ಬೆಂಗಳೂರು: ಕಲ್ಯಾಣ ಕರ್ನಾಟಕ ಜನತೆಗೆ ಸಾರಿಗೆ ಸೌಲಭ್ಯ ಒದಗಿಸೋದಕ್ಕೆ ಈಗಾಗಲೇ ಸಚಿವ ರಾಮಲಿಂಗಾರೆಡ್ಡಿ ಹೊಸ ಬಸ್ ವ್ಯವಸ್ಥೆ ಮಾಡಿದ್ದರು. ಜೊತೆಗೆ ಹೊಸದಾಗಿ ಬಸ್ ಖರೀದಿ ನಿರ್ಧಾರ ಕೈಗೊಂಡಿದ್ದರು. ಈ ಬೆನ್ನಲ್ಲೇ ಸಮಗ್ರ ಸಾರಿಗೆ ಸೌಲಭ್ಯಗಳ ಅಭಿವೃದ್ಧಿಗೆ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಅದೇನು ಅಂತ ಮುಂದೆ ಓದಿ.
ಮುಖ್ಯಮಂತ್ರಿಗಳ ಅನುದಾನ/ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಹಾಗೂ ಸಂಸ್ಥೆಯ ಅನುದಾನದ ಅಡಿಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಮೂಲಭೂತ ಸೌಕರ್ಯಗಳೊಂದಿಗೆ ಅಗತ್ಯ ಸಾರಿಗೆ ಸೌಲಭ್ಯಗಳನ್ನು ಒದಗಿಸಲು ದಿನಾಂಕ 20-06-2024 ರಂದು ನಡೆದ ಕೆಕೆ ಆರ್ ಟಿ ಸಿ ಯ ಮಂಡಳಿ ಸಭೆಯಲ್ಲಿ ಮಾನ್ಯ ಸಾರಿಗೆ ಸಚಿವರು ಹಾಗೂ ಅಧ್ಯಕ್ಷರು ಕೆ ಕೆ ಆರ್ ಟಿ ಸಿ ರವರು, ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಹೊಸ ಬಸ್ಸುಗಳು, ಡಿಜಿಟಲ್ ಟಿಕೇಟ್ ಯಂತ್ರಗಳು (ಅ್ಯಡ್ರಾಯಡ್ ಆದಾರಿತ) ಹಾಗೂ ಹಲವು ಬಸ್ ನಿಲ್ದಾಣಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ.
ಕಕರಸಾ ನಿಗಮಕ್ಕೆ 2024 -2025 ಸಾಲಿನಲ್ಲಿ ವಿವಿಧ ಮಾದರಿಯ 330 ಬಸ್ ಗಳನ್ನು ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ನಿಗಮದಿಂದ ಆರ್ಥಿಕ ಸಹಾಯ ಪಡೆದು ಖರೀದಿಸಲು ನಿರ್ಧರಿಸಲಾಯಿತು. ನಿಗಮದಲ್ಲಿ 6500 ಆಂಡ್ರಾಯ್ಡ್ ಆಧರಿತ ವಿದ್ಯುತ್ಮಾನ ಟಿಕೆಟ್ ವಿತರಣೆ ಯಂತ್ರಗಳನ್ನು ಬಾಡಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ನಿರ್ಧರಿಸಲಾಯಿತು. ಸದರಿ ಯಂತ್ರಗಳಿಂದ ಪ್ರಯಾಣಿಕರು ಡಿಜಿಟಲ್ ಪೇಮೆಂಟ್ ಮುಖಾಂತರ ಹಣ ಪಾವತಿ (UPI, Cards ) ಮಾಡಿ ಟಿಕೆಟ್ ಪಡೆಯಬಹುದಾಗಿದೆ. ಇದು ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿತ್ತು.
