Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಪೇಪರ್ ಕಪ್’ನಲ್ಲಿ ಚಹಾ ಕುಡಿದ್ರೆ ಕ್ಯಾನ್ಸರ್ ಬರುತ್ತಾ.? ಕಥೆಯಲ್ಲ, ಸತ್ಯ ತಿಳಿಯಿರಿ!

14/02/2026 9:03 PM

ಇ-ಸ್ವತ್ತು ತಂತ್ರಾಂಶದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಬಿಗ್ ಅಪ್ ಡೇಟ್

14/02/2026 8:50 PM

ರೈಲ್ವೆ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ ; ಮಾ.1ರಿಂದ ಈ ಸೇವೆಗಳು ಸ್ಥಗಿತ!

14/02/2026 8:50 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇ-ಸ್ವತ್ತು ತಂತ್ರಾಂಶದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಬಿಗ್ ಅಪ್ ಡೇಟ್
KARNATAKA

ಇ-ಸ್ವತ್ತು ತಂತ್ರಾಂಶದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಬಿಗ್ ಅಪ್ ಡೇಟ್

By kannadanewsnow0914/02/2026 8:50 PM

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025 ಅನ್ನು ಅಧಿಸೂಚಿಸಲಾಗಿದೆ. ಸದರಿ ನಿಯಮಗಳನ್ವಯ, ಈ ಹಿಂದೆ ಜಾರಿಯಲ್ಲಿದ್ದ ಇ-ಸ್ವತ್ತು ತಂತ್ರಾಂಶವನ್ನು ನಾಗರಿಕ ಸ್ನೇಹಿಯಾಗಿ ಪರಿಷ್ಕರಿಸಿ, ದಿನಾಂಕ 01-12-2025 ರಂದು ಇ-ಸ್ವತ್ತು 2.0 ತಂತ್ರಾಂಶವನ್ನು ಅಧಿಕೃತವಾಗಿ ಉದ್ಘಾಟಿಸಲಾಗಿತ್ತು ಎಂಬುದಾಗಿ ಎಂಬುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಇ-ಸ್ವತ್ತು ತಂತ್ರಾಂಶದ ಕುರಿತಂತೆ ಬಿಗ್ ಅಪ್ ಡೇಟ್ ನೀಡಿದ್ದಾರೆ.

ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಅವರು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025 ರನ್ವಯ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2025 (ದಿನಾಂಕ: 07-04-2025) ಜಾರಿಗೆ ಬಂದ ದಿನಾಂಕಕ್ಕೆ ಮುಂಚಿತವಾಗಿ ಸೃಜನೆಯಾಗಿರುವ ಕಟ್ಟಡಗಳು ಮತ್ತು ನಿವೇಶನಗಳನ್ನು ಗ್ರಾಮ ಪಂಚಾಯತಿಗಳು ಸಮೀಕ್ಷೆಯ ಸಂದರ್ಭದಲ್ಲಿ ಕೈಬಿಟ್ಟಿದ್ದರಿಂದ ಬಾಧಿತರಾದ ವ್ಯಕ್ತಿಗಳು / ಸಂಸ್ಥೆಗಳು ಹಾಗೂ ಮೇಲಿನ ಉಪಬಂಧಗಳನ್ನು ಜಾರಿಗೆ ತರುವಾಗ ಗ್ರಾಮ ಪಂಚಾಯತಿಯ ತೀರ್ಮಾನದಿಂದ ಬಾಧಿತರಾದ ವ್ಯಕ್ತಿಗಳು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಅದರಂತೆ, ದಿನಾಂಕ 07-04-2025 ಕ್ಕಿಂತ ಮುಂಚಿತವಾಗಿ ಸೃಜನೆಯಾಗಿರುವ ಕಟ್ಟಡಗಳು ಮತ್ತು ನಿವೇಶನಗಳಿಗೆ, ಹಾಗೂ ಅಂತಹ ಆಸ್ತಿಗಳು ಪಂಚತಂತ್ರ ತಂತ್ರಾಂಶದಲ್ಲಿ ದಾಖಲೆಯಾಗಿರದಿದ್ದಲ್ಲಿ, 2- ಖಾತಾ ಪಡೆಯುವ ಉದ್ದೇಶದಿಂದ ಇ-ಸ್ವತ್ತು 2.0 ತಂತ್ರಾಂಶದ Citizen Interface ಮೂಲಕ ಹೊಸ ನಮೂನೆ-11ಬಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಇ-ಸ್ವತ್ತು 2.0 ತಂತ್ರಾಂಶದ Citizen Interface ಮೂಲಕ ಇದುವರೆಗೆ 27,000 ಕ್ಕಿಂತ ಹೆಚ್ಚು ಹೊಸ ನಮೂನೆ-11ಬಿ ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ 26,000 ಅರ್ಜಿಗಳು ಸಲ್ಲಿಕೆಯಾಗಿವೆ. ಹೊಸ ನಿಯಮಗಳನ್ವಯ, ಸದರಿ ಕಟ್ಟಡಗಳು ಮತ್ತು ನಿವೇಶನಗಳು ದಿನಾಂಕ 07-04-2025 ಕ್ಕಿಂತ ಮುಂಚಿತವಾಗಿ ಸೃಜನೆಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ, ಈ ಅರ್ಜಿಗಳನ್ನು ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿಗಳ ಮೂಲಕ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅನುಮೋದನೆಗಾಗಿ ಸಲ್ಲಿಸಲಾಗುತ್ತಿದೆ ಎಂದಿದ್ದಾರೆ.

ನಮೂನೆ-11ಬಿ ಇ-ಖಾತಾಗಳಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಮೋದನಾ ಪ್ರಕ್ರಿಯೆಯನ್ನು ತಂತ್ರಾಂಶದಲ್ಲಿ ಅಳವಡಿಸಿರುವ ಕಾರಣ, ಹೊಸ ನಮೂನೆ-11ಬಿ ಅರ್ಜಿಗಳ ವಿಲೇವಾರಿಯಲ್ಲಿ ಕೆಲವು ವಿಳಂಬ ಉಂಟಾಗಿದೆ. ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅನುಮೋದನೆ ನೀಡಿದ ನಂತರ, ಗ್ರಾಮ ಪಂಚಾಯತಿಗಳಿಂದ 15 ಕೆಲಸ ದಿನಗಳ ಕಾಲಾವಧಿಯಲ್ಲಿ ನಮೂನೆ-11ಬಿ ಗಳನ್ನು ವಿತರಿಸಲಾಗುವುದು ಎಂದು ಹೇಳಿದ್ದಾರೆ.

ಈಗಾಗಲೇ ಸಲ್ಲಿಕೆಯಾಗಿರುವ ಹೊಸ ನಮೂನೆ-11ಬಿ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿ ವಿತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ. ಋಣಭಾರ ಪ್ರಮಾಣ ಪತ್ರ ಸಲ್ಲಿಕೆಯ ಕುರಿತಾದ ಮಾಹಿತಿಗಳು ಇಂತಿವೆ, ಇ -ಸ್ವತ್ತು ಅರ್ಜಿದಾರರ ನೋಂದಾಯಿತ ಪತ್ರವು (Registered Deed) 01-04-2004 ಕ್ಕಿಂತ ಮುಂಚಿತವಾಗಿದ್ದರೆ, ಅರ್ಜಿದಾರರು ಎರಡು ಋಣಭಾರ ಪ್ರಮಾಣಪತ್ರ (EC) ದಾಖಲೆಗಳನ್ನು ಪಡೆಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

1. ಅರ್ಜಿದಾರರು ನೋಂದಣಿ ದಿನಾಂಕಕ್ಕಿಂತ ಕನಿಷ್ಠ ಒಂದು ದಿನ ಮೊದಲ ದಿನಾಂಕದಿಂದ 31-03-2004 ರವರೆಗಿನ ಋಣಭಾರ ಪ್ರಮಾಣಪತ್ರ (EC) ಹಾಗೂ, 2. ದಿನಾಂಕ: 01-04-2004 ರಿಂದ ಕನಿಷ್ಠ ಇವತ್ತಿನವರೆಗಿನ ಪಡೆದ EC.

