ಬೆಂಗಳೂರು: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಅನಾಲಿಟಿಕ್ಸ್ ಇಂಡಿಯಾ ಮ್ಯಾಗಜೀನ್ (AIM- ಎಐಎಂ) ಬಿಡುಗಡೆ ಮಾಡಿರುವ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಭಾರತದ ಅತ್ಯಂತ ಪ್ರಭಾವಶಾಲಿ ಟಾಪ್ 10 ನೀತಿ ನಿರೂಪಕ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡು ರಾಜ್ಯದ ಹಿರಿಮೆ ಹೆಚ್ಚಿಸಿದ್ದಾರೆ.
ನಿಯತಕಾಲಿಕೆಯ ಪಟ್ಟಿಯಲ್ಲಿರುವ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಪ್ರಿಯಾಂಕ್ ಖರ್ಗೆ ಅವರ ಹೆಸರು 9 ನೆಯ ಸ್ಥಾನದಲ್ಲಿದ್ದು, ಇದು ಐಟಿ ಬಿಟಿ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ಎತ್ತಿ ತೋರಿಸುತ್ತದೆ.
ಅನಾಲಿಟಿಕ್ಸ್ ಇಂಡಿಯಾ ಮ್ಯಾಗಜೀನ್ (AIM- 2025 ರ ಭಾರತದ ಕೃತಕ ಬುದ್ಧಿಮತ್ತೆಯ ಅತ್ಯಂತ ಪ್ರಭಾವಶಾಲಿ ನಾಯಕರ ವಾರ್ಷಿಕ ಸಂಕಲನವನ್ನು ಪ್ರಸ್ತುತಪಡಿಸಿದೆ, ಇದು ಭಾರತದಲ್ಲಿ AI ಭವಿಷ್ಯವನ್ನು ರೂಪಿಸಲು ಸಹಾಯ ಮಾಡುವ ವ್ಯಕ್ತಿಗಳ ಸಂಗ್ರಹಿಸಲಾದ ಪಟ್ಟಿಯನ್ನು ಹೊಂದಿದೆ.
ಎಐಎಂ ನಿಯತಕಾಲಿವು, 2025 ರ ಭವಿಷ್ಯದಲ್ಲಿ ಕೃತಕ ಬುದ್ದಿಮತ್ತೆ ಕ್ಷೇತ್ರದಲ್ಲಿ ಪ್ರಭಾವ ಬೀರುವ ನಾಯಕರ ಪಟ್ಟಿ ತಯಾರಿಸಿ ತನ್ನ ವಾರ್ಷಿಕ ಸಂಕಲವನ್ನು ಪ್ರಸ್ತುತಪಡಿಸಿದೆ. ಕೃತಕ ಬುದ್ದಿಮತ್ತೆಯ ಬಳಕೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ನೂರು ಮಂದಿ ವಿಜ್ಞಾನಿಗಳು, ಸಂಶೋಧಕರು, ನವೋದ್ಯಮ ಸಂಸ್ಥಾಪಕರು, ತಂತ್ರಜ್ಞಾನ ಪರಿಣತರು, ನೀತಿ ನಿರೂಪಕರು, ಸಾರ್ವಜನಿಕ ವಲಯದ ನಾಯಕರು ಮತ್ತು ವೃತ್ತಿಪರರನ್ನು ಒಗ್ಗೂಡಿಸಿದ್ದು ಅವರಲ್ಲಿ ಖರ್ಗೆ ಅವರು ಸೇರಿದ್ದಾರೆ.
