ಬೆಂಗಳೂರು: ಹನಿಟ್ರ್ಯಾಪ್ ಯತ್ನ ಆರೋಪದಡಿ ಇಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರನ್ನು ಭೇಟಿಯಾದಂತ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರು, ದಾಖಲೆ ಸಹಿತ ದೂರು ನೀಡಿದ್ದಾರೆ.
ಈ ದೂರಿನ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಡಾ.ಜಿ ಪರಮೇಶ್ವರ್, ಉನ್ನತ ಮಟ್ಟದ ತನಿಖೆ ಮಾಡುಸ್ತೇತವೆ ಸಿಎಂ, ನಾನು ಹೇಳಿದ್ದೆವು. ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ ಬಳಿಕ ರಾಜಣ್ಣ ಬ್ಯುಸಿಯಿದ್ದರು. ಈಗ ಬಂದು ಹನಿಟ್ರ್ಯಾಪ್ ಯತ್ನ ಕೇಸ್ ಸಂಬಂಧ ಮನವಿ ಸಲ್ಲಿಸಿದ್ದಾರೆ ಎಂದರು.
ಸಚಿವ ರಾಜಣ್ಣ ಅವರಿಂದ ಮನವಿಯನ್ನು ಪಡೆಯಲಾಗಿದೆ. ಸಿಎಂ ಜೊತೆಗೆ ಚರ್ಚಿಸಿ ಏನು ಕ್ರಮ ಕೈಗೊಳ್ಳಬೇಕೆಂದು ನಿರ್ಧರಿಸುತ್ತೇವೆ. ನನಗೆ ದೂರು ಕೊಡಲು ಆಗಲ್ಲ. ಕೇವಲ ಮನವಿ ಮಾತ್ರ ಸಲ್ಲಿಸುವುದಾಗಿ ಮನವಿಯನ್ನು ಸಲ್ಲಿಸಿದ್ದಾರೆ ಎಂದರು.
ಅಂದಹಾಗೇ ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಯತ್ನದ ಬಗ್ಗೆ ವಿಚಾರ ಪ್ರಸ್ತಾಪವಾಗಿತ್ತು. ಈ ವೇಳೆ ಸಹಕಾರ ಸಚಿವ ಕೆ.ಎನ್ ರಾಜಣ್ಣ ತಮಗೂ ಹನಿಟ್ರ್ಯಾಪ್ ಯತ್ನದ ಆರೋಪವನ್ನು ಮಾಡಿದ್ದರು. ತಮ್ಮ ಪುತ್ರನಿಗೂ ಮಾಡಲು ಯತ್ನ ನಡೆಸಿದ್ದನ್ನು ಬಹಿರಂಗ ಪಡಿಸಿದ್ದರು. ಈ ಬೆನ್ನಲ್ಲೇ ಇಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಭೇಟಿಯಾಗಿ ತನಿಖೆ ನಡೆಸುವಂತೆ ಮನವಿಯನ್ನು ಸಲ್ಲಿಸಿದ್ದಾರೆ.
Good News: ಬೆಂಗಳೂರಲ್ಲಿ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಏಪ್ರಿಲ್ ನಿಂದ ಮನೆ ಬಾಗಿಲಿಗೆ ‘ಉಚಿತ ಖಾತಾ’ ರವಾನೆ