ಉದಾಹರಣೆ – 1 ಅರ್ಜಿದಾರರ ನೋಂದಾಯಿತ ಪತ್ರವು ದಿನಾಂಕ : 17-08-1998 ರಂದು ನೋಂದಣಿಯಾಗಿದ್ದರೆ, ದಿನಾಂಕ 16-08-1998 ರಿಂದ 31-03-2004 ವರೆಗಿನ ಋಣಭಾರ ಪ್ರಮಾಣಪತ್ರ (EC) ಪಡೆದುಕೊಳ್ಳುವುದು ಹಾಗೂ ದಿನಾಂಕ 01-04- 2004 ರಿಂದ ಕನಿಷ್ಠ ಇವತ್ತಿನವರೆಗಿನ ಋಣಭಾರ ಪ್ರಮಾಣಪತ್ರ (EC) ಪಡೆಡುಕೊಳ್ಳುವುದು.

ಉದಾಹರಣೆ 2. ನಿಮ್ಮ ನೋಂದಾಯಿತ ಪತ್ರವು ದಿನಾಂಕ 13-12-2004 ನೋಂದಣಿಯಾಗಿದ್ದರೆ, 12.12.2004 ರಿಂದ ಇವತ್ತಿನವರೆಗಿನ ಒಂದೇ ಋಣಭಾರ ಪ್ರಮಾಣಪತ್ರ (EC) ಪಡೆಡುಕೊಳ್ಳುವುದು.

ಉದಾಹರಣೆ 3 ನಿಮ್ಮ ನೋಂದಾಯಿತ ಪತ್ರವು ದಿನಾಂಕ 13-12-2025ರಂದು ನೋಂದಣಿಯಾಗಿದ್ದರೆ, ದಿನಾಂಕ 12-12-2025ರಿಂದ ಇವತ್ತಿನವರೆಗೆ ಒಂದೇ ಋಣಭಾರ ಪ್ರಮಾಣಪತ್ರ (EC) ಪಡೆಡುಕೊಳ್ಳುವುದು.

ಗಮನಿಸಬೇಕಾದ ಅಂಶ- ಅರ್ಜಿದಾರರು ಸಲ್ಲಿಸಿದ ಋಣಭಾರ ಪ್ರಮಾಣಪತ್ರ (EC) ದಾಖಲೆಯಲ್ಲಿ ನಿಮ್ಮ ನೋಂದಾಯಿತ ಪತ್ರದ ಸಂಖ್ಯೆ ಇಲ್ಲವಾದಲ್ಲಿ, ಇ-ಸ್ವತ್ತು ಖಾತೆಗೆ ಸಲ್ಲಿಸಿದ ಅರ್ಜಿಯನ್ನು ಮುಂದಿನ ಪ್ರಕ್ರಿಯೆಗೆ ತೆಗೆದುಕೊಳ್ಳಲಾಗುವುದಿಲ್ಲ ಅಂತ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ
—
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025 ಅನ್ನು ಅಧಿಸೂಚಿಸಲಾಗಿದೆ. ಸದರಿ ನಿಯಮಗಳನ್ವಯ, ಈ ಹಿಂದೆ ಜಾರಿಯಲ್ಲಿದ್ದ ಇ-ಸ್ವತ್ತು ತಂತ್ರಾಂಶವನ್ನು ನಾಗರಿಕ ಸ್ನೇಹಿಯಾಗಿ ಪರಿಷ್ಕರಿಸಿ,…

— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) February 14, 2026

ಮಂಡ್ಯ ಒಮ್ಮತಕ್ಕೆ ಬಾರದ ಸಂಧಾನ ಸಭೆ: ಸಚಿವರು- ಪ್ರತಿಭಟನಾಕಾರರ ಸಭೆ ವಿಫಲ

ಪ್ರತಿಭೆ ಅನಾವರಣಕ್ಕೆ ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ: ಮದ್ದೂರು ಶಾಸಕ ಕೆ.ಎಂ.ಉದಯ್

Share. Facebook Twitter LinkedIn WhatsApp Email

Related Posts

ಪ್ರತಿಭೆ ಅನಾವರಣಕ್ಕೆ ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ: ಮದ್ದೂರು ಶಾಸಕ ಕೆ.ಎಂ.ಉದಯ್

14/02/2026 8:30 PM2 Mins Read

ಬಂಜಾರ ಸಮುದಾಯಕ್ಕೆ ನ್ಯಾಯ ಒದಗಿಸಿದ್ದು ಕಾಂಗ್ರೆಸ್: ಡಿಸಿಎಂ ಡಿ.ಕೆ. ಶಿವಕುಮಾರ್

14/02/2026 8:27 PM3 Mins Read

ಮಂಡ್ಯ ಒಮ್ಮತಕ್ಕೆ ಬಾರದ ಸಂಧಾನ ಸಭೆ: ಸಚಿವರು- ಪ್ರತಿಭಟನಾಕಾರರ ಸಭೆ ವಿಫಲ

14/02/2026 7:59 PM2 Mins Read
Recent News

‘ಪೇಪರ್ ಕಪ್’ನಲ್ಲಿ ಚಹಾ ಕುಡಿದ್ರೆ ಕ್ಯಾನ್ಸರ್ ಬರುತ್ತಾ.? ಕಥೆಯಲ್ಲ, ಸತ್ಯ ತಿಳಿಯಿರಿ!

14/02/2026 9:03 PM

ಇ-ಸ್ವತ್ತು ತಂತ್ರಾಂಶದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಬಿಗ್ ಅಪ್ ಡೇಟ್

14/02/2026 8:50 PM

ರೈಲ್ವೆ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ ; ಮಾ.1ರಿಂದ ಈ ಸೇವೆಗಳು ಸ್ಥಗಿತ!

14/02/2026 8:50 PM

ಪ್ರತಿಭೆ ಅನಾವರಣಕ್ಕೆ ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ: ಮದ್ದೂರು ಶಾಸಕ ಕೆ.ಎಂ.ಉದಯ್

14/02/2026 8:30 PM
State News
KARNATAKA

ಇ-ಸ್ವತ್ತು ತಂತ್ರಾಂಶದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಬಿಗ್ ಅಪ್ ಡೇಟ್

By kannadanewsnow0914/02/2026 8:50 PM KARNATAKA 3 Mins Read

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ,…

ಪ್ರತಿಭೆ ಅನಾವರಣಕ್ಕೆ ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ: ಮದ್ದೂರು ಶಾಸಕ ಕೆ.ಎಂ.ಉದಯ್

14/02/2026 8:30 PM

ಬಂಜಾರ ಸಮುದಾಯಕ್ಕೆ ನ್ಯಾಯ ಒದಗಿಸಿದ್ದು ಕಾಂಗ್ರೆಸ್: ಡಿಸಿಎಂ ಡಿ.ಕೆ. ಶಿವಕುಮಾರ್

14/02/2026 8:27 PM

ಮಂಡ್ಯ ಒಮ್ಮತಕ್ಕೆ ಬಾರದ ಸಂಧಾನ ಸಭೆ: ಸಚಿವರು- ಪ್ರತಿಭಟನಾಕಾರರ ಸಭೆ ವಿಫಲ

14/02/2026 7:59 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.