Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Vastu for Wealth: ನಿಮ್ಮ ಸಾಲಬಾಧೆ ಮುಕ್ತಿಗಾಗಿ ‘ವಾಸ್ತು ಟಿಪ್ಸ್’: ಲಕ್ಷ್ಮಿಯ ಕೃಪೆ ಪಡೆಯಲು ಇಲ್ಲಿದೆ ಮಾರ್ಗ!

02/04/2026 3:02 PM

BIG Alert: ನೀವು ‘ಡೇಟಿಂಗ್ ಆ್ಯಪ್‌’ ಬಳಸ್ತಾ ಇದ್ದೀರಾ? ಅದಕ್ಕೂ ಮುನ್ನಾ ಈ ಸುದ್ದಿ ಓದಿ.!

02/04/2026 2:54 PM

‘ನಾನು ಸಿಎಂ ಆದ್ರೇ ಮುಸ್ಲಿಮರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ತೆಗೆದು ಹಾಕ್ತೀನಿ’: ಯತ್ನಾಳ್ ವಿವಾದಾತ್ಮಕ ಹೇಳಿಕೆ

02/04/2026 2:43 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ‘ಬಗರ್ ಹುಕುಂ ಸಾಗುವಳಿ ರೈತ’ರಿಗೆ ‘ಸಚಿವ ಕೃಷ್ಣ ಬೈರೇಗೌಡ’ ಶಾಕಿಂಗ್ ನ್ಯೂಸ್
KARNATAKA

ರಾಜ್ಯದ ‘ಬಗರ್ ಹುಕುಂ ಸಾಗುವಳಿ ರೈತ’ರಿಗೆ ‘ಸಚಿವ ಕೃಷ್ಣ ಬೈರೇಗೌಡ’ ಶಾಕಿಂಗ್ ನ್ಯೂಸ್

By kannadanewsnow0910/03/2026 6:25 AM

ಬೆಂಗಳೂರು : ಅಕ್ರಮ ಸಕ್ರಮ ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಅರ್ಹ ರೈತರಿಗೆ ಜಮೀನು ಮಂಜೂರು ಮಾಡಬೇಕು ಎಂಬ ಸರ್ಕಾರದ ಉದ್ದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಗೆಂದು ಕಾನೂನು-ನಿಯಮಗಳನ್ನೂ ಮೀರಲು ಸಾಧ್ಯವಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟಪಡಿಸಿದರು.

ಸೋಮವಾರ ವಿಧಾಸಭೆಯಲ್ಲಿ ಸೇಂದಿವನವನ್ನು ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ರೈತರಿಗೆ ಭೂ ಮಂಜೂರು ಮಾಡುವ ಸಂಬಂಧ ಪ್ರಶ್ನೋತ್ತರ ಕಲಾಪದ ಸಮಯದಲ್ಲಿ ಮಾಜಿ ಸಚಿವರಾದ ಟಿಬಿ ಜಯಚಂದ್ರ ಅವರ ಪ್ರಶ್ನೆಗೆ ಅವರು ಉತ್ತರ ನೀಡಿದರು.

“ಹಿಂದೆ ಕರ್ನಾಟಕದಲ್ಲಿ ಹೆಂಡ (ಸೇಂದಿ) ಇಳಿಸುವ ಕುಲಕಸುಬು ಇತ್ತು. ಹೀಗಾಗಿ ಇದೇ ಕಸುಬವನ್ನು ನಂಬಿಕೊಂಡಿದ್ದವರಿಗಾಗಿ ಕೆಲವು ಪ್ರದೇಶಗಳನ್ನು ಈಚಲುವನ ಅಥವಾ ಸೇಂದಿವನ ಎಂದು ಕಾಯ್ದಿರಿಸಲಾಗಿತ್ತು. ಕಾಲಾನಂತರ ಈ ವೃತ್ತಿಯನ್ನು ನಿಷೇಧಿಸಿದ ಮೇಲೆ ಆ ಜಮೀನಿನಲ್ಲಿ ಕೆಲವರು ಕೃಷಿ ಮಾಡಿಕೊಂಡಿದ್ದರೆ, ಕೆಲವು ಪ್ರದೇಶಗಳನ್ನು ಸರ್ಕಾರವೇ ಜನ ಕಲ್ಯಾಣ ಕಾರ್ಯಕ್ರಮಗಳಿಗೆ ನೀಡಿದೆ. ಆದರೆ, ಅದೇ ಪ್ರದೇಶಗಳನ್ನು ಪ್ರಸ್ತುತ ಬಗರ್ ಹುಕುಂ ಯೋಜನೆ ಅಡಿಯಲ್ಲಿ ಮಂಜೂರು ಮಾಡಲು 2003ರ ಸರ್ಕಾರಿ ಆದೇಶದ ಕಾರಣಕ್ಕೆ ಕೆಲವು ಕಾನೂನು ತೊಡಕುಗಳಿವೆ” ಎಂದು ವಿವರಿಸಿದರು.

“ಸೇಂದಿವನ ಪ್ರದೇಶವನ್ನು ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ರೈತರಿಗೆ ಮಂಜೂರು ಮಾಡಬೇಕು ಎಂಬ ಬೇಡಿಕೆ ನಮಗೆ ಅರ್ಥವಾಗುತ್ತದೆ. ಈ ವಿಚಾರದಲ್ಲಿ ಸಕಾರಾತ್ಮಕವಾಗಿ ತೀರ್ಮಾನ ತೆಗೆದುಕೊಳ್ಳಬೇಕು ಎಂಬ ಉದ್ದೇಶವೂ ಸರ್ಕಾರಕ್ಕೆ ಇದೆ. ಆದರೆ, ಸೇಂದಿವನ ಜಮೀನನ್ನು ಅಬಕಾರಿ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾವಣೆ ಮಾಡುವಾಗ 2003 ರಲ್ಲಿ ಅಂದಿನ ಸರ್ಕಾರ ರೂಪಿಸಿದ ಐದು ನಿಯಮಗಳು ಇಂದು ತೊಡಕಾಗಿ ಪರಿಣಮಿಸಿವೆ.

“(1)150 ಎಕರೆಗಿಂತ ಹೆಚ್ಚಿದ್ದರೆ ಆ ಜಮೀನನ್ನು ಅರಣ್ಯ ಇಲಾಖೆಗೆ ನೀಡಬೇಕು. (2)ಲಭ್ಯವಿರುವ ಗ್ರಾಮದಲ್ಲಿ ಕನಿಷ್ಟ 10 ಎಕರೆ ಜಾಗವನ್ನು ಸ್ಮಶಾನಕ್ಕೆ ಕಾಯ್ದಿರಿಸಬೇಕು. (3)ಪ್ರತಿಯೊಂದು ಗ್ರಾಮದಲ್ಲೂ ಸೇಂದಿವನ ಜಮೀನನ್ನು ಗಮನದಲ್ಲಿಟ್ಟುಕೊಂಡು ಆಶ್ರಯ ಯೋಜನೆ, ಮೊರಾರ್ಜಿ ದೇಸಾಯಿ ನವೋದಯ ವಸತಿ ಶಾಲೆ, ಪರಿಶಿಷ್ಠ ಜಾತಿ ಪಂಡಗ, ಹಿಂದುಳಿದ ವರ್ಗಗಳ ಹಾಸ್ಟೆಲ್ ಸ್ಮಶಾನ ಉದ್ದೇಶಕ್ಕಾಗಿ, ಸಾರ್ವಜನಿಕ ಶಿಕ್ಷಣ ಕಟ್ಟಡ ಆರೋಗ್ಯ ಕೇಂದ್ರ ಬಸ್ ನಿಲ್ದಾಣ ಉದ್ದೇಶಕ್ಕಾಗಿ ಕನಿಷ್ಟ 10 ರಿಂದ 50 ಎಕರೆ ಮೀಸಲಿಡುವುದು. (4) ಪ್ರತಿ ಗ್ರಾಮ ಪಂಚಾಯತಿ ಕೇಂದ್ರಕ್ಕೆ ಸಂಬಂಧಿಸಿದಂತೆ ಕೋಮುಗಲಭೆ ಪ್ರಕರಣಗಳಲ್ಲಿ ಸಂತ್ರಸ್ತರಾದ ಜನರಿಗೆ ಹಾಗೂ ಪರಿಶಿಷ್ಟ ಜಾತಿ-ಪಂಗಡಗಳ ಕುಟುಂಬಗಳ ಮೇಲೆ ದೌರ್ಜನ್ಯ ನಡೆದು ಸಂತ್ರಸ್ತರಾದವರ ಕುಟುಂಬಗಳಿಗೆ ಕನಿಷ್ಟ 3 ಮೂರು ಎಕರೆ ನೀಡುವ ಉದ್ದೇಶಕ್ಕಾಗಿ ಜಮೀನು ಮೀಸಲಿರಿಸುವುದು. (5) ಭೂರೈತ ಹಾಗೂ ಅತಿಸಣ್ಣ ಹಿಡುವಳಿದಾರರು 1990ಕ್ಕಿಂತ ಹಿಂದಿನಿಂದಲೂ ಬಗರ್ ಹುಕುಂ ಸಾಗುವಳಿ ಮಾಡಿರುವ ಜಮೀನನ್ನು ಸ್ವಂತ ಹಿಡುವಳಿ ಜಮೀನನ್ನಾಗಿ ಸೇರಿದಂತೆ 5 ಎಕರೆ ಮಿತಿಗೆ ಒಳಪಟ್ಟು ಸಕ್ರಮಗೊಳಿಸುವುದು.

ಬಗರ್ ಹುಕುಂ ಭೂ ಮಂಜೂರಾತಿ ಸಂದರ್ಭದಲ್ಲಿ ಈ ಎಲ್ಲಾ ಐದು ನಿಯಮಗಳನ್ನು ಯತಾವತ್ ಪಾಲಿಸಿದರೆ ಆಗುವ ಕೆಲಸಗಳೂ ಆಗೋಲ್ಲ. ಇದಲ್ಲದೆ, ಸುಮಾರು ಜಮೀನುಗಳು ಕಡತದಲ್ಲಿ ಈಗಾಗಲೇ ಅರಣ್ಯ ಇಲಾಖೆ ಎಂದು ನಮೂದಿಸಲಾಗಿದೆ. ಅರಣ್ಯ ಜಮೀನು ರಕ್ಷಣೆಗೆ ಸುಪ್ರೀಂ ಕೋರ್ಟ್ನಿಂದ ಕಟ್ಟುನಿಟ್ಟಿನ ಆದೇಶ ಇದೆ. ಹೀಗಾಗಿ ರೈತರಿಗೆ ಏನಾದ್ರೂ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ವಲಯ ಆಯುಕ್ತರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿ ನಿಯಮಗಳನ್ನು ಸರಳೀಕರಿಸಲು ಮುಂದಾಗಿದ್ದೇವೆ. ಬಗರ್ ಹುಕುಂ ಬಾಕಿ ಅರ್ಜಿ ಪರಿಗಣಿಸಬೇಕು ಎಂಬ ಉದ್ದೇಶ ಸ್ಪಷ್ಟವಾಗಿದೆ. ಈ ಕೆಲಸ ಮಾಡುವಾಗ ಎಲ್ಲಾ ನಿಯಮಗಳನ್ನೂ ಗಮನದಲ್ಲಿಟ್ಟು ಮಾಡಬೇಕಿದೆ. ಆದರೆ, ಈ ಕೆಲಸಗಳನ್ನು ಕಾನೂನು ಚೌಕಟ್ಟು ಮೀರಿ ಮಾಡಿ ಎಂದರೆ ನಮ್ಮಿಂದ ಸಾಧ್ಯವಿಲ್ಲ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟಪಡಿಸಿದರು.

Share. Facebook Twitter LinkedIn WhatsApp Email

Related Posts

BIG Alert: ನೀವು ‘ಡೇಟಿಂಗ್ ಆ್ಯಪ್‌’ ಬಳಸ್ತಾ ಇದ್ದೀರಾ? ಅದಕ್ಕೂ ಮುನ್ನಾ ಈ ಸುದ್ದಿ ಓದಿ.!

02/04/2026 2:54 PM1 Min Read

‘ನಾನು ಸಿಎಂ ಆದ್ರೇ ಮುಸ್ಲಿಮರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ತೆಗೆದು ಹಾಕ್ತೀನಿ’: ಯತ್ನಾಳ್ ವಿವಾದಾತ್ಮಕ ಹೇಳಿಕೆ

02/04/2026 2:43 PM1 Min Read

ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ: ಬಕೆಟ್ ನೀರಿಗೆ ಬಿದ್ದು ಮಗು ಬಲಿ, ಆಘಾತದಿಂದ ತಾಯಿಯೂ ಆತ್ಮಹತ್ಯೆ!

02/04/2026 2:40 PM2 Mins Read
Recent News

Vastu for Wealth: ನಿಮ್ಮ ಸಾಲಬಾಧೆ ಮುಕ್ತಿಗಾಗಿ ‘ವಾಸ್ತು ಟಿಪ್ಸ್’: ಲಕ್ಷ್ಮಿಯ ಕೃಪೆ ಪಡೆಯಲು ಇಲ್ಲಿದೆ ಮಾರ್ಗ!

02/04/2026 3:02 PM

BIG Alert: ನೀವು ‘ಡೇಟಿಂಗ್ ಆ್ಯಪ್‌’ ಬಳಸ್ತಾ ಇದ್ದೀರಾ? ಅದಕ್ಕೂ ಮುನ್ನಾ ಈ ಸುದ್ದಿ ಓದಿ.!

02/04/2026 2:54 PM

‘ನಾನು ಸಿಎಂ ಆದ್ರೇ ಮುಸ್ಲಿಮರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ತೆಗೆದು ಹಾಕ್ತೀನಿ’: ಯತ್ನಾಳ್ ವಿವಾದಾತ್ಮಕ ಹೇಳಿಕೆ

02/04/2026 2:43 PM

ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ: ಬಕೆಟ್ ನೀರಿಗೆ ಬಿದ್ದು ಮಗು ಬಲಿ, ಆಘಾತದಿಂದ ತಾಯಿಯೂ ಆತ್ಮಹತ್ಯೆ!

02/04/2026 2:40 PM
State News
KARNATAKA

BIG Alert: ನೀವು ‘ಡೇಟಿಂಗ್ ಆ್ಯಪ್‌’ ಬಳಸ್ತಾ ಇದ್ದೀರಾ? ಅದಕ್ಕೂ ಮುನ್ನಾ ಈ ಸುದ್ದಿ ಓದಿ.!

By kannadanewsnow0902/04/2026 2:54 PM KARNATAKA 1 Min Read

ಬೆಂಗಳೂರು: ರಾಜಧಾನಿಯ ಟೆಕ್ಕಿಯೊಬ್ಬರು ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಯುವತಿಯನ್ನು ನಂಬಿ ಬರೋಬ್ಬರಿ 18.20 ಲಕ್ಷ ರೂಪಾಯಿ ಕಳೆದುಕೊಂಡು ವಂಚನೆಗೆ…

‘ನಾನು ಸಿಎಂ ಆದ್ರೇ ಮುಸ್ಲಿಮರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ತೆಗೆದು ಹಾಕ್ತೀನಿ’: ಯತ್ನಾಳ್ ವಿವಾದಾತ್ಮಕ ಹೇಳಿಕೆ

02/04/2026 2:43 PM

ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ: ಬಕೆಟ್ ನೀರಿಗೆ ಬಿದ್ದು ಮಗು ಬಲಿ, ಆಘಾತದಿಂದ ತಾಯಿಯೂ ಆತ್ಮಹತ್ಯೆ!

02/04/2026 2:40 PM

SSLCಯಲ್ಲಿ ಹಿಂದಿಗೆ ಅಂಕಗಳ ಬದಲಿಗೆ ಗ್ರೇಡ್: ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಕೆ

02/04/2026 2:35 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.