ಧಾರವಾಡ: ವಾಯವ್ಯ ಸಾರಿಗೆಯಲ್ಲಿ ಜನಪರ, ಕಾರ್ಮಿಕ ಸ್ನೇಹಿ ಹಲವು ಉಪಕ್ರಮಗಳಿಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
1. ಧಾರವಾಡ ನೂತನ ನಗರ ಬಸ್ ನಿಲ್ದಾಣ ಉದ್ಘಾಟನೆ
2. ಹುಬ್ಬಳ್ಳಿಯ ನವೀಕೃತ ಕೇಂದ್ರ ಬಸ್ ನಿಲ್ದಾಣದ ಉದ್ಘಾಟನೆ
3. ಅಪಘಾತ/ ಅಪರಾಧ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣಾ ಸಮಾರಂಭ
4. ಅನುಕಂಪ ಆಧಾರದಲ್ಲಿ ಕುಟುಂಬದವರಿಗೆ ನೇಮಕಾತಿ ಆದೇಶ ವಿತರಣೆ
5. ಹೊಸ ಬಸ್ಸುಗಳ ಸೇರ್ಪಡೆ
6. ನಗದು ರಹಿತ ಸೇವೆಗಾಗಿ ನೂತನ ಸ್ಮಾರ್ಟ್ ETM (Electronic ticket machine) ಅನುಷ್ಠಾನ
7. ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಗಳ ಕುಟುಂದವರಿಗೆ ರೂ.1 ಕೋಟಿ ವಿಮಾ ಚೆಕ್ ವಿತರಣೆ.
8. ನೌಕರರ ಕುಟುಂಬ ಕಲ್ಯಾಣ ನಿಧಿ ಯೋಜನೆಯಡಿಯಲ್ಲಿ ಮೃತ ಅವಲಂಬಿಥಿಗೆ ರೂ.5 ಲಕ್ಷ ವಿಮಾ ಚೆಕ್ ವಿತರಣೆ
9. ನೌಕರರು ನಿಧನರಾದ ಪ್ರಕರಣಗಳಲ್ಲಿ ( ಅಪಘಾತ ಹೊರತುಪಡಿಸಿ) ಮೃತರ ಅವಲಂಬಿತರಿಗೆ ತಲಾ ರೂ.6.00 ಲಕ್ಷ ವಿತರಣೆ
10. SBI ರವರಿಂದ Cash Pickup ಸೌಲಭ್ಯ
ಧಾರವಾಡ ನೂತನ ನಗರ ಸಾರಿಗೆ ಬಸ್ ನಿಲ್ದಾಣವನ್ನು ರೂ.13.11 ಕೋಟಿ ವೆಚ್ಚದಲ್ಲಿ . (ಶೇಕಡಾ 50% DULT ಸಹಾಯ ಧನ ಸೇರಿ) ನಿರ್ಮಿಸಲಾಗಿರುತ್ತದೆ.
ಸದರಿ ಕಾಮಗಾರಿಯು ದಿನಾಂಕ:15.02.2024 ರಂದು ಆರಂಭವಾಗಿ ದಿನಾಂಕ:30.09.2025 ರಂದು ಪೂರ್ಣಗೊಂಡಿರುತ್ತದೆ.
ಹುಬ್ಬಳ್ಳಿ ಗೋಕುಲ ರಸ್ತೆ ನವೀಕೃತ ಬಸ್ ನಿಲ್ದಾಣದ ಉದ್ಘಾಟನೆ:
ಹುಬ್ಬಳ್ಳಿಯ ಗೋಕುಲ ರಸ್ತೆಯ ಬಸ್ ನಿಲ್ದಾಣವನ್ನು ಅಂದಾಜು ರೂ.23.48 ಕೋಟಿ ವೆಚ್ಚದಲ್ಲಿ (ಶೇಕಡಾ 50% DULT ಸಹಾಯ ಧನ ಸೇರಿ) ನವೀಕರಿಸಿ ಮೇಲ್ದರ್ಜೆಗೇರಿಸಲಾಗಿರುತ್ತದೆ.
ಸದರಿ ಕಾಮಗಾರಿಯು ದಿನಾಂಕ:15.02.2024 ರಂದು ಆರಂಭವಾಗಿ ದಿನಾಂಕ:30.10.2025 ರಂದು ಪೂರ್ಣಗೊಂಡಿರುತ್ತದೆ .
