Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಂದು ಸಾಗರದಲ್ಲಿ ‘ಹೆಲಿ ಟೂರಿಸಂ’ಗೆ ಮುಗಿಬಿದ್ದ ಜನರು: ಜಸ್ಟ್ ನಾಳೆ, ನಾಡಿದ್ದು ಮಾತ್ರವೇ ‘ಹೆಲಿಕಾಪ್ಟರ್ ಪ್ರವಾಸ’

07/02/2026 11:18 PM

BIG NEWS : ಶೀಘ್ರ ಬೆಂಗಳೂರು-ಮಂಗಳೂರು ಮಧ್ಯ 2 ‘ವಂದೇ ಭಾರತ್’ ರೈಲು ಸೇವೆ ಆರಂಭ : ಸಚಿವ ಅಶ್ವಿನಿ ವೈಷ್ಣವ್

07/02/2026 9:37 PM
BREAKING NEWS

BREAKING : ಬೆಳಗಾವಿಯಲ್ಲಿ ಭೀಕರ ಅಪಘಾತ : ರಸ್ತೆ ದಾಟುತ್ತಿದ್ದಾಗ ಟ್ರಕ್ ಹರಿದು, ಇಬ್ಬರು ಮಹಿಳೆಯರು ಸಾವು!

07/02/2026 9:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ರಾಜ್ಯದ ‘ಗ್ರಾಮ ಆಡಳಿತಾಧಿಕಾರಿ, ಸಹಾಯಕ’ರಿಗೆ ‘ಸಚಿವ ಕೃಷ್ಣ ಬೈರೇಗೌಡ’ ಗುಡ್ ನ್ಯೂಸ್
KARNATAKA

BREAKING: ರಾಜ್ಯದ ‘ಗ್ರಾಮ ಆಡಳಿತಾಧಿಕಾರಿ, ಸಹಾಯಕ’ರಿಗೆ ‘ಸಚಿವ ಕೃಷ್ಣ ಬೈರೇಗೌಡ’ ಗುಡ್ ನ್ಯೂಸ್

By kannadanewsnow0916/02/2025 3:51 PM

ಬೆಂಗಳೂರು: ರಾಜ್ಯದ ಗ್ರಾಮ ಆಡಳಿತಾಧಿಕಾರಿ, ಗ್ರಾಮ ಸಹಾಯಕರಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಅದೇ ಆಧಾರ್‌ ಜೋಡಣೆಯಲ್ಲಿ ಶ್ರಮಿಸಿದ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರಿಗೆ ಸಂಭಾವನೆ ನೀಡುವುದಾಗಿ ಘೋಷಿಸಿದ್ದಾರೆ.

ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಪಹಣಿಗಳ ಜೊತೆ ಆಧಾರ್‌ ಜೋಡಣೆ (ಆಧಾರ್‌ ಸೀಡಿಂಗ್) ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆ. ಅಕ್ರಮ ನೋಂದಣಿಗಳ ತಡೆ, ರೈತರಿಗೆ ಸೂಕ್ತ ಸಮಯದಲ್ಲಿ ಅಗತ್ಯ ನೆರವು ನೀಡಲು‌, ಸರ್ಕಾರಿ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಹಾಗೂ ಫೌತಿ ಖಾತೆ ನೀಡಲು ಆಧಾರ್‌ ಸೀಡಿಂಗ್‌ ಪಾತ್ರ ಮಹತ್ವವಾದದ್ದು. ಇದೇ ಕಾರಣಕ್ಕೆ ಕಂದಾಯ ಇಲಾಖೆಯ ಜವಾಬ್ದಾರಿ ನನ್ನ ಹೆಗಲಿಗೆ ಬಿದ್ದ ತಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳಿಗೂ ಆಧಾರ್‌ ಸೀಡಿಂಗ್‌ ಗುರಿ ನೀಡಲಾಗಿತ್ತು. ಆದರೆ, ಫೀಲ್ಡಿಗಿಳಿದು ಈ ಕೆಲಸವನ್ನು ಸಾಧ್ಯವಾಗಿಸಿದ್ದು ಮಾತ್ರ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ಎಂದಿದ್ದಾರೆ.

ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರ ಶ್ರಮ ಮತ್ತು ಪ್ರಾಮಾಣಿಕ ಕೆಲಸದ ಪರಿಣಾಮ ದಿನಾಂಕ:-31/01/2025 ರವರೆಗೆ ಒಟ್ಟು 2,22,83,817 ಪಹಣಿಗಳಿಗೆ ಆಧಾರ್‌ ಜೋಡಣೆ ಮಾಡಲಾಗಿದೆ. ಇದು ನಿಜಕ್ಕೂ ಶ್ಲಾಘನೀಯ ಕೆಲಸವಾಗಿರುತ್ತದೆ. ಈ ಕೆಲಸವನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಹಲವು ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ತಮ್ಮ ಜೇಬಿನಿಂದ ಹಣ ಖರ್ಚು ಮಾಡಿದ್ದಾರೆ. ಹೀಗಾಗಿ ಇಂತಹ ಪ್ರಾಮಾಣಿಕ ಅಧಿಕಾರಿಗಳ ಬಗ್ಗೆ ಕಾಳಜಿ ವಹಿಸಬೇಕಾದದ್ದು ಮತ್ತು ಅವರ ಕೆಲಸವನ್ನು ಗುರಿತಿಸಿ ಪ್ರಶಂಶಿಸಬೇಕಾದ ಬಾದ್ಯತೆ-ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ 28/01/2025 ರಂದು DILRMP (Digital India Land Records Modernization Programme ) State Level Review & Monitoring Committee ಸಭೆ ನಡೆಸಿ, “ಪಹಣಿಗಳಿಗೆ ಆಧಾರ್‌ ಜೋಡಣೆ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸಿರುವ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರಿಗೆ ಪ್ರತಿ ಒಂದು ಆಧಾರ್‌ ಜೋಡಣೆಗೆ, ತಲಾ ಒಂದು ರೂಪಾಯಿಯಂತೆ (Rs.1/-) ಸಂಭಾವನೆಯನ್ನು ನೀಡಬೇಕು” ಎಂಬ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

“ಭೂ ಸುರಕ್ಷಾ” ಯೋಜನೆಯ ಅಡಿಯಲ್ಲಿ ಈಗಾಗಲೇ PFMS ಮೂಲಕ ಬಿಡುಗಡೆಗೊಳಿಸಲಾದ ಅನುದಾನದಲ್ಲಿ ಜಿಲ್ಲಾಧಿಕಾರಿಗಳ ಖಾತೆಯಿಂದ (Child Account) 4,45,67,634 ರೂಪಾಯಿ ಹಣವನ್ನು ಆಧಾರ್‌ ಜೋಡಣೆಯಲ್ಲಿ ಮಹತ್ವದ ಪಾತ್ರ ವಹಿಸಿದ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ, ಈ ಸಂಭಾವನೆಯ ಪಾವತಿ ಕುರಿತು ಕೆಲ ಮಾರ್ಗಸೂಚಿಗಳನ್ನು ಅಳವಡಿಸಿದ್ದು, ಅದರಂತೆ ಕ್ರಮವಹಿಸಲು ಸೂಚಿಸಲಾಗಿದೆ.

ಸಂಭಾವನೆ ಕುರಿತ ಮಾರ್ಗಸೂಚಿ:-

1.ಅನುಬಂಧ-1 ರಲ್ಲಿನ ಮಾಹಿತಿಯನ್ವಯ ದಿನಾಂಕ:31.01.2025 ರವರೆಗೆ ಆಧಾರ್ ಜೋಡಣೆ ಕಾರ್ಯ ನಿರ್ವಹಿಸಿರುವ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಅವರ ಗ್ರಾಮ ಸಹಾಯಕರಿಗೆ ಪ್ರತಿ ಒಂದು ಆಧಾರ್ ಜೋಡಣೆಗೆ ತಲಾ ಒಂದು ರೂಪಾಯಿಯಂತೆ (Rs.1/-) ಸಂಭಾವನೆ ಪಾವತಿ ಮಾಡತಕ್ಕದ್ದು. ಉದಾ: 1000 ಆಧಾರ್ ಜೋಡಣೆಗೆ ರೂ.2000 ನೀಡಲಾಗುತ್ತದೆ. ಈ ಪೈಕಿ ಆ ವೃತ್ತದ ಒಬ್ಬ ಗ್ರಾಮ ಆಡಳಿತ ಅಧಿಕಾರಿಗೆ ರೂ.1000 ಮತ್ತು ಆ ವೃತ್ತದ VAO ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಬ್ಬ ಗ್ರಾಮ ಸಹಾಯಕರಿಗೆ ರೂ.1000 ನೀಡುವುದು.

