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ Delete Option ಬಳಸುತ್ತಿರುವ ಬಗ್ಗೆ
7. ಭೂಪರಿವರ್ತನೆಯ ನಂತರ ಸಂಬಂಧಿಸಿದ ಯೋಜನಾ ಪ್ರಾಧಿಕಾರದಿಂದ ಲೇಔಟ್ : ಪ್ಲಾನ್‌ಗೆ ಅನುಮತಿ ಪಡೆಯದೆ ಜಮೀನನ್ನು ಮಾರಾಟ ಮಾಡಬೇಕಾಗಿದ್ದಲ್ಲಿ ಅಂತಹ ಆಸ್ತಿಗಳಿಗೆ ಉಂಡೆ ಖಾತೆ ಮಾಡುವುದು ಹಾಗೂ ಇಂತಹ ಜಮೀನುಗಳನ್ನು ಮಾರಾಟ ಮಾಡುವಾಗ ಮಾರ್ಗಸೂಚಿ ದರ ನಿಗಧಿಪಡಿಸುವ ಬಗ್ಗೆ.
ಪ್ರಯಾಣಿಕರಿಗೆ ಗುಡ್ ನ್ಯೂಸ್: ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲುಗಳ ಅವಧಿ ವಿಸ್ತರಣೆ
ಸಿಎಂ, ಡಿಸಿಎಂ ವಿರುದ್ಧ ಕುಮಾರಸ್ವಾಮಿ, ದೇವೇಗೌಡರು ವೈಯಕ್ತಿಕ ಆರೋಪಗಳನ್ನು ಮಾಡುತ್ತಿದ್ದಾರೆ: ಚಲುವರಾಯಸ್ವಾಮಿ