ಇವೆರಡೂ ಬಸ್ ನಿಲ್ದಾಣದಲ್ಲಿ 04 ಪ್ಲಾಟ್ ಫಾರ್ಮಗಳು, ಲಿಫ್ಟ್ ಗಳು, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ವಾಣಿಜ್ಯ ಮಳಿಗೆಗಳು ಹಾಗೂ ಉಪಹಾರ ಗೃಹ, ಮಹಿಳಾ ಪ್ರಯಾಣಿಕರಿಗೆ ಪ್ರತ್ಯೇಕ ವಿಶ್ರಾಂತಿ ಶಿಶು ಪಾಲನಾ ಕೊಠಡಿ, ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಲಾಗಿರುತ್ತದೆ.
*2025-26 ನೇ ಸಾಲಿನ ಸರ್ಕಾರದ ಅನುದಾನದಲ್ಲಿ ಸಂಸ್ಥೆಗೆ 700 ಹೊಸ ವಾಹನಗಳ ಸೇರ್ಪಡೆಗೆ ರೂಪಿಸಲಾಗಿದೆ.
*ಮೊದಲ ಹಂತದಲ್ಲಿ ಸರ್ಕಾರದಿಂದ ಈಗಾಗಲೇ ಬಿಡುಗಡೆಯಾದ ಅನುದಾನ ದಿಂದ 300 ಹೊಸ ವಾಹನಗಳ ಖರೀದಿ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಇನ್ನುಳಿದ 400 ಹೊಸ ವಾಹನಗಳ ಖರೀದಿಗೆ ಆಡಳಿತಾತ್ಮಕ ಅನುಮೋದನೆ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ.
*ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ರೂ. 5 ಕೋಟಿ ವೆಚ್ಚದಲ್ಲಿ ನಗರ ಸಾರಿಗೆ ಬಸ್‌ಗಳು, ರೂ. 8 ಕೋಟಿ ವೆಚ್ಚದಲ್ಲಿ ಹವಾನಿಯಂತ್ರಿತ ಸ್ಲೀಪರ್ ಬಸ್ ಗಳನ್ನು ಹಾಗೂ ರೂ.10 ಕೋಟಿ ವೆಚ್ಚದಲ್ಲಿ ಹವಾನಿಯಂತ್ರಣ ರಹಿತ ಸ್ಲೀಪರ್ , ಒಟ್ಟು 45 ಹೊಸ ವಾಹನಗಳ ಖರೀದಿಗೆ ಕ್ರಮ ಜಾರಿಯಲ್ಲಿರುತ್ತದೆ.
* 11 ನಗರ ಸಾರಿಗೆ ಹೊಸ ವಾಹನಗಳನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕೆ ಲೋಕಾರ್ಪಣೆ
* ಅಪಘಾತ ರಹಿತ ಸೇವೆ ಸಲ್ಲಿಸಿ ಬೆಳ್ಳಿ ಪದಕ ವಿಜೇತರಾಗಿರುವ 79 ಚಾಲಕರುಗಳಿಗೆ ಬೆಳ್ಳಿ ಪದಕ, ತಲಾ ರೂ.2000/- ನಗದು ಬಹುಮಾನ, ಪ್ರಶಸ್ತಿ ಪತ್ರಗಳ ವಿತರಣೆ.
* ETM ತಂತ್ರಜ್ಞಾನದಲ್ಲಿ ಇತ್ತೀಚೆಗೆ ಮಹತ್ತರ ಬದಲಾವಣೆಗಳಾಗಿದ್ದು, QR Code, RFID Card ಗಳು ಮತ್ತು ರಾಷ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ (NCMC) ರೀಡ್ ಮಾಡಲು ಅನುಕೂಲವಿರುವ ಇತ್ತೀಚಿನ ತಂತ್ರಜ್ಞಾನಗಳ ಅಳವಡಿಕೆಯ 5600 Android ಆಧಾರಿತ ETM ಗಳನ್ನು ಮಾಸಿಕ ಬಾಡಿಗೆ ಆಧಾರದ ಮೇಲೆ ಸಂಸ್ಥೆಯ ಎಲ್ಲಾ ಘಟಕಗಳಲ್ಲಿ ಅಳವಡಿಸಲಾಗುವ ಉಪಕ್ರಮಕ್ಕೆ ಚಾಲನೆ ನೀಡಲಾಯಿತು.
* ಅಪಘಾತದಲ್ಲಿ ಮೃತ ಪಟ್ಟ 3 ಮೃತರ ಅವಲಂಬಿತರಿಗೆ ಯೋಜನೆಯ ವಿಮಾ ಮೊತ್ತ ರೂ.1 ಕೋಟಿಯನ್ನು ನೀಡಲಾಯಿತು.
* SBI ನಲ್ಲಿ ವೇತನ ಖಾತೆ ಹೊಂದಿದ ನೌಕರರು ನಿಧನರಾದ ಪ್ರಕರಣಗಳಲ್ಲಿ ( ಅಪಘಾತ ಹೊರತುಪಡಿಸಿ) 3 ಮೃತರ ಅವಲಂಬಿತರಿಗೆ ತಲಾ ರೂ.6.00 ಲಕ್ಷ ನೀಡಲಾಯಿತು.