2. ಆಧಾರ್ ಜೋಡಣೆ ಕಾರ್ಯವನ್ನು ನಿರ್ವಹಿಸಿರುವ ಗ್ರಾಮ ಆಡಳಿತ ಅಧಿಕಾರಿ ಹಾಗೂ ಗ್ರಾಮ ಸಹಾಯಕರ ವಿವರವನ್ನು ತಹಶೀಲ್ದಾರರಿಂದ ಪಡೆದು, ಸದರಿ ಮಾಹಿತಿಯನ್ನು ಕಟ್ಟು ನಿಟ್ಟಾಗಿ ಪರಿಶೀಲಿಸಿ, ಕಾರ್ಯನಿರ್ವಹಿಸಿದ ಅವಧಿಗೆ ತಕ್ಕಂತೆ ಮಾತ್ರ ಸಂಭಾವನೆಯನ್ನು ಪಾವತಿ ಮಾಡಲು ಕ್ರಮವಹಿಸತಕ್ಕದ್ದು.

3. ತಲಾ ರೂಪಾಯಿ ಒಂದರಂತೆ ಅನುದಾನವನ್ನು PFMS ತಂತ್ರಾಂಶದ ಮೂಲಕ Aadhar linkage with RoR component ಅಡಿಯಲ್ಲಿ ಕೂಡಲೇ ಬಿಡುಗಡೆ ಮಾಡಲು ಮತ್ತು ಸದರಿ ಅನುದಾನದ ಬಿಡುಗಡೆ ಹಾಗೂ ಪಾವತಿಯ ವಿಷಯದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದೆ.

4. ಗ್ರಾಮ ಆಡಳಿತ ಅಧಿಕಾರಿ ಹಾಗೂ ಗ್ರಾಮ ಸಹಾಯಕರ ಬ್ಯಾಂಕ್ ಅಕೌಂಟ್ ವಿವರಗಳನ್ನು ಸಂಬಂಧಪಟ್ಟ ತಹಶೀಲ್ದಾರರಿಂದ ಪಡೆದು, ಪತ್ರದೊಂದಿಗೆ ಲಗತ್ತಿಸಲಾದ ಬಳಕೆದಾರರ ಕೈಪಿಡಿಯನ್ವಯ (User Manual) ಅನುದಾನ ಬಿಡುಗಡೆ ಮತ್ತು ಪಾವತಿ ವಿಷಯದ ಕುರಿತು ದಿನಾಂಕ: 21.02.2025 ರೊಳಗಾಗಿ ತಪ್ಪದೇ ಕ್ರಮವಹಿಸತಕ್ಕದ್ದು ಅಂತ ಹೇಳಿದ್ದಾರೆ.

ಸಿದ್ದರಾಮಯ್ಯ ನಮ್ಮ ನಾಯಕರು, ಅವರ ಹೆಸರು ದುರ್ಬಳಕೆ ಬೇಡ: ಡಿಸಿಎಂ ಡಿ.ಕೆ. ಶಿವಕುಮಾರ್

ALERT : `ಬಾಟಲ್ ನೀರು’ ಕುಡಿಯುವವರೇ ಎಚ್ಚರ : ತಪ್ಪದೇ ಇದನ್ನೊಮ್ಮೆ ಓದಿ.!

