ಬೆಂಗಳೂರು: ಸಚಿವ ಡಾ.ಮಹಾದೇವಪ್ಪ ಅವರೇ ವಾಲ್ಮೀಕಿ ಸಮಾಜಕ್ಕೆ ಆಗಿರುವ ಅನ್ಯಾಯದ ಬಗ್ಗೆ ಚರ್ಚೆ ಮಾಡುವುದು ಉತ್ತಮ ಅಲ್ಲವೇ ಅಂತ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಸ್ವಾಮಿ ಹೆಚ್.ಸಿ ಮಹಾದೇವಪ್ಪ ಅವರೇ, ತಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಅಣಬೆಗಳಂತೆ ತೆಲೆ ಎತ್ತುವ ಎಡಬಿಡಂಗಿ ಬುದ್ದಿಜೀವಿಗಳ ಅಧಿಕಪ್ರಸಂಗಿತನ ನೋಡಿ ನೋಡಿ ಕನ್ನಡಿಗರಿಗೆ ಸಾಕಾಗಿದೆ ಎಂದಿದ್ದಾರೆ.
ಈಗ ಇನ್ನೊಂದು ಅನಾವಶ್ಯಕ ಚರ್ಚೆ ಹುಟ್ಟುಕಾಕುವ ಮೂಲಕ ತಾವು ಮತ್ತೊಬ್ಬ ಬುದ್ಧಿಜೀವಿ ಆಗಲು ಪ್ರಯತ್ನ ಪಡಬೇಡಿ ಎಂಬುದಾಗಿ ತಿಳಿಸಿದ್ದಾರೆ.
ಬುದ್ಧ, ಬಸವ, ಅಂಬೇಡ್ಕರರ ಹೆಸರು ಹೇಳಿಕೊಂಡು ರಾಜಕೀಯ ಮಾಡಿ ಅಧಿಕಾರ ಅನುಭವಿಸುವುದು ದೊಡ್ಡದಲ್ಲ. ಅಧಿಕಾರವಿದ್ದಾಗ ಆ ಮಹನೀಯರ ಹಾದಿಯಲ್ಲಿ ನಡೆದು ಪ್ರಾಮಾಣಿಕವಾಗಿ ಜನಸೇವೆ ಮಾಡುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದ್ದಾರೆ.
ವಾಲ್ಮೀಕಿಯ ರಾಮನ ಬಗ್ಗೆ ಚರ್ಚೆ ಆಗುವುದಕ್ಕಿಂತ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ, ಅದರಿಂದ ವಾಲ್ಮೀಕಿ ಸಮಾಜಕ್ಕೆ ಆಗಿರುವ ಅನ್ಯಾಯದ ಬಗ್ಗೆ ಚರ್ಚೆ ಆಗುವುದು ಉತ್ತಮ. ಅಲ್ಲವೇ ಮಹದೇವಪ್ಪನವರೇ? ಎಂದು ಪ್ರಶ್ನಿಸಿದ್ದಾರೆ.
ಸ್ವಾಮಿ @CMahadevappa ಅವರೇ,
ತಮ್ಮ @INCKarnataka ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಅಣಬೆಗಳಂತೆ ತೆಲೆ ಎತ್ತುವ ಎಡಬಿಡಂಗಿ ಬುದ್ದಿಜೀವಿಗಳ ಅಧಿಕಪ್ರಸಂಗಿತನ ನೋಡಿ ನೋಡಿ ಕನ್ನಡಿಗರಿಗೆ ಸಾಕಾಗಿದೆ.
ಈಗ ಇನ್ನೊಂದು ಅನಾವಶ್ಯಕ ಚರ್ಚೆ ಹುಟ್ಟುಕಾಕುವ ಮೂಲಕ ತಾವು ಮತ್ತೊಬ್ಬ ಬುದ್ಧಿಜೀವಿ ಆಗಲು ಪ್ರಯತ್ನ ಪಡಬೇಡಿ.
ಬುದ್ಧ, ಬಸವ, ಅಂಬೇಡ್ಕರರ… https://t.co/9E9hsILQWl
— R. Ashoka (@RAshokaBJP) February 10, 2025
‘ಮುಡಾ’ ಹಗರಣ :14 ಸೈಟ್ ಹಂಚಿಕೆಗೂ, ಭೈರತಿ ಸುರೇಶ್ ಗೂ ಯಾವುದೇ ಸಂಬಂಧವಿಲ್ಲ : ಸಿವಿ ನಾಗೇಶ್ ವಾದ ಮಂಡನೆ
ಪ್ರಧಾನಿ ಮೋದಿ ‘ಫ್ರಾನ್ಸ್’ ಪ್ರವಾಸ, ಅಧ್ಯಕ್ಷ ಮ್ಯಾಕ್ರನ್ ಜೊತೆಗೆ ‘ಎಐ ಶೃಂಗಸಭೆ’ಯ ಅಧ್ಯಕ್ಷತೆ