* ನೌಕರರ ಕುಟುಂಬ ಕಲ್ಯಾಣ ನಿಧಿ ಯೋಜನೆಯಡಿಯಲ್ಲಿ ನೌಕರರು ಸೇವೆಯಲ್ಲಿದ್ದಾಗ ನಿಧನರಾದಲ್ಲಿ ಅವರ ಅವಲಂಬಿತರಿಗೆ ರೂ.5.00 ಲಕ್ಷ ವಿಮಾ ಮೊತ್ತವನ್ನು ಪಾವತಿಸಲಾಗುತ್ತದೆ. 8 ಮೃತರ ಅವಲಂಬಿತರಿಗೆ ತಲಾ ರೂ.5.00 ಲಕ್ಷ ಯೋಜನೆಯ ಮೊತ್ತ ನೀಡಲಾಯಿತು.
* 35 ಮೃತರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಆದೇಶಗಳನ್ನು ನೀಡಲಾಯಿತು.
* SBI ರವರಿಂದ Cash Pickup ಸೌಲಭ್ಯ: ಪ್ರಾಯೋಗಿಕವಾಗಿ SBI ರವರಿಂದ ನೇರವಾಗಿ ಧಾರವಾಡ(ಗ್ರಾ) ಘಟಕದಿಂದ ನಗದು ಸಂಗ್ರಹಿಸುವ ಒಡಂಬಡಿಕೆಗೆ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್, ಭರಮಗೌಡ (ರಾಜು) ಅಲಗೌಡ ಕಾಗೆ, ಅಧ್ಯಕ್ಷರು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಶಾಸಕರು, ವಿಧಾನ ಸಭೆ, ಕಾಗವಾಡ , ಮಹೇಶ ಟೆಂಗಿನಕಾಯಿ, ಶಾಸಕರು, ವಿಧಾನಸಭೆ, ಹುಬ್ಬಳ್ಳಿ-ಧಾರವಾಡ (ಕೇಂದ್ರ), ಅರವಿಂದ ಚಂದ್ರಕಾಂತ ಬೆಲ್ಲದ, ಶಾಸಕರು ವಿಧಾನ ಸಭೆ, ಹುಬ್ಬಳ್ಳಿ-ಧಾರವಾಡ (ಪಶ್ಚಿಮ), ಸಲೀಂ ಅಹ್ಮದ್ ಸರ್ಕಾರದ ಮುಖ್ಯ ಸಚೇತಕರು, ಸೈಯದ್ ಅಜೀಮ್‌ಪೀರ್ ಎಸ್. ಖಾದ್ರಿ, ಅಧ್ಯಕ್ಷರು, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಪ್ರದೀಪ ಶೆಟ್ಟರ, ಶಾಸಕರು, ವಿಧಾನ ಪರಿಷತ್ತು, ಎಫ್. ಎಚ್. ಜಕ್ಕಪ್ಪನವರ, ಶಾಸಕರು ವಿಧಾನ ಪರಿಷತ್ತು ಸದಸ್ಯರು, ಜ್ಯೋತಿ ಪಾಟೀಲ್, ಮಹಾಪೌರರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಎಸ್. ಆರ್. ಪಾಟೀಲ, ಅಧ್ಯಕ್ಷರು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ. ಸುನೀಲ ಜೆ ಹನುಮಣ್ಣನವರ್, ಮಾನ್ಯ ಉಪಾಧ್ಯಕ್ಷರು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಶಾಕಿರ್ ಸನದಿ, ಅಧ್ಯಕ್ಷರು, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ, ಸಂಗಮೇಶ ಅಪ್ಪಾಸಿ ಬಬಲೇಶ್ವರ, ಅಧ್ಯಕ್ಷರು, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ. ಪ್ರಿಯಾಂಗಾ ಎಂ. ಭಾ.ಆ.ಸೇ. ವ್ಯವಸ್ಥಾಪಕ ನಿರ್ದೇಶಕರು. ವಾ.ಕ.ರ.ಸಾ.ಸಂಸ್ಥೆ, ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.
BREAKING: ನಾನ್ ವೆಜ್.., ಎಣ್ಣೆ.., ಪುಲ್ ಮೋಜು-ಮಸ್ತಿ: ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ವೀಡಿಯೋ ವೈರಲ್
BREAKING: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರದ ತಡೆ: ಪರಿಸರವಾದಿಗಳ ಹೋರಾಟಕ್ಕೆ ಗೆಲುವು








