Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಜೇಡ ಕಡಿತ’ ಅಪಾಯಕಾರಿಯೇ.? ಜೇಡ ಕಚ್ಚಿದ್ರೆ ಏನಾಗುತ್ತೆ ಗೊತ್ತಾ?

22/03/2026 10:09 PM

ಅಂತರಂಗದ ಬದುಕಿಗೆ ಲಗ್ಗೆ ಇಟ್ಟ AI; ಈಗ ‘AI-ಸೆಕ್ಷುವಲ್’ ಹೊಸ ಟ್ರೆಂಡ್! | AI-sexual

22/03/2026 9:41 PM

ಇಸ್ರೇಲ್ – ಇರಾನ್ ವಾರ್ ಎಫೆಕ್ಟ್; ವಿಮಾನಯಾನ ಸಂಸ್ಥೆಗಳಿಗೆ ಬರೋಬ್ಬರಿ 5,000 ಕೋಟಿ ನಷ್ಟ

22/03/2026 9:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BMTC ನೌಕರರಿಗೆ ಕಣ್ಣಿನ ಪರೀಕ್ಷೆ, ಮೃತ ನೌಕರ ಅವಲಂಬಿತರಿಗೆ ಪರಿಹಾರದ ಚೆಕ್ ವಿತರಿಸಿದ ಸಚಿವ ರಾಮಲಿಂಗಾರೆಡ್ಡಿ
KARNATAKA

BMTC ನೌಕರರಿಗೆ ಕಣ್ಣಿನ ಪರೀಕ್ಷೆ, ಮೃತ ನೌಕರ ಅವಲಂಬಿತರಿಗೆ ಪರಿಹಾರದ ಚೆಕ್ ವಿತರಿಸಿದ ಸಚಿವ ರಾಮಲಿಂಗಾರೆಡ್ಡಿ

By kannadanewsnow0906/05/2025 9:21 PM

ಬೆಂಗಳೂರು: ಬಿಎಂಟಿಸಿ‌ಯಲ್ಲಿ ಸಾರಿಗೆ ಆಶಾಕಿರಣ ಯೋಜನೆಯಡಿ 28100 ನೌಕರರ ಕಣ್ಣಿನ ತಪಾಸಣೆ ನಡೆಸಲಾಯಿತು. ಅಲ್ಲದೇ ಉಚಿತ ಕನ್ನಡಕ ವಿತರಣೆ ಮಾಡಲಾಯಿತು. ಜೊತೆಗೆ ಮೃತ ಬಿಎಂಟಿಸಿ ನೌಕರರ ಅವಲಂಬಿತರಿಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಪರಿಹಾರದ‌ ಚೆಕ್ ವಿತರಣೆ ಮಾಡಿದರು.

ಇಂದು ಬಿ.ಎಂ.ಟಿ.ಸಿ ಯು ಸಿ-ಕ್ಯಾಂಪ್ ಸಹಯೋಗದಲ್ಲಿ ನೌಕರರ ಆರೋಗ್ಯದ ಹಿತದೃಷ್ಟಿಯಿಂದ 50 ಘಟಕಗಳಲ್ಲಿ ಹಾಗೂ 4 ಕಾರ್ಯಾಗಾರಗಳಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು. ತಪಾಸಣೆಗೆ ಒಳಪಡುವ ನೌಕರರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮವನ್ನು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಂತ ಅವರು, ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಗಳ ಅವಲಂಬಿತರಿಗೆ ರೂ.50 ಲಕ್ಷ ಹಾಗೂ ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದಾಗಿ ಅಕಾಲಿಕ ಮರಣ ಹೊಂದಿದ ನೌಕರರ ಅವಲಂಬಿತರಿಗೆ ರೂ.10 ಲಕ್ಷ ಚೆಕ್ ವಿತರಣೆ ಮಾಡಲಾಗುತ್ತಿದೆ. ಅದರಂತೆ 2024ರ ಫೆಬ್ರವರಿ–2025ರ ಏಪ್ರಿಲ್ ವರೆಗೆ 107 ನೌಕರರ ಕುಟುಂಬಗಳಿಗೆ ರೂ. 7.3 ಕೋಟಿ ಪರಿಹಾರ ಪಾವತಿ ಮಾಡಲಾಗಿದೆ ಎಂದರು.

