ಬೆಂಗಳೂರು: ವಿಜ್ಞಾನ ಮತ್ತು ಮುಂಚೂಣಿಯ ತಂತ್ರಜ್ಞಾನಗಳಿಂದ ನೈಜ-ಜಗತ್ತಿನ ಫಲಿತಾಂಶಗಳನ್ನು ಚುರುಕುಗೊಳಿಸಲು ಸಂಶೋಧಕರು, ಸಂಸ್ಥಾಪಕರು ಮತ್ತು ಉದ್ಯಮ ವಲಯವನ್ನು ಒಂದೇ ವೇದಿಕೆಯಲ್ಲಿ ತರುವ ಹೊಸ ಆವಿಷ್ಕಾರ ಹಾಗೂ ಉದ್ಯಮ ವೇದಿಕೆಯಾದ ಏಟ್ರಿಯಾ ವಿಶ್ವವಿದ್ಯಾಲಯದ ಏಟ್ರಿಯಾ ಬಿಯಾಂಡರ್ ಲ್ಯಾಬ್‌ಗಳನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು.
ಈ ಪ್ರಯೋಗಾಲಯವು ಸ್ವಯಂಚಾಲಿತ ಲಾಜಿಸ್ಟಿಕ್ಸ್ ವಿಮಾನ, ಗ್ರೀನ್ ಹೈಡ್ರೋಜನ್ ಮತ್ತು ಬಯೋಮೆಡಿಕಲ್ ಸುರಕ್ಷತೆಯಂತಹ ಕ್ಷೇತ್ರಗಳಲ್ಲಿ 9 ಆರಂಭಿಕ ಹಂತದ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸುವ ಮೂಲಕ ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸಿದೆ.
ಉದ್ಘಾಟನೆಯ ಬಳಿಕ, ಕರ್ನಾಟಕವು ಡೀಪ್‌ಟೆಕ್ ಮತ್ತು ವಿಜ್ಞಾನ ಆಧಾರಿತ ಆವಿಷ್ಕಾರದ ಮುಂದಿನ ಹಂತವನ್ನು ಹೇಗೆ ಮುನ್ನಡೆಸಬಹುದು ಎಂಬ ವಿಷಯದ ಕುರಿತು ನಡೆದ ಸಂವಾದದಲ್ಲಿ ಸಚಿವರು ಭಾಗವಹಿಸಿದರು.
ಇದೇ ವೇಳೆ ಪ್ರಬಲವಾದ ಸಂಶೋಧನೆ ಹಾಗೂ ಅಭಿವೃದ್ಧಿ ಇಕೋ ಸಿಸ್ಟಂ ಅನ್ನು ನಿರ್ಮಿಸುವುದು, ಎಐ ಮತ್ತು ಜೈವಿಕ ತಂತ್ರಜ್ಞಾನದ ಸಮ್ಮಿಲನ ಹಾಗೂ ಸಾಗರ ಮತ್ತು ನೀಲಿ ಆರ್ಥಿಕ ತಂತ್ರಜ್ಞಾನಗಳಲ್ಲಿನ ಉದಯೋನ್ಮುಖ ಅವಕಾಶಗಳ ಕುರಿತು ಮಾತನಾಡಿದರು.
ಏಟ್ರಿಯಾ ಬಿಯಾಂಡರ್ ಲ್ಯಾಬ್ಸ್‌ನಂತಹ ಯೋಜನೆಗಳು ಯುವ ಉದ್ಯಮಿಗಳಿಗೆ ಪ್ರಬಲ ವೇಗವರ್ಧಕವಾಗಬಲ್ಲವು. ಇವು ಅತ್ಯಾಧುನಿಕ ಸಂಶೋಧನೆಗಳನ್ನು ಅರ್ಥಪೂರ್ಣ ಉತ್ಪನ್ನಗಳು, ಉದ್ಯೋಗಗಳು ಮತ್ತು ಕರ್ನಾಟಕಕ್ಕೆ ದೀರ್ಘಕಾಲೀನ ಕೊಡುಗೆಯಾಗಿ ಪರಿವರ್ತಿಸಲು ಸಹಕಾರಿಯಾಗಲಿವೆ ಎಂದು ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸಾಗರದ ಮಾರಿಕಾಂಬೆ ದರ್ಶನದ ಪಡೆದ KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ: ದೇವಸ್ಥಾನ ಸಮಿತಿಯಿಂದ ಸನ್ಮಾನ








