ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ನೂತನವಾಗಿ ನಿರ್ಮಿಸಲಿರುವ KSRTC ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆಯನ್ನು ಹಾಗೂ ಸಿಬ್ಬಂದಿಗಳ ನೂತನ ವಸತಿ ಗೃಹಗಳ ಉದ್ಘಾಟನೆಯನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ನೆರವೇರಿಸಿದರು.
ಚಿಕ್ಕಮಗಳೂರು ಬಸ್ ನಿಲ್ದಾಣದ ಶಂಕುಸ್ಥಾಪನಾ ಸಿಬ್ಬಂದಿಗಳ ನೂತನ ವಸತಿ ಗೃಹವನ್ನು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್ ಹಾಗೂ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಸಾರಿಗೆ ಸಚಿವರು, ಬಸ್ ನಿಲ್ದಾಣ ಆಗಬೇಕೆನ್ನುವುದು ಬಹಳ ಹಿಂದಿನಿಂದಲೂ ಬೇಡಿಕೆಯಿತ್ತು. 2025ರಲ್ಲಿ ರೂ.19.87 ಕೋಟಿ ವೆಚ್ಚದಲ್ಲಿ ಒಂದು ಎಕರೆ 20 ಗುಂಟೆ ನಿವೇಶನದಲ್ಲಿ ಆಧುನಿಕ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಚಿಕ್ಕಮಗಳೂರು ಸಾರಿಗೆ ವಿಭಾಗಕ್ಕೆ ಸೇರಿರುವ ಪ್ರಮುಖ ಸ್ಥಳಗಳಿಗೆ ಸಮಗ್ರ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ
1. ಅರಸೀಕೆರೆಯಲ್ಲಿ 01 ಎಕರೆ 7.5 ಗುಂಟೆ ವಿಸ್ತೀರ್ಣದಲ್ಲಿ ರೂ 1958 .00 ಲಕ್ಷಗಳ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣದ ನಿರ್ಮಾಣಕ್ಕೆ ದಿನಾಂಕ:26-07-2025 ರಂದು ಸನ್ಮಾನ್ಯ ಮುಖ್ಯ ಮಂತ್ರಿಗಳಿಂದ ಶಂಕುಸ್ಥಾಪನೆನೆರವೇರಿಸಲಾಯಿತು
2. ಕಡೂರು ಬಸ್ ನಿಲ್ದಾಣ 2 ಎಕರೆ 30 ಗುಂಟೆ ವಿಸ್ತೀರ್ಣದಲ್ಲಿ ರೂ 12 ಕೋಟಿ ವೆಚ್ಚದಲ್ಲಿ,
3. ತರೀಕೆರೆ ಬಸ್ ನಿಲ್ದಾಣ 02 ಎಕರೆ 16 ಗುಂಟೆ, ರೂ 9.15 ಕೋಟಿ ವೆಚ್ಚದಲ್ಲಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ .
4. ಕಡೂರು ಬಸ್ ಘಟಕದ ನಿವೇಶನದಲ್ಲಿ ನಿರ್ಮಿಸಿರುವ ರೂ.123 ಲಕ್ಷಗಳ ವೆಚ್ಚದ ವಸತಿ ಗೃಹಕ್ಕೆ ದಿನಾಂಕ: 24-09-2025 ರಂದು ಉದ್ಘಾಟನೆ.
ಮುಂದುವರೆದು, ಚಿಕ್ಕಮಗಳೂರಿನಲ್ಲಿ ರೂ 2.30 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಒಂದು ಬಿ ಎಚ್ ಕೆ ಮೂರು ಅಂತಸ್ತಿನ ಸಿಬ್ಬಂದಿ ವಸತಿಗೃಹಗಳನ್ನು ಸಹ ದಿನಾಂಕ 18-11-2025 ರಂದು ಉದ್ಘಾಟಿಸಲಾಗಿದೆ. ನೌಕರರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರವು ಪ್ರಸಕ್ತ ವರ್ಷ ಹೊಸದಾಗಿ 2000 ಬಸ್ಸುಗಳನ್ನು ಸೇರ್ಪಡೆಗೊಳಿಸಲು ನಾಲ್ಕು ನಿಗಮಗಳಿಗೆ ಅನುಮೋದನೆ ನೀಡಿದ್ದು, ಅದರಲ್ಲಿ 900 ಬಸ್ಸುಗಳನ್ನು ಕೆ ಎಸ್ ಆರ್ ಟಿ ಸಿ ಗೆ ನೀಡಲಾಗಿದ್ದು, ನಿಗಮದ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಿಗೆ ಸದರಿ ಬಸ್ಸುಗಳನ್ನು ಹಂಚಿಕೆ ಮಾಡುವ ಸಂದರ್ಭದಲ್ಲಿ ಚಿಕ್ಕಮಗಳೂರು ವಿಭಾಗಕ್ಕೆ ಸಹ ಹೊಸ ಬಸ್ಸುಗಳನ್ನು ನೀಡಲಾಗುವುದು. ಶಕ್ತಿ ಯೋಜನೆಯಡಿ 600 ಕೋಟಿ ಮಹಿಳಾ ಟಿಕೇಟ್ ವಿತರಣೆಯಾಗಿ ಹೊಸ ಮೈಲಿಗಲ್ಲನ್ನು ದಾಖಲಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಟಿ.ಡಿ.ರಾಜೇಗೌಡ, ಶಾಸಕ ಹೆಚ್.ಡಿ. ತಮ್ಮಯ್ಯ, ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಕ.ರಾ.ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಮಾನ್ಯ ಅಧ್ಯಕ್ಷ ಬಿ.ಹೆಚ್.ಹರೀಶ್, ನಗರಸಭೆ ಅಧ್ಯಕ್ಷೆ ಬಿ.ಶೀಲಾ ದಿನೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್ ಇದ್ದರು.
ALERT : ತೊಳೆಯದ `ತಲೆದಿಂಬು’ ಬಳಸುವವರೇ ಎಚ್ಚರ : ಇದರಲ್ಲಿವೆ `ಟಾಯ್ಲೆಟ್ ಸೀಟ್’ ಗಿಂತ ಡೇಂಜರ್ ಬ್ಯಾಕ್ಟೀರಿಯಾ.!
BREAKING: ಬೆಂಗಳೂರಲ್ಲಿ ‘RBI ಅಧಿಕಾರಿ’ಗಳ ಸೋಗಿನಲ್ಲಿ ‘ATM ವಾಹನ’ ಅಡ್ಡಗಟ್ಟಿ 7.11 ಕೋಟಿ ದರೋಡೆ