ಇಂದು 12 ಸಿಬ್ಬಂದಿಗಳ ಕುಟುಂಬಕ್ಕೆ, ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದಾಗಿ ಅಕಾಲಿಕ ಮರಣ ಹೊಂದಿದ ನೌಕರರ ಅವಲಂಬಿತರಿಗೆ ರೂ.10 ಲಕ್ಷ ಚೆಕ್ ವಿತರಣೆ ಮಾಡಲಾಗಿದೆ. ನಾನು ಒಂದೇ ವಿಷಯವನ್ನು ಪದೇ ಪದೇ ಹೇಳುತ್ತಿದ್ದೇನೆ, ಸಿಬ್ಬಂದಿಗಳ ಜೀವ ಅಮೂಲ್ಯ, ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ಅವರ ಕುಟುಂಬದವರೊಡನೆ ಸಂಸ್ಥೆ ಸದಾ ನಿಲ್ಲುತ್ತದೆ. ಆರ್ಥಿಕವಾಗಿ ಎಷ್ಟು ಸಹಾಯ ಮಾಡಲು ಸಾಧ್ಯವೋ ಅದನ್ನೆಲ್ಲವನ್ನು ನಾವು ಮಾಡುತ್ತಿದ್ದೇವೆ, ಮಕ್ಕಳ ವಿದ್ಯಾಭ್ಯಾಸ, ಮುಂದಿನ‌ ಜೀವನೋಪಾಯಕ್ಕೆ ಒಂದು ದಾರಿ ಆಗಲಿ ಎಂಬ ಸದುದ್ದೇಶ ನಮ್ಮದಾಗಿದೆ ಎಂದು ತಿಳಿಸಿದರು.

ಬಿ.ಎಂ.ಟಿ ಸಿ ಯು ಏರೋ ಇಂಡಿಯಾ–2025 ಕಾರ್ಯಕ್ರಮದಲ್ಲಿ ಶ್ಲಾಘನೀಯ ಸೇವೆಗಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಶ್ಲಾಘನಾ ಪತ್ರ ನೀಡಿದ್ದಾರೆ. 3 ದಿನಗಳಲ್ಲಿ, 364 ಬಸ್ಸುಗಳು, 199 ವಿಶೇಷ ಸಾರಿಗೆ ಸೇವೆಗಳು, 16,932 ಪ್ರಯಾಣಿಕರು ರೂ. 75.40 ಲಕ್ಷ ಆದಾಯಗಳಿಸಿದೆ. ಪ್ರಯಾಣಿಕರ ಸೇವೆಯಲ್ಲಿಯೂ ಮುಂಚೂಣಿಯಲ್ಲಿದೆ ಎಂದರು.

ಸಿಬ್ಬಂದಿಗಳು ಹಾಗೂ ಅವರ‌ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ‌‌ ಉತ್ತೇಜಿಸುವುದು ನಮ್ಮ ಕರ್ತವ್ಯ, ಹೆಮ್ಮೆ ಮತ್ತು ಗೌರವವೆಂದು ನಾವು ಭಾವಿಸಿದ್ದೇವೆ. ಅದರಂತೆ ಇಂದು ಮಾಸ್ಟರ್ ಗೇಮ್ಸ್–2025 ದಲ್ಲಿ ಕಬಡ್ಡಿ ಪ್ರಥಮ ಸ್ಥಾನ, ವಾಲಿಬಾಲ್ ತೃತೀಯ ಸ್ಥಾನ ಪಡೆದಿರುವ ಬಿ.ಎಂ.ಟಿ.ಸಿ‌‌ ತಂಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರವನ್ನು ಮಾಡಿದರು.

1. ಕುಮಾರಿ ಸಹನಾ ಎಸ್.ವಿ (ಕೃಷಿ ಎಂ.ಎಸ್ಸಿ, ಚಿನ್ನದ ಪದಕ) ಚಾಲಕ ವೈದ್ಯಪ್ಪ (ಘಟಕ 33)ರ ಪುತ್ರಿ.
2. ಕುಮಾರಿ ಸೌಮ್ಯ (ಎಸ್.ಎಸ್.ಎಲ್.ಸಿ – 621/625) ಚಾಲಕ ಲಕ್ಷ್ಮೀಕಾಂತ (ಘಟಕ 45)ರ ಪುತ್ರಿಗೆ ಗೌರವಿಸಿ ಅಭಿನಂದಿಸಲಾಯಿತು.

ಈ‌ ಕಾರ್ಯಕ್ರಮದಲ್ಲಿ ಡಾ. ಎನ್ ವಿ. ಪ್ರಸಾದ್ ಸಾರಿಗೆ ಇಲಾಖೆಯ ಕಾರ್ಯದರ್ಶಿಗಳು, ರಾಮಚಂದ್ರನ್ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಬಿ.ಎಂ.ಟಿ.ಸಿ‌, ಶಿಲ್ಪಾ, ಭಾಅಸೇ, ನಿರ್ದೇಶಕರು ( ಮಾಹಿತಿ ತಂತ್ರಜ್ಞಾನ), ಅಹದ್ ನಿರ್ದೇಶಕರು ( ಭದ್ರತೆ) ಬಿ.ಎಂ.ಟಿ.ಸಿ‌ ಮತ್ತು ಸಿ-ಕ್ಯಾಂಪ್ ನ ಪ್ರತಿನಿಧಿಗಳು ಭಾಗವಹಿಸಿದ್ದರು.

