ಬೆಂಗಳೂರು: ಮುಂದಿನ ವರ್ಷದಿಂದ ಐವರು ಶರಣರಾದ ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗಪೆದ್ದಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್ .ತಂಗಡಗಿ ಅವರು ಘೋಷಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಬಸವಹರಳಯ್ಯ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾಯಕ ಶರಣರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಐವರು ಶರಣರ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕೆಂದು ವೇದಿಕೆ ಮೇಲಿದ್ದ ಗಣ್ಯರ ಮನವಿಗೆ ಕೂಡಲೇ ಸ್ಪಂದಿಸಿದ ಸಚಿವರು, ಪ್ರಶಸ್ತಿ ನೀಡುವ ಸಂಬಂಧ ಸಮಿತಿಯನ್ನು ರಚಿಸಿ, ಮುಂದಿನ ವರ್ಷದಿಂದ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.
ಬೀದರ್ ನಲ್ಲಿ ದೋಹರ್ ಕಕ್ಕಯ್ಯ ಅವರ ಸ್ಮಾರಕ ನಿರ್ಮಿಸಲು ಇಲಾಖೆ ವತಿಯಿಂದ ಕ್ರಮಕೈಗೊಳ್ಳಲಾಗುವುದು ಸಚಿವರು ಇದೇ ವೇಳೆ ಸಚಿವರು ಭರವಸೆ ನೀಡಿದರು.
ಇನ್ನು ಸಮಾಜದ ವಿವಿಧ ಸ್ತರಗಳಿಂದ ಬಂದ ಪ್ರತಿಯೊಬ್ಬ ವಚನಕಾರರೂ ತಮ್ಮ ಕಾಯಕಗಳನ್ನು ಮಾಡುತ್ತಲೇ, ತಮ್ಮ ಜೀವನಾನುಭವಗಳನ್ನು ವಚನಗಳ ಮೂಲಕ ಹಾಡಿ ಈ ಲೋಕಕ್ಕೆ ಬಹುದೊಡ್ಡ ಉಪಕಾರ ಮಾಡಿದ್ದಾರೆ ಎಂದರು.
ಸಮಾಜದ ಎಲ್ಲಾ ಸೌಲಭ್ಯ ಮತ್ತು ಅವಕಾಶಗಳು ಸಮಾಜದ ಅತ್ಯಂತ ಕಟ್ಟಕಡೆಯ ಸ್ತರದ ವ್ಯಕ್ತಿಗೂ ಸಲ್ಲಬೇಕು ಎಂಬ ಉದ್ದೇಶದಿಂದಾಗಿ ಎಲ್ಲರಿಗೂ ವಿದ್ಯೆ, ದಾಸೋಹ, ಲಿಂಗಸಂಸ್ಕಾರ ನೀಡಿ ವಚನಕಾರರನ್ನಾಗಿಸುವ ಮೂಲಕ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ನೀತಿಯನ್ನು ತೋರಿದ ಈ ಯುಗದಲ್ಲಿ ಸಾವಿರಾರು ಶರಣರು, ನೂರಾರು ವಚನಕಾರರು ಆಗಿಹೋಗಿದ್ದಾರೆ ಎಂದು ಮೆಲುಕು ಹಾಕಿದರು.
ಆದರ್ಶಗಳನ್ನು ಪಾಲಿಸಿ:
ಶರಣರು ನಡೆದ ಬಂದ ಹಾದಿಯಲ್ಲೇ ನಾವು ಸಾಗಬೇಕು. ಶರಣರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಪ್ರತಿಯೊಂದು ಸಮಾಜದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರುತ್ತವೆ. ಆದರೆ ಅದೆಲ್ಲವನ್ನು ಪಕ್ಕಕ್ಕಿಟ್ಟು ಮುನ್ನಡೆದಾಗ ಸಮಾಜಕ್ಕೆ ಒಳಿತಾಗುತ್ತದೆ. ಒಗ್ಗಟ್ಟಿನಿಂದ ಆಯಾ ಸಮುದಾಯಗಳು ಗಟ್ಟಿಯಾಗುತ್ತವೆ. ಸಂಘಟನೆ ಮತ್ತು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಸಣ್ಣ ಸಮಾಜಗಳ ಬಗ್ಗೆ ಒಲವು ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ರಾಜ್ಯದಲ್ಲಿ ಎಸ್ ಸಿಪಿ ಮತ್ತು ಟಿಎಸ್ಪಿ ಯೋಜನೆಗಳನ್ನು ಜಾರಿಗೆ ತಂದವರು ನಮ್ಮ ಮುಖ್ಯಮಂತ್ರಿಗಳು. ಹಿಂದುಳಿದ ಮತ್ತು ಅತೀ ಹಿಂದುಳಿದ ಸಮುದಾಯದವರ ಅಭಿವೃದ್ಧಿಗೆ ನಮ್ಮ ಸರ್ಕಾರ ಕಟಿಬದ್ಧವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಅಖಿಲ ಕರ್ನಾಟಕ ಡೋಹರ ಕಕ್ಕಯ್ಯ ಸಮಾಜದ ಅಧ್ಯಕ್ಷ ಸಂತೋಷ್ ಸುರೇಂದ್ರ ಸವಣೂರು, ಮಾದಿಗ ಸಮುದಾಯದ ಎಂ.ಗುರುಮೂರ್ತಿ, ಆದಿಜಾಂಬವ ಸಮಾಜದ ಕಾರ್ಯಾಧ್ಯಕ್ಷ ಸಿದ್ದರಾಕು, ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
BREAKING: ಜೆಇಇ ಮೇನ್ 2025 ಅಂತಿಮ ಕೀ ಉತ್ತರ ಪ್ರಕಟ: 12 ಪ್ರಶ್ನೆಗಳನ್ನು ಔಟ್ | JEE Main 2025
Shocking News: ಆಸ್ಪತ್ರೆಯಲ್ಲಿ ಸತ್ತಿದ್ದಾನೆಂದು ಊರಿಗೆ ತರುವಾಗ ಬದುಕಿದ ವ್ಯಕ್ತಿ: ಶಾಕ್ ಆದ ಹಾವೇರಿ ಜನರು
‘ಆಧಾರ್’ ಇದ್ರೆ ಸಾಕು 50,000 ರೂ.ಗಳವರೆಗೆ ತ್ವರಿತ ಸಾಲ.! ಈಗಲೇ ಆನ್ ಲೈನ್’ನಲ್ಲಿ ಅರ್ಜಿ ಸಲ್ಲಿಸಿ!