ಬೀದರ್: ಜಿಲ್ಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಿಂದ ಕೊಲೆ ಬೆದರಿಕೆ ಆರೋಪವನ್ನು ಮಾಡಿರುವಂತ ಗುತ್ತಿಗೆದಾರನೊಬ್ಬ ಚಲಿಸುತ್ತಿದ್ದಂತ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ನಡೆದಿದೆ.
ಬೀದರ್ ನಲ್ಲಿ ಚಲಿಸುತ್ತಿದ್ದಂತ ರೈಲಿಗೆ ತಲೆಕೊಟ್ಟು ಗುತ್ತಿಗೆದಾರ ಸಚಿನ್ (26) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 7 ಪುಟಗಳ ಡೆತ್ ನೋಟ್ ಬರೆದಿಟ್ಟು ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ತಿಳಿದು ಬಂದಿದೆ.
ಗುತ್ತಿಗೆದಾರ ಸಚಿನ್ ಬರೆದಿರುವಂತ ಡೆತ್ ನೋಟ್ ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತರೊಬ್ಬರು ತಮಗೆ ಕೊಲೆ ಬೆದರಿಕೆ ಹಾಕಿರೋ ಆರೋಪ ಮಾಡಿರೋದಾಗಿ ಹೇಳಲಾಗುತ್ತಿದೆ.
ಅಂದಹಾಗೆ ಟೆಂಡರ್ ಕೊಡಿಸುವುದಾಗಿ ಹೇಳಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಗುತ್ತಿಗೆದಾರ ಸಚಿನ್ ಬಳಿಯಲ್ಲಿ ಲಕ್ಷಾಂತರ ಹಣ ಪಡೆದಿದ್ದನಂತೆ. ಆ ಬಳಿಕ ಮತ್ತೆ 1 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದನಂತೆ. ಅದರೇ ಟೆಂಡರ್ ಕೊಡಿಸದೇ, ಪಡೆದ ಹಣ ವಾಪಾಸು ಕೇಳಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದನಂತೆ. ಹೀಗಾಗಿ ರೈಲಿಗೆ ತಲೆಕೊಟ್ಟು ಸಚಿನ್ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆಮಲ.