ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣ ಸಂಬಂಧ ಕಾರಿನಲ್ಲಿದ್ದಂತ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಅವರು ಏನು ಹೇಳಿದ್ರು ಅಂತ ಮುಂದೆ ಓದಿ.
ಇಂದು ಈ ಸಂಬಂಧ ಸುದ್ದಿಗಾರರೊಂದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣ ಸಂಬಂಧ ಮಾತನಾಡಿದಂತ ಅವರು, ಎರಡು ನಾಯಿ ಅಡ್ಡ ಬಂತು. ಒಂದರ ಹಿಂದೆ ಒಂದು ಬಂತು. ಡ್ರೈವರ್ ಗೆ ಏನು ಮಾಡೋದಕ್ಕೆ ಸಾಧ್ಯವಾಗಲಿಲ್ಲ. ಪ್ರಾಣಿಗಳ ಜೀವ ರಕ್ಷಣೆ ಮಾಡಲು ದಿಢೀರ್ ಎಡಬದಿಗೆ ಕಾರು ತೆಗೆದುಕೊಂಡರು. ಇದರಿಂದ ಕಾರು ಮರಕ್ಕೆ ಡಿಕ್ಕಿಯಾಯಿತು ಎಂಬುದಾಗಿ ತಿಳಿಸಿದರು.
ನಿನ್ನೆ ಸಿಎಲ್ ಪಿ ಸಭೆ ಮುಗಿಸಿ ಬೆಳಗಾವಿಗೆ ಹೊರಟಿದ್ದೆವು. ರಾತ್ರಿ 11 ಗಂಟೆಗೆ ಬೆಂಗಳೂರಿನಿಂದ ಬೆಳಗಾವಿಗೆ ಹೊರೆಟೆವು. ವೀರಭದ್ರ ದೇವಸ್ಥಾನಕ್ಕೆ ಹೋಗಲು ನಿರ್ಧಾರ ಮಾಡಿದ್ದವೆ. ರಾತ್ರಿ ತರಾತುರಿಯಲ್ಲಿ ಬೆಂಗಳೂರು ನಿವಾಸ ಬಿಟ್ಟೆವು. ಇಂದು ಮುಂಜಾನೆ 5 ಗಂಟೆಗೆ ಅಪಘಾತ ಸಂಭವಿಸಿದೆ ಎಂದರು.
ನಾಯಿಗಳನ್ನು ರಕ್ಷಣೆ ಮಾಡಲು ಹೋಗಿ ಕಾರು ಎಡಕ್ಕೆ ತೆಗೆದುಕೊಂಡ ಪರಿಣಾಮ ಈ ಅಪಘಾತ ಸಂಭವಿಸಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಬೆನ್ನಿನ ಎರಡು ಮೂಳೆಗಳು ಮುರಿತವಾಗಿದ್ದಾವೆ. ಯಾವುದೇ ಸಮಸ್ಯೆ ಇಲ್ಲ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಚೆನ್ನಾಗಿದ್ದಾರೆ. ಯಾರೂ ಆತಂಕ ಪಡುವಂತ ಅಗತ್ಯವಿಲ್ಲ ಎಂಬುದಾಗಿ ತಿಳಿಸಿದರು.
ಕಾರು ಅಪಘಾತದ ಬಳಿಕ ಮನೆಯಲ್ಲಿ ಗಾಬರಿಯಾಗಿದ್ದರು. ಹೀಗಾಗಿ ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ ಮನೆಗೆ ತೆರಳಿದ್ದೆ. ಇದೀಗ ಮರಳಿ ಬಂದಿರುವುದಾಗಿಯೂ ಹೇಳಿದರು.
‘ಸ್ವರ್ಣ ಪ್ರಾಶನ’ ಮಕ್ಕಳ ಸದೃಢ ಆರೋಗ್ಯಕ್ಕೆ ಸಹಕಾರಿಯೇ? ಇಲ್ಲಿದೆ ಸಂಪೂರ್ಣ ಮಾಹಿತಿ | Swarna Bindu Prashana