Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಎಬೋಲಾ ವೈರಸ್ ಭೀತಿ: ಕರ್ನಾಟಕದಲ್ಲಿ ಹೈ ಅಲರ್ಟ್ ಘೋಷಣೆ! Ebola Virus

13 ಮಂದಿ ಶಾಸಕರು ಕರ್ನಾಟಕದ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕಾರ | DK Shivakumar Cabinet Minister

BIG BREAKING: ಸಿಎಂ ಡಿ.ಕೆ ಶಿವಕುಮಾರ್ ಸಂಪುಟದ ನೂತನ ಸಚಿವರಾಗಿ ’13 ಮಂದಿ ಶಾಸಕ’ರು ಪ್ರಮಾಣವಚನ ಸ್ವೀಕಾರ | DK Shivakumar Cabinet Minister

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BJP, RSS ನಾಯಕರಿಗೆ ಈ ಪ್ರಶ್ನೆ ಕೇಳಿದ ಸಚಿವ ಎನ್.ಎಸ್ ಭೋಸರಾಜು
KARNATAKA

BJP, RSS ನಾಯಕರಿಗೆ ಈ ಪ್ರಶ್ನೆ ಕೇಳಿದ ಸಚಿವ ಎನ್.ಎಸ್ ಭೋಸರಾಜು

By ವಸಂತ ಬಿ ಈಶ್ವರಗೆರೆ

ಬೆಂಗಳೂರು : ಕಾಂಗ್ರೆಸ್‌ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಐದು ದಶಕಗಳಿಂದಲೂ ಪರಿಶುದ್ದ ರಾಜಕೀಯ ಜೀವನ ನಡೆಸಿಕೊಂಡು ಬರುತ್ತಿದ್ದಾರೆ. ನ್ಯಾಯಬದ್ದವಾಗಿ ಮಂಜೂರಾಗಿದ್ದ ಜಮೀನನ್ನು ಹಿಂದಿರುಗಿಸಿ ರಾಹುಲ್‌ ಖರ್ಗೆ ಮೇಲ್ಪಂಕ್ತಿ ಹಾಕಿದ್ದಾರೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನಾಯಕರು ಮಂಜೂರು ಮಾಡಿಸಿಕೊಂಡಿರುವ ಜಮೀನು/ನಿವೇಶನಗಳನ್ನು ಯಾವಾಗ ಹಿಂದಿರುಗಿಸುತ್ತೀರೀ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಪ್ರಶ್ನಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಐದು ದಶಕಗಳಿಂದಲೂ ಪರಿಶುದ್ಧ ರಾಜಕೀಯ ಜೀವನ ನಡೆಸಿಕೊಂಡು ಬಂದಿರುವ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವುದು ಸರಿಯಲ್ಲ. ನಿರುದ್ಯೋಗಿಗಳಿಗೆ ತರಬೇತಿ ನೀಡಲು ಬಹುಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ನಿವೇಶನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಇದಕ್ಕೆ ಕಾನೂನುಬದ್ದವಾಗಿ ನಿವೇಶನವೂ ಮಂಜೂರಾಗಿತ್ತು. ಬಿಜೆಪಿ ನಾಯಕರ ರಾಜಕೀಯ ಖಯಾಲಿಯ ಸುಳ್ಳು ಹಾಗೂ ಅಪಪ್ರಚಾರಕ್ಕೆ ಸಿಲುಕಬಾರದು ಎಂಬ ಕಾರಣಕ್ಕೆ ನ್ಯಾಯಬದ್ಧವಾಗಿ ಲಭ್ಯವಾಗಿದ್ದ ಜಮೀನನ್ನು ಹಿಂದಿರುಗಿಸಿ ರಾಹುಲ್‌ ಖರ್ಗೆ ಅವರು ಮೇಲ್ಪಂಕ್ತಿ ಹಾಕಿದ್ದಾರೆ.

ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ನಿಯಮಾನುಸಾರ ಹಂಚಿಕೆಯಾಗಿದ್ದ ಐದು ಎಕರೆ ಜಮೀನನ್ನು ಸರ್ಕಾರಕ್ಕೆ ಹಿಂದಿರುಗಿಸುವ ಮೂಲಕ ಖರ್ಗೆ ಕುಟುಂಬ ಮಾದರಿಯಾಗಿದ್ದಾರೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನಾಯಕರು ತಮಗೆ ಹಂಚಿಕೆಯಾಗಿದ್ದ ಜಮೀನು, ನಿವೇಶನಗಳನ್ನು ಹಿಂದಿರುಗಿಸಿ ಖರ್ಗೆ ಅವರಂತೆಯೇ ರಾಜ್ಯದ ಜನರಿಗೆ ಆದರ್ಶವಾಗಬೇಕು.

ಅವರು ಯಾವಾಗ ತಮ್ಮ ನಿವೇಶನವನ್ನು ಹಿಂದಿರುಗಿಸುತ್ತಾರೆ? ಸದಾ ಮೊಸರಲ್ಲಿ ಕಲ್ಲು ಹುಡುಕುವ ಬಿಜೆಪಿ, ಸಂಘ ಪರಿವಾರದ ನಾಯಕರೇ ನೀವು ಯಾವಾಗ ರಾಹುಲ್‌ ಖರ್ಗೆ ಅವರಂತೆ ಜಮೀನು, ನಿವೇಶನಗಳನ್ನು ಹಿಂದಿರುಗಿಸಿ ರಾಜ್ಯದ ಜನತೆಗೆ ಮಾದರಿಯಾಗುತ್ತೀರಿ ಎಂದು ಸಚಿವರು ಪ್ರಶ್ನಿಸಿದ್ದಾರೆ.

ಕಲ್ಯಾಣ ಕರ್ನಾಟಕದ ಅಭಿವೃದ್ದಿಯ ಬಗ್ಗೆ ಖರ್ಗೇ ಅವರಿಗೆ ಹೆಚ್ಚಿನ ಕಾಳಜಿಯಿದೆ. ಈ ಟ್ರಸ್ಟ್‌ನ ಮೂಲಕ ಈ ಬೀದರ್‌, ಕಲಬುರ್ಗಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಜನಸಾಮಾನ್ಯರಿಗೆ ಹಾಗೂ ಬಡವರಿಗೆ ಶಿಕ್ಷಣ ನೀಡಿ ಅವರಿಗೆ ಉದ್ಯೋಗ ಕಲ್ಪಿಸುವ ಕಾರ್ಯ ಮಾಡಿದ್ದಾರೆ. ಈ ಟ್ರಸ್ಟ್‌ ಲಾಭಾದಾಯಕವಾಗಿ ಕೆಲಸ ಮಾಡುತ್ತಿಲ್ಲ, ಜನಸಾಮಾನ್ಯರಿಗೆ ಶಿಕ್ಷಣ ಮತ್ತು ಕೌಶಲ್ಯದಲ್ಲಿ ನೆರವು ನೀಡುವ ಸಂಸ್ಥೆಯಾಗಿದೆ. ಇಂತಹ ಸಂಸ್ಥೆಯ ಹಾಗೂ ಆಡಳಿತ ಮಂಡಳಿಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದು ಬಿಜೆಪಿ ನಾಯಕರಿಗೆ ಶೋಭೆ ತರುವುದಿಲ್ಲ. ಬಿಜೆಪಿ ನಾಯಕರು ತಮ್ಮ ರಾಜಕೀಯ ಬೇಳೆ ಕಾಳನ್ನು ಬೇಯಿಸಿಕೊಳ್ಳುವ ಭರಾಟೆಯಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಖಯಾಲಿಯನ್ನು ಬಿಡಬೇಕು ಎಂದು ಸಚಿವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರದಿಂದ ಕರ್ನಾಟಕ ವಿಧಾನ ಪರಿಷತ್ ಕಾರ್ಯದರ್ಶಿ-2 ಹುದ್ದೆಗೆ ಎಸ್.ನಿರ್ಮಲಾ ಬಡ್ತಿ

ಚಿತ್ರದುರ್ಗದಲ್ಲಿ ಮನಕಲಕುವ ಘಟನೆ : ಪತ್ನಿ ಸಾವಿನಿಂದ ನೊಂದು ಪತಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ!