ನಿಗಮದ ವ್ಯಾಪ್ತಿಯಲ್ಲಿ ಉದ್ದೇಶಿಸಲಾಗಿರುವ 17 ಬಸ್ ನಿಲ್ದಾಣಗಳ ಕಾಮಗಾರಿ ರೂ.5741.84 ಲಕ್ಷಗಳ ವೆಚ್ಚದ ವಿವರಗಳು:
-ಬೇವೂರದಲ್ಲಿ ರೂ 450.00 ಲಕ್ಷ ವೆಚ್ಚದಲ್ಲಿ 26 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ,-ತಲಕಲ್ ಇಂಜಿನಿಯರಿಂಗ್ ಕಾಲೇಜ್ ಹತ್ತಿರ ರೂ.600.00 ಲಕ್ಷ ವೆಚ್ಚದಲ್ಲಿ 29 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಸಂಕನೂರ ಕ್ರಾಸ್ ಬಳಿ ರೂ.320.23 ಲಕ್ಷ ವೆಚ್ಚದಲ್ಲಿ 24 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಬನ್ನಿಕೊಪ್ಪದಲ್ಲಿ ರೂ.221.61 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಹೀರೆವಂಕಲಕುಂಟಾದಲ್ಲಿ ರೂ. 300.00 ಲಕ್ಷ ವೆಚ್ಚದಲ್ಲಿ 26 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಬಂಡಿ ಕ್ರಾಸ್ ಬಳಿ ರೂ. 300.00ಲಕ್ಷ ವೆಚ್ಚದಲ್ಲಿ 21 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಕುದರೆಮೊತಿಯಲ್ಲಿ ರೂ.300.00 ಲಕ್ಷ ವೆಚ್ಚದಲ್ಲಿ 23 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ ಕ್ರಮ ಕೈಗೊಳ್ಳಲಾಗುತ್ತಿದೆ.
ಇಟಗಿಯಲ್ಲಿ ರೂ.400.00 ಲಕ್ಷ ವೆಚ್ಚದಲ್ಲಿ 24 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ರಾಜೂರ ಅಡುರದಲ್ಲಿ ರೂ. 300.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಕುಕನೂರ ತಾಲೂಕಿನ ಬೆಣಕಲ್ಲ ದಲ್ಲಿ ರೂ.200.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಕುಕನೂರ ತಾಲೂಕಿನ ಮಂಡಲಗೇರಿಯಲ್ಲಿ ರೂ.200.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಕುಕನೂರ ತಾಲೂಕಿನ ಹಿರೇಮ್ಯಾಗೇರಿಯಲ್ಲಿ ರೂ.200.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಕುಕನೂರ ತಾಲೂಕಿನ ಮುರಡಿಯಲ್ಲಿ ರೂ.200.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್
ನಿಲ್ದಾಣ, ಕುಕನೂರ ತಾಲೂಕಿನ ಹಿರೇ ಅರಳಿಹಳ್ಳಿಯಲ್ಲಿ ರೂ.200.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣಕ್ಕೆ ಕ್ರಮ ವಹಿಸಲಾಗುತ್ತಿದೆ.
ಕುಕನೂರ ತಾಲೂಕಿನ ಗಾಣದಾಳದಲ್ಲಿ ರೂ 200.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ, ಮಾನವಿ ಜಿ|| ರಾಯಚೂರಿನಲ್ಲಿ ರೂ.950.00 ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಹಾಗೂ ಹುಲಸೂರ ಜಿಲ್ಲೆ ಬೀದರ್ ನಲ್ಲಿ ರೂ 400.00ಲಕ್ಷ ವೆಚ್ಚದಲ್ಲಿ 20 ಗುಂಟೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
‘ಸೈದೂರು ಮುಖಂಡ’ರಿಂದ ‘ಶಾಸಕ ಬೇಳೂರು ಗೋಪಾಲಕೃಷ್ಣ’ಗೆ ‘ಡಿಸಿಸಿ ಬ್ಯಾಂಕ್ ಚುನಾವಣೆ’ಗೆ ಬೆಂಬಲ ಘೋಷಣೆ
ನಿಮ್ಮ ಮೂಲ ವೇತನ 12,000 ರೂ.ಗಳಾಗಿದ್ರೆ, ನಿವೃತ್ತಿಯ ನಂತ್ರ ಎಷ್ಟು ಲಕ್ಷ ‘PF’ ಬರುತ್ತೆ ಗೊತ್ತಾ.?