ಬೆಂಗಳೂರು: ಕಕರಸಾ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತಿರುವ ಮತ್ತು ಅನುಕಂಪದ ಆಧಾರದಡಿಯಲ್ಲಿ ನೇಮಕಾತಿ ಆದೇಶ ಪತ್ರವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ವಿತರಿಸಿದರು.
ಕಕರಸಾ ನಿಗಮದಲ್ಲಿ ದಿನಾಂಕ:31.08.2024 ರಂದು ಸನ್ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ರವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮೃತ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದಡಿಯಲ್ಲಿ ನೇಮಕಾತಿ ಆದೇಶ ಪತ್ರವನ್ನು ವಿತರಿಸಲಾಯಿತು. ಸಚಿವರು ನೆರೆದಿದ್ದ ಅಭ್ಯರ್ಥಿಗಳು ಮತ್ತು ಕುಟುಂಬದವರಿಗೆ ಶುಭ ಕೋರಿ, ನಿಗಮದ ಬಗ್ಗೆ ಹಿತ ನುಡಿಗಳನ್ನು ನುಡಿದರು.
ನಿಗಮದಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿಗಾಗಿ ನಿರೀಕ್ಷಣೆಯಲ್ಲಿದ್ದ ಮೃತಾವಲಂಬಿತ ಅಭ್ಯರ್ಥಿಗಳ ಪೈಕಿ ಅರ್ಹತೆಯನುಸಾರ ಹಾಗೂ ಖಾಲಿ ಹುದ್ದೆಗಳ ಲಭ್ಯತೆಗನುಗುಣವಾಗಿ ಸುಮಾರು 141 ಮೃತಾವಲಂಬಿತರನ್ನು ಕಳೆದ ಜನವರಿ-2023 ರಿಂದ ಆಗಸ್ಟ್-2024 ರ ಅವಧಿಯಲ್ಲಿ ದರ್ಜೆ-3 (ಮೇಲ್ವಿಚಾರಕೇತರ) ಮತ್ತು ದರ್ಜೆ-4ರ ಖಾಲಿ ಹುದ್ದೆಗಳಿಗೆ ನೇಮಕ ಮಾಡಲಾಗಿದೆ.
ನಿಗಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಾಲಕ, ನಿರ್ವಾಹಕ ಹಾಗೂ ತಾಂತ್ರಿಕ ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಮೃತಾವಲಂಬಿತರುಗಳು ಆಯ್ಕೆ ಮಾಡಿಕೊಳ್ಳದೇ ಕಿರಿಯ ಸಹಾಯಕ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ನೇಮಕಾತಿ ಬಯಸುತ್ತಿರುವುದರಿಂದ ಮೃತಾವಲಂಬಿತರಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಖಾಲಿ ಇರುವ ಒಟ್ಟು 23 ಕ.ರಾ.ಸಾ. ಪೇದೆ ಹುದ್ದೆಗಳಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಈ ಸಂದರ್ಭದಲ್ಲಿ ಡಾ|| ಎನ್.ವಿ.ಪ್ರಸಾದ್, ಭಾ.ಆ.ಸೇ., ಸರ್ಕಾರದ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ, ಕರ್ನಾಟಕ ಸರ್ಕಾರ, ಕಕರಸಾ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ರಾಚಪ್ಪ ಎಂ, ಕೆ.ಎ.ಎಸ್. (ಉಚ್ಚಕಾಲಿಕ ಶ್ರೇಣಿ), ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರಾದ ಆನಂದ ಬಂದ್ರಕಳ್ಳಿ, ಮತ್ತು ಕಕರಸಾ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.
ಕಕರಸಾ ನಿಗಮವು ಕೈಗೊಂಡಿರುವ ಕಾರ್ಮಿಕ ಕಲ್ಯಾಣ ಕಾರ್ಯಗಳು
- ಈ ಸಾಲಿನಲ್ಲಿ 1583 ಚಾಲಕ ಹಾಗೂ ಚಾಲಕ-ಕಂ-ನಿರ್ವಾಹಕರ ನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲಿ 300 ನಿರ್ವಾಹಕ ಹಾಗೂ 15 ಸಹಾಯಕ ಲೆಕ್ಕಿಗರ ನೇರ ನೇಮಕಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ಅಲ್ಲದೇ, 36 ಪ.ಜಾ/ಪ.ಪಂ. ಹಿಂಬಾಕಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
- ನಿಗಮದ ಸಿಬ್ಬಂದಿಗಳಿಗೆ ಪ್ರಸ್ತುತ ನೀಡುತ್ತಿದ್ದ ರೂ 3.00 ಲಕ್ಷಗಳ ಗುಂಪು ಪರಿಹಾರ ವಿಮಾ ಯೋಜನೆಯ ಮೊತ್ತವನ್ನು ರೂ 10.00 ಲಕ್ಷಗಳಿಗೆ ಹೆಚ್ಚಿಸಲಾಗಿರುತ್ತದೆ .
