ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣದ ಸಂಬಂಧ ವಿಧಾನ ಪರಿಷತ್‌ನಲ್ಲಿ ಚರ್ಚೆ ವೇಳೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಉತ್ತರದಿಂದ ಸದಸ್ಯ ಸಿ ಟಿ ರವಿ ಅವರು ತಬ್ಬಿಬ್ಬಾದ ಪ್ರಸಂಗ ನಡೆಯಿತು.
ನಿಯಮ 68 ರಲ್ಲಿ ಅಡಿ ಮಾತನಾಡಿದ ಸಿ ಟಿ ರವಿ ರಾಜ್ಯದಲ್ಲಿ ನಡೆದ ಹಗರಣಗಳಿಗೆ ಹೋಲಿಸಿದರೆ ಇದು ಹಗಲು ದರೋಡೆ ಎಂದರೆ ತಪ್ಪಾಗಲಾರದು, ಇದು ಬ್ರಹ್ಮಾಂಡ ಭ್ರಷ್ಟಾಚಾರ. ಲೂಟಿ ಮಾಡಿರುವವರ ಜೊತೆಗೆ ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರಿ ಪ್ರಾಯೋಜಿತ ಕೊಲೆ. ಈ ಕೊಲೆಗೆ ಕಾರಣ ಸರ್ಕಾರ. ಹಣಕಾಸು ಇಲಾಖೆ ನಿರ್ವಹಿಸುವ ಮುಖ್ಯಮಂತ್ರಿಗಳ ಮೂಗಿನಡಿಯಲ್ಲೇ ಈ ಹಗರಣ ನಡೆದಿದೆ. ಹಣಕಾಸು ಇಲಾಖೆ ಗಮನಕ್ಕೆ ಬಂದೇ ಇಲ್ಲವೇ ಎಂದು ಪ್ರಶ್ನಿಸಿದರು.
ಇಷ್ಟು ಎಚ್ಚರ ವಹಿಸಿದ್ದರೆ ಹಗರಣವೇ ನಡೆಯುತ್ತಿರಲಲ್ಲ. ಈಗ ಎದ್ದೆದ್ದು ಕೂರ್ತಿದ್ದೀರಲ್ಲ. ಮಲಕ್ಕೊಂಡಿದ್ದೀರಾ ಏನ್ ಮಾಡ್ತಾ ಇದ್ದೀರಿ ಎಂದು ರವಿ ಅವರು ಧ್ವನಿ ಏರಿಸಿ ಮಾತನಾಡಿದರು.
ಇದರಿಂದ ಆಕ್ರೋಶಗೊಂಡ ಸಚಿವ ಸಂತೋಷ್ ಲಾಡ್ ಅವರು, ಮಧ್ಯಪ್ರದೇಶದಲ್ಲಿ ಪ್ರಧಾನ ಮಂತ್ರಿ ವಿಮೆ ಯೋಜನೆಯಲ್ಲಿ ಒಂದೇ ಖಾತೆಗೆ 35 ಸಾವಿರ ಕೋಟಿ ಹಣ ಹೋಗಿದೆ, ಇದು ಪ್ರಧಾನ ಮಂತ್ರಿಗಳ ಗಮನಕ್ಕೆ ಬರಲಿಲ್ಲವೇ? ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಸಿದ ರವಿ ಅವರು, ನನಗೊತ್ತಿಲ್ಲ. ನನಗೆ ಸಂಬಂಧವೇ ಇಲ್ಲ ಎಂದರು. ಈ ಉತ್ತರದಿಂದ ಮತ್ತಷ್ಟು ಕೋಪಗೊಂಡ ಸಂತೋಷ್ ಲಾಡ್ ಅವರು, ಮಹಾಲೇಖಪಾಲರ ಸಿಎಜಿ ವರದಿ ತಗೊಂಡು ನೋಡಿ. ಆ ವರದಿ ಓದಿರಿ ಆನ್‌ಲೈನ್ ನಲ್ಲೇ ಇದೆ ಎಂದರು.
ಸಂತೋಷ್ ಲಾಡ್ ಅವರ ಉತ್ತರದಿಂದ ತಬ್ಬಿಬ್ಬಾದ ರವಿ ಅವರು, ಹಾರಿಕೆಯ ಉತ್ತರ ನೀಡಲು ಮುಂದಾದರು. ಆದರೆ ಲಾಡ್ ಅವರು ರವಿ ಅವರ ಉತ್ತರವನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಲಾಡ್ ಗದರಿಕೆಗೆ ಬಿಜೆಪಿಗರು ಥಂಡಾ ಹೊಡೆದದ್ದು ಎಲ್ಲರ ಗಮನ ಸೆಳೆಯಿತು.
ವಯಸ್ಸಾದ ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ವಿರುದ್ಧ MRNA-HPV ಲಸಿಕೆ ಬಳಸಲು ಸರ್ಕಾರ ಪರಿಗಣನೆ ?