ದೇಶದ ಅತ್ಯಂತ ಪ್ರಗತಿಪರ ನೀತಿಗಳಲ್ಲಿ ಒಂದಾದ ಕರ್ನಾಟಕದ ಕೃತಕ ಬುದ್ದಿಮತ್ತೆ ನೀತಿಯನ್ನು ರೂಪಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ನಾಯಕತ್ವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೃತಕ ಬುದ್ದಿಮತ್ತೆ ಅಳವಡಿಸಿಕೊಳ್ಳುವಲ್ಲಿ ತರಲಾಗಿರುವ ನಿರ್ಣಾಯಕ ಬದಲಾವಣೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಪರಿಯನ್ನು ಪ್ರತಿಪಾದಿಸಿರುವ ಖರ್ಗೆ, ಹಲವಾರು ಪ್ರಮಖ ಬದಲಾವಣೆಯ ಉಪಕ್ರಮಗಳಿಗೆ ಚಾಲನೆ ನೀಡಿದ್ದಾರೆ. ರಾಜಧಾನಿಯ ಆಚೆಗೆ ನಾವೀನ್ಯತೆ ಮತ್ತು ತಂತ್ರಜ್ಞಾನದ ಬೆಳವಣಿಗೆಯನ್ನು ವಿಕೇಂದ್ರೀಕರಿಸುವ ಗುರಿಯನ್ನು ಹೊಂದಿರುವ “ಬಿಯಾಂಡ್ ಬೆಂಗಳೂರು” ಈ ಯೋಜನೆಯನ್ನು ಜಾರಿಗೊಳಿಸಿ ಆ ಮೂಲಕ ರಾಜ್ಯದಾದ್ಯಂತ ಪ್ರತಿಭೆ ಮತ್ತು ಅವಕಾಶಗಳನ್ನು ಬೆಳೆಸುವ ಗುರಿಯನ್ನು ಹೊಂದಲಾಗಿದೆ. ಡಿಜಿಟಲ್ ನಾವೀನ್ಯತೆಯಲ್ಲಿ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ಭದ್ರಪಡಿಸುವುದರ ಜೊತೆಗೆ ಕೃತಕ ಬುದ್ಧಿಮತ್ತೆಗಾಗಿ ಭಾರತದ ಮೊದಲ ಶ್ರೇಷ್ಠತಾ ಕೇಂದ್ರದ ಉದ್ಘಾಟನೆಯನ್ನು ಮಾಡಿ ಅದರ ಮೇಲ್ವಿಚಾರಣೆ ವಹಿಸಿಕೊಂಡಿದ್ದಾರೆ.
ಕೃತಕ ಬುದ್ದಿಮತ್ತೆಯನ್ನು ಕೇವಲ ಆರ್ಥಿಕ ಬೆಳವಣಿಗೆಗೆ ಮಾತ್ರವಲ್ಲದೇ ಸಾರ್ವಜನಿಕರ ಒಳಿತಿಗಾಗಿ ಸಾಧನವನ್ನಾಗಿ ಬಳಸಿಕೊಳ್ಳಬಹುದು ಎಂದು ಪ್ರತಿಪಾದಿಸುವ ಖರ್ಗೆ, ಆಡಳಿತ, ಕೃಷಿ, ಶಿಕ್ಷಣ ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ಅದರ ಅನ್ವಯವನ್ನು ಸಕ್ರಿಯವಾಗಿ ಉತ್ತೇಜಿಸಿದ್ದಾರೆ. ಇದು ನಾವೀನ್ಯತೆ ಮತ್ತು ಹೊಣೆಗಾರಿಕೆಯ ನಡುವೆ ಸಮತೋಲನವನ್ನು ಸಾಧಿಸುತ್ತದೆ.
ಸಚಿವ ಖರ್ಗೆ ಅವರ ಮಾರ್ಗದರ್ಶನದಲ್ಲಿ ಕೃತಕ ಬುದ್ದಿಮತ್ತೆ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಜಾಗತಿಕ ಮಟ್ಟದಲ್ಲಿ ಭಾಗಿದಾರರಿಗೆ ಪ್ರಥಮಾದ್ಯತೆಯ ತಾಣವಾಗಿದೆ. ಇದರ ಜೊತೆಗೆ ನವೋದ್ಯಮಗಳ ಹಾಗೂ ಸ್ವದೇಶಿ ಪ್ರತಿಭೆಗಳ ಬೆಳವಣಿಗೆಗೆ ಅನುಕೂಲವಾಗಿದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಮತ್ತು ತೆಲಂಗಾಣದ ಐಟಿ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಸಚಿವ ದುಡ್ಡಿಲಾ ಶ್ರೀಧರ್ ಬಾಬು ಕೂಡ ಟಾಪ್ 10 ಪಟ್ಟಿಯಲ್ಲಿದ್ದಾರೆ.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಸಿಹಿಸುದ್ದಿ: ಗೌರವ ಧನ ಹೆಚ್ಚಳ
BREAKING: ನಾಳೆ ‘ನಟ ದರ್ಶನ್’ ಜಾಮೀನು ಭವಿಷ್ಯ ‘ಸುಪ್ರೀಂ ಕೋರ್ಟ್’ ನಿರ್ಧಾರ | Actor Darshan