- ಕಕರಸಾ ನಿಗಮದಲ್ಲಿ ಸೇವೆಯಲ್ಲಿರುವ ಎಲ್ಲಾ ನೌಕರರ ಹಾಗೂ ಅವರು ಅವಲಂಬಿತರಿಗೆ ಆರ್ಥಿಕ ಭದ್ರತೆ ಒದಗಿಸುವ ಹಿತದೃಷ್ಟಿಯಿಂದ ರೂ.1.20 ಕೋಟಿಯ ವಿಮಾ ಸೌಲಭ್ಯವನ್ನು ಜಾರಿಗೆ ತರಲಾಗಿದೆ.
- 45 ವರ್ಷ ಮೇಲ್ಪಟ್ಟ ನೌಕರರು ಮತ್ತು ಅಧಿಕಾರಿಗಳ ಹೃದಯ ಸಂಬಂಧಿ ತಪಾಸಣೆಗಳನ್ನು ನಡೆಸಲು ಶ್ರೀ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ 05 ವರ್ಷಗಳ ಒಪ್ಪಂದವನ್ನು ಮಾಡಿಕೊಳ್ಳಲಾಗಿರುತ್ತದೆ.
- 2023-24 ಮತ್ತು 2024-2025ರ ಅವಧಿಯಲ್ಲಿ ಒಟ್ಟು 964 ಬಸ್ಸುಗಳನ್ನು ಖರೀದಿಸಲಾಗಿದೆ.
- ಪ್ರಯಾಸ್ ಯೋಜನೆಯಿಂದಾಗಿ ನೌಕರರು ಕೆಲಸ ಮಾಡುವ ಸಂಸ್ಥೆ ಹಾಗೂ ಪ್ರಾದೇಶಿಕ ಭವಿಷ್ಯನಿಧಿ ಕಛೇರಿ ಸಹಯೋಗದೊಂದಿಗೆ ದಾಖಲೆಗಳನ್ನು ಕ್ರೂಢೀಕರಿಸಿ ಮುಂಚಿತವಾಗಿ ಸಲ್ಲಿಸುವುದರಿಂದ ಪಿಂಚಣಿ ಪಾವತಿ ಆದೇಶದ ವಿಲೇವಾರಿ ನೌಕರರ 58ನೇ ವರ್ಷದ ಕೊನೆಯ ದಿನ ವಿತರಿಸಲಾಗುತ್ತಿದೆ. ಕಕರಸಾ ನಿಗಮದ ನೌಕರರಿಗೆ ಇಲ್ಲಿಯವರೆಗೆ 2024-25ನೇ ಸಾಲಿನಲ್ಲಿ 438 ಪಿಂಚಣಿ ಪಾವತಿ ಆದೇಶಗಳನ್ನು ವಿತರಿಸಲಾಗಿದೆ.
- ಈವರೆಗೂ ಕಕರಸಾ ನಿಗಮಕ್ಕೆ ಒಟ್ಟಾರೆ 20 ಪ್ರಶಸ್ತಿ/ಪುರಸ್ಕಾರಗಳು ಲಭಿಸಿರುತ್ತವೆ.
‘BMTC ಪ್ರಯಾಣಿಕ’ರೇ ಆತಂಕ ಬೇಡ: ‘ಡಿಜಿಟಲ್’ ಜೊತೆಗೆ ‘ಪೂರ್ವ ಮುದ್ರಿತ ಪಾಸ್’ ಕೂಡ ಲಭ್ಯ | BMTC Bus Pass
ದಾವಣಗೆರೆಯಲ್ಲಿ ಜೈಲು ಶಿಕ್ಷೆಯ ಭಯದಿಂದ ‘ಕೋರ್ಟ್’ನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