ಬೆಂಗಳೂರು: ರಾಜ್ಯದಲ್ಲಿ ದೇಗುಲಗಳ ಆಸ್ತಿ ರಕ್ಷಣೆಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಕ್ರಮ ವಹಿಸಿದ್ದರು. ಈ ಪರಿಣಾಮ ದೇಗುಲಗಳಿಗೆ 11,499 ಎಕರೆ ಮರು ಸೇರ್ಪಡೆಯಾದಂತೆ ಆಗಿದೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಜರಾಯಿ ಇಲಾಖೆ ವತಿಯಿಂದ ದೇವಸ್ಥಾನಗಳ ಆಸ್ತಿಗಳ ದಾಖಲೆ ಮಾಹಿತಿ ಪರಿಶೀಲಿಸಲಾಯಿತು. ಈ ಸಂದರ್ಭ ನಿರ್ವಹಣೆ ಸಮರ್ಪಕವಾಗಿಲ್ಲ ಎಂಬುದು ಗಮನಕ್ಕೆ ಬಂತು. ಕೂಡಲೇ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಪಹಣಿ ಇಂಡೀಕರಣ ಪ್ರಕ್ರಿಯೆ ಆರಂಭಿಸಲು ಸೂಚಿಸಿದ್ದೆ. ಪರಿಣಾಮ ಎರಡು ವರ್ಷಗಳಲ್ಲಿ 11,499 ಎಕರೆ ವಿಸ್ತೀರ್ಣದ ದಾಖಲೆಗಳನ್ನು ಸರಿಪಡಿಸಲಾಗಿದೆ ಎಂದು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಪ್ರತಿ ತಿಂಗಳೂ ಮುಜರಾಯಿ ಆಸ್ತಿಗಳ ಭೂಮಾಪನ, ದಾಖಲೆ ಪರಿಶೀಲನೆ, ತಿದ್ದುಪಡಿ, ಇಂಡೀಕರಣಕ್ಕೆ ಗುರಿ ನಿಗದಿಪಡಿಸಲಾಗಿದೆ. ಎಲ್ಲ ದೇವಾಲಯಗಳ ಆಸ್ತಿಗಳ ದಾಖಲೆಗಳನ್ನು ಸರಿಪಡಿಸಿ, ದೇವಸ್ಥಾನಗಳ ಹೆಸರಿಗೆ ಸರಿಯಾದ ಕ್ರಮದಲ್ಲಿ ದಾಖಲಿಸಲು ಇನ್ನೂ ಎರಡು ವರ್ಷ ಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಜರಾಯಿ ಇಲಾಖೆ ವತಿಯಿಂದ ದೇವಸ್ಥಾನಗಳ ಆಸ್ತಿಗಳ ದಾಖಲೆ ಮಾಹಿತಿ ಪರಿಶೀಲಿಸಲಾಯಿತು. ಈ ಸಂದರ್ಭ ನಿರ್ವಹಣೆ ಸಮರ್ಪಕವಾಗಿಲ್ಲ ಎಂಬುದು ಗಮನಕ್ಕೆ ಬಂತು. ಕೂಡಲೇ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಪಹಣಿ ಇಂಡೀಕರಣ ಪ್ರಕ್ರಿಯೆ ಆರಂಭಿಸಲು ಸೂಚಿಸಿದ್ದೆ. ಪರಿಣಾಮ ಎರಡು ವರ್ಷಗಳಲ್ಲಿ 11,499… pic.twitter.com/4a5iBkrOvt
— DIPR Karnataka (@KarnatakaVarthe) January 6, 2025
ಕೊಪ್ಪಳ ಜಿಲ್ಲೆಯ ಸಂತ್ರಸ್ತೆ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ: ಕಳಪೆ ಔಷಧಿ ಸರಬರಾಜಿಗೆ ಆಕ್ಷೇಪ