ಬೆಂಗಳೂರು: ಬಿಎಂಟಿಸಿ ನೌಕರರ ಒಳಿತಿಗಾಗಿ ಕಾರ್ಮಿಕ ಕಲ್ಯಾಣದತ್ತ ಮತ್ತೊಂದು ಪ್ರಗತಿ ಹೆಜ್ಜೆಯನ್ನು ಸಚಿವ ರಾಮಲಿಂಗಾರೆಡ್ಡಿ ಇರಿಸಿದ್ದಾರೆ. ಬಿಎಂಟಿಸಿ ನೌಕರರ ಏಳಿಗೆಗಾಗಿ ಬ್ಯಾಂಕ್ ಆಫ್ ಬರೋಡಾ ಜತೆ ಐದು ವರ್ಷಗಳ ವಿಮಾ ಒಡಂಬಡಿಕೆ ಮಾಡಿಕೊಂಡಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೌಕರರ ಭದ್ರತೆ ಮತ್ತು ಕಲ್ಯಾಣಕ್ಕೆ ಬದ್ಧವಾಗಿದೆ. ಈ ನಿಟ್ಟಿನಲ್ಲಿ, ನೌಕರರು ತಮ್ಮ ಕರ್ತವ್ಯ ನಿರ್ವಹಣೆಯ ವೇಳೆ ಅಥವಾ ವ್ಯಕ್ತಿಗತ ಅಪಘಾತದಿಂದ ಮೃತಪಟ್ಟರೆ ಅವರ ಕುಟುಂಬದವರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ, ಸಂಸ್ಥೆಯು ಬ್ಯಾಂಕ್ ಆಫ್ ಬರೋಡಾದೊಂದಿಗೆ ಐದು ವರ್ಷಗಳ ಅವಧಿಗೆ ವಿಮಾ ಸೇವೆಗಳ ಒಡಂಬಡಿಕೆ ಮಾಡಿಕೊಂಡಿದೆ.
ಈ ಒಡಂಬಡಿಕೆ 2025ರ ಜುಲೈ 25 ರಂದು ಬೆಂ.ಮ.ಸಾ.ಸಂಸ್ಥೆ ಹಾಗೂ ಬ್ಯಾಂಕ್ ಆಫ್ ಬರೋಡಾ ನಡುವಿನ ಸಹಕಾರದ ಒಂದು ಹೊಸ ಅಧ್ಯಾಯವಾಗಿದೆ. ಈ ವಿಶೇಷ ಸಂದರ್ಭದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವರು ರಾಮಲಿಂಗಾರೆಡ್ಡಿ ಅವರು ಹಾಗೂ ಬ್ಯಾಂಕ್ ಆಫ್ ಬರೋಡಾದ ಮನೋಜ್ ಚಾಯಾಣಿ, ಪ್ರಧಾನ ಮಹಾಪ್ರಬಂಧಕರು ಹಾಗೂ ಬೆಂಗಳೂರು ವಲಯದ ವಲಯಾಧಿಕಾರಿಗಳು ಒಡಂಬಡಿಕೆಯ ಪತ್ರವನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ಒಡಂಬಡಿಕೆಯ ಮುಖ್ಯ ಅಂಶಗಳು:
ವಿತರಣಾ ಬ್ಯಾಂಕ್: ಬ್ಯಾಂಕ್ ಆಫ್ ಬರೋಡಾ
ಅರ್ಹತೆ: ಈ ಬ್ಯಾಂಕಿನಲ್ಲಿ ವೇತನ ಖಾತೆ ಹೊಂದಿರುವ ಬಿಎಂಟಿಸಿ ನೌಕರರು/ಅಧಿಕಾರಿಗಳು
ಪ್ರಮುಖ ವಿಮಾ ಸೌಲಭ್ಯಗಳು:
1. ✅ ವೈಯಕ್ತಿಕ ಅಪಘಾತದ ಮರಣ – ₹1.00 ಕೋಟಿ ಪರಿಹಾರ
2. ✅ ಕರ್ತವ್ಯ ನಿರ್ವಹಣೆ ವೇಳೆ ಅಪಘಾತ ಮರಣ – ₹1.25 ಕೋಟಿ ಪರಿಹಾರ
3. ✅ ವಿಮಾನ ಅಪಘಾತದ ಮರಣ – ₹1.00 ಕೋಟಿ ಪರಿಹಾರ
4. ✅ ಶಾಶ್ವತ ಪೂರ್ಣ ಅಂಗವಿಕಲತೆ (PTD) – ₹1.00 ಕೋಟಿ ಪರಿಹಾರ
5. ✅ ಶಾಶ್ವತ ಭಾಗಶಃ ಅಂಗವಿಕಲತೆ (PPD) – ₹75 ಲಕ್ಷ ಪರಿಹಾರ
6. ✅ ಸ್ವಾಭಾವಿಕ ಮರಣ – ₹10 ಲಕ್ಷ ಪರಿಹಾರ
ಈ ಒಡಂಬಡಿಕೆಯು ಬಿಎಂಟಿಸಿ ನೌಕರರಿಗೆ ಬದ್ಧತೆಯಿಂದ ಭದ್ರತೆಯ ಬಲ ನೀಡುವ ದಿಕ್ಕಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.
ಸಂಸ್ಥೆಯು ತನ್ನ ನೌಕರರ ಸೌಭಾಗ್ಯ ಮತ್ತು ಭದ್ರತೆಗೆ ಪ್ರಾಮುಖ್ಯತೆ ನೀಡುತ್ತಲೇ ಮುಂದಿನ ದಿನಗಳಲ್ಲೂ ಇಂತಹ ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತರಲು ನಿರಂತರವಾಗಿ ಶ್ರಮಿಸಲಿದೆ.
ಈ ಸಂದರ್ಭದಲ್ಲಿ ರಾಮಚಂದ್ರನ್.ಆರ್., ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ, ಮೊಹಮ್ಮದ್ ರಿಜ್ವಾನ್ ನವಾಬ್, ಉಪಾಧ್ಯಕ್ಷರು, ಕರಾರಸನಿಗಮ, ಅಕ್ರಂ ಪಾಷ, ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, ಕರಾರಸನಿಗಮ, ಶೈಲೆಂದ್ರಕುಮಾರ ಸಿಂಗ್, ಉಪ ಮಹಾಪ್ರಬಂಧಕರು, ಬೆಂಗಳೂರು ದಕ್ಷಿಣ ವಲಯ, ಸುಮಿತ್ ಕುಮಾರ್ ಮಿಶ್ರಾ, ಉಪ ಮಹಾಪ್ರಬಂಧಕರು, ಬೆಂಗಳೂರು ವಲಯ, ವೆಂಕಟ್ರಮಣಿ ಶ್ರೀಪೂರ್ಣಾ, ಉಪ ಮಹಾಪ್ರಬಂಧಕರು, ದಕ್ಷಿಣ ಕ್ಲಸ್ಟರ್ ಹಾಗೂ ಸಂಸ್ಥೆಯ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು.
BREAKING: ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