BREAKING: ಸಿಯುಇಟಿ ಪಿಜಿ ಫಲಿತಾಂಶ 2025 ಪ್ರಕಟ | CUET PG Result 2025

BIG NEWS: KAS ಮುಖ್ಯ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ: KPSC ಸ್ಪಷ್ಟನೆ

Share. Facebook Twitter LinkedIn WhatsApp Email

Related Posts

ದಾವಣಗೆರೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿರುದ್ಧ ಅಲ್ಪಸಂಖ್ಯಾತರ ಆಕ್ರೋಶ; ಕೈ ಪಾಳೆಯದಲ್ಲಿ ಭುಗಿಲೆದ್ದ ಅಸಮಾಧಾನ!

22/03/2026 9:33 PM1 Min Read

BIG NEWS: ಸಾಗರದ ಶೆಡ್ತೀಕೆರೆಯಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ: ರಮೇಶ್ ನಾರಾಯಣ್ ಹಾಗೂ ಇತರ ಶಿಕ್ಷಕರ ವಿರುದ್ಧ ‘ಮಕ್ಕಳ ಆಯೋಗ ಸುಮೋಟೋ ಕೇಸ್’ ದಾಖಲು

22/03/2026 9:07 PM2 Mins Read

BIG NEWS: ಮಂಡ್ಯದಲ್ಲಿ ‘LPG ಸಿಲಿಂಡರ್‌’ಗೆ ಮುಗಿಬಿದ್ದ ಜನ: ಪೊಲೀಸ್ ರಕ್ಷಣೆಯಲ್ಲಿ ‘ಗ್ಯಾಸ್‌’ ವಿತರಣೆ

22/03/2026 8:13 PM1 Min Read
Recent News

‘ಜೇಡ ಕಡಿತ’ ಅಪಾಯಕಾರಿಯೇ.? ಜೇಡ ಕಚ್ಚಿದ್ರೆ ಏನಾಗುತ್ತೆ ಗೊತ್ತಾ?

22/03/2026 10:09 PM

ಅಂತರಂಗದ ಬದುಕಿಗೆ ಲಗ್ಗೆ ಇಟ್ಟ AI; ಈಗ ‘AI-ಸೆಕ್ಷುವಲ್’ ಹೊಸ ಟ್ರೆಂಡ್! | AI-sexual

22/03/2026 9:41 PM

ಇಸ್ರೇಲ್ – ಇರಾನ್ ವಾರ್ ಎಫೆಕ್ಟ್; ವಿಮಾನಯಾನ ಸಂಸ್ಥೆಗಳಿಗೆ ಬರೋಬ್ಬರಿ 5,000 ಕೋಟಿ ನಷ್ಟ

22/03/2026 9:38 PM

ಗುಜರಾತ್ ಸಿಎಂಯಿಂದ ಭಾರತದ ಪ್ರಧಾನಿವರೆಗೆ, 24 ವರ್ಷಗಳ ನಿರಂತರ ಸೇವೆ : ಮೋದಿಯ ‘ಅಚಲ ಸಮರ್ಪಣೆ’ಯ ಸ್ಟೋರಿಯಿದು!

22/03/2026 9:33 PM
State News
KARNATAKA

ದಾವಣಗೆರೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿರುದ್ಧ ಅಲ್ಪಸಂಖ್ಯಾತರ ಆಕ್ರೋಶ; ಕೈ ಪಾಳೆಯದಲ್ಲಿ ಭುಗಿಲೆದ್ದ ಅಸಮಾಧಾನ!

By kannadanewsnow0922/03/2026 9:33 PM KARNATAKA 1 Min Read

ದಾವಣಗೆರೆ: ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿ ದಾವಣಗೆರೆ ಜಿಲ್ಲೆಯಲ್ಲಿ ಹೊಸ ಸಂಚಲನ…

BIG NEWS: ಸಾಗರದ ಶೆಡ್ತೀಕೆರೆಯಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ: ರಮೇಶ್ ನಾರಾಯಣ್ ಹಾಗೂ ಇತರ ಶಿಕ್ಷಕರ ವಿರುದ್ಧ ‘ಮಕ್ಕಳ ಆಯೋಗ ಸುಮೋಟೋ ಕೇಸ್’ ದಾಖಲು

22/03/2026 9:07 PM

BIG NEWS: ಮಂಡ್ಯದಲ್ಲಿ ‘LPG ಸಿಲಿಂಡರ್‌’ಗೆ ಮುಗಿಬಿದ್ದ ಜನ: ಪೊಲೀಸ್ ರಕ್ಷಣೆಯಲ್ಲಿ ‘ಗ್ಯಾಸ್‌’ ವಿತರಣೆ

22/03/2026 8:13 PM

ಸಾಗರದಲ್ಲಿ ಅದ್ದೂರಿಯಾಗಿ ನೆರವೇರಿದ ‘ಶ್ರೀ ಮಹಾಗಣಪತಿ ರಥೋತ್ಸವ’: ಭಕ್ತಿಯ ಪರಾಕಾಷ್ಠೆ, ಸಂಸ್ಕೃತಿಯ ಸಂಗಮ

22/03/2026 7:55 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.