Share. Facebook Twitter LinkedIn WhatsApp Email

Related Posts

BREAKING: ಎಬೋಲಾ ವೈರಸ್ ಭೀತಿ: ಕರ್ನಾಟಕದಲ್ಲಿ ಹೈ ಅಲರ್ಟ್ ಘೋಷಣೆ! Ebola Virus

2 Mins Read

13 ಮಂದಿ ಶಾಸಕರು ಕರ್ನಾಟಕದ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕಾರ | DK Shivakumar Cabinet Minister

1 Min Read

BIG BREAKING: ಸಿಎಂ ಡಿ.ಕೆ ಶಿವಕುಮಾರ್ ಸಂಪುಟದ ನೂತನ ಸಚಿವರಾಗಿ ’13 ಮಂದಿ ಶಾಸಕ’ರು ಪ್ರಮಾಣವಚನ ಸ್ವೀಕಾರ | DK Shivakumar Cabinet Minister

1 Min Read
Recent News

BREAKING: ಎಬೋಲಾ ವೈರಸ್ ಭೀತಿ: ಕರ್ನಾಟಕದಲ್ಲಿ ಹೈ ಅಲರ್ಟ್ ಘೋಷಣೆ! Ebola Virus

13 ಮಂದಿ ಶಾಸಕರು ಕರ್ನಾಟಕದ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕಾರ | DK Shivakumar Cabinet Minister

BIG BREAKING: ಸಿಎಂ ಡಿ.ಕೆ ಶಿವಕುಮಾರ್ ಸಂಪುಟದ ನೂತನ ಸಚಿವರಾಗಿ ’13 ಮಂದಿ ಶಾಸಕ’ರು ಪ್ರಮಾಣವಚನ ಸ್ವೀಕಾರ | DK Shivakumar Cabinet Minister

BREAKING: ಡಿ.ಕೆ ಶಿವಕುಮಾರ್ ಸಂಪುಟದಲ್ಲಿ ಸಚಿವರಾಗಿ ಡಾ.ಜಿ ಪರಮೇಶ್ವರ್, ವಿ.ಮುನಿಯಪ್ಪ ಪ್ರಮಾಣವಚನ ಸ್ವೀಕಾರ

State News
KARNATAKA

BREAKING: ಎಬೋಲಾ ವೈರಸ್ ಭೀತಿ: ಕರ್ನಾಟಕದಲ್ಲಿ ಹೈ ಅಲರ್ಟ್ ಘೋಷಣೆ! Ebola Virus

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಜಾಗತಿಕವಾಗಿ ಎಬೋಲಾ ವೈರಸ್ ಕಾಯಿಲೆ (Ebola Virus Disease – EVD) ಹರಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು…

13 ಮಂದಿ ಶಾಸಕರು ಕರ್ನಾಟಕದ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕಾರ | DK Shivakumar Cabinet Minister

BIG BREAKING: ಸಿಎಂ ಡಿ.ಕೆ ಶಿವಕುಮಾರ್ ಸಂಪುಟದ ನೂತನ ಸಚಿವರಾಗಿ ’13 ಮಂದಿ ಶಾಸಕ’ರು ಪ್ರಮಾಣವಚನ ಸ್ವೀಕಾರ | DK Shivakumar Cabinet Minister

BREAKING: ಡಿ.ಕೆ ಶಿವಕುಮಾರ್ ಸಂಪುಟದಲ್ಲಿ ಸಚಿವರಾಗಿ ಡಾ.ಜಿ ಪರಮೇಶ್ವರ್, ವಿ.ಮುನಿಯಪ್ಪ ಪ್ರಮಾಣವಚನ ಸ್ವೀಕಾರ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.