SHOCKING : ಯುವಕನಿಗಾಗಿ ನಡು ರಸ್ತೆಯಲ್ಲೇ ಬಟ್ಟೆ ಹರಿದುಕೊಂಡು ಯುವತಿಯರ ಫೈಟ್.! VIDEO VIRAL

Share. Facebook Twitter LinkedIn WhatsApp Email

Related Posts

ಇಂದು ಸಾಗರದಲ್ಲಿ ‘ಹೆಲಿ ಟೂರಿಸಂ’ಗೆ ಮುಗಿಬಿದ್ದ ಜನರು: ಜಸ್ಟ್ ನಾಳೆ, ನಾಡಿದ್ದು ಮಾತ್ರವೇ ‘ಹೆಲಿಕಾಪ್ಟರ್ ಪ್ರವಾಸ’

07/02/2026 11:18 PM3 Mins Read

BIG NEWS : ಶೀಘ್ರ ಬೆಂಗಳೂರು-ಮಂಗಳೂರು ಮಧ್ಯ 2 ‘ವಂದೇ ಭಾರತ್’ ರೈಲು ಸೇವೆ ಆರಂಭ : ಸಚಿವ ಅಶ್ವಿನಿ ವೈಷ್ಣವ್

07/02/2026 9:37 PM1 Min Read
BREAKING NEWS

BREAKING : ಬೆಳಗಾವಿಯಲ್ಲಿ ಭೀಕರ ಅಪಘಾತ : ರಸ್ತೆ ದಾಟುತ್ತಿದ್ದಾಗ ಟ್ರಕ್ ಹರಿದು, ಇಬ್ಬರು ಮಹಿಳೆಯರು ಸಾವು!

07/02/2026 9:36 PM1 Min Read
Recent News

ಇಂದು ಸಾಗರದಲ್ಲಿ ‘ಹೆಲಿ ಟೂರಿಸಂ’ಗೆ ಮುಗಿಬಿದ್ದ ಜನರು: ಜಸ್ಟ್ ನಾಳೆ, ನಾಡಿದ್ದು ಮಾತ್ರವೇ ‘ಹೆಲಿಕಾಪ್ಟರ್ ಪ್ರವಾಸ’

07/02/2026 11:18 PM

BIG NEWS : ಶೀಘ್ರ ಬೆಂಗಳೂರು-ಮಂಗಳೂರು ಮಧ್ಯ 2 ‘ವಂದೇ ಭಾರತ್’ ರೈಲು ಸೇವೆ ಆರಂಭ : ಸಚಿವ ಅಶ್ವಿನಿ ವೈಷ್ಣವ್

07/02/2026 9:37 PM
BREAKING NEWS

BREAKING : ಬೆಳಗಾವಿಯಲ್ಲಿ ಭೀಕರ ಅಪಘಾತ : ರಸ್ತೆ ದಾಟುತ್ತಿದ್ದಾಗ ಟ್ರಕ್ ಹರಿದು, ಇಬ್ಬರು ಮಹಿಳೆಯರು ಸಾವು!

07/02/2026 9:36 PM

ಬಳ್ಳಾರಿ: ಫೆ.9ರಂದು ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

07/02/2026 9:34 PM
State News
KARNATAKA

ಇಂದು ಸಾಗರದಲ್ಲಿ ‘ಹೆಲಿ ಟೂರಿಸಂ’ಗೆ ಮುಗಿಬಿದ್ದ ಜನರು: ಜಸ್ಟ್ ನಾಳೆ, ನಾಡಿದ್ದು ಮಾತ್ರವೇ ‘ಹೆಲಿಕಾಪ್ಟರ್ ಪ್ರವಾಸ’

By kannadanewsnow0907/02/2026 11:18 PM KARNATAKA 3 Mins Read

ಶಿವಮೊಗ್ಗ: ಸಾಗರದ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹೆಲಿ ಟೂರಿಸಂ ನಿನ್ನೆಯಿಂದ ಆರಂಭಿಸಲಾಗಿತ್ತು. ಮೊದಲ ದಿನ ಕೊಂಚ ಇಳಿಕೆಯಲ್ಲಿದ್ದಂತ…

BIG NEWS : ಶೀಘ್ರ ಬೆಂಗಳೂರು-ಮಂಗಳೂರು ಮಧ್ಯ 2 ‘ವಂದೇ ಭಾರತ್’ ರೈಲು ಸೇವೆ ಆರಂಭ : ಸಚಿವ ಅಶ್ವಿನಿ ವೈಷ್ಣವ್

07/02/2026 9:37 PM
BREAKING NEWS

BREAKING : ಬೆಳಗಾವಿಯಲ್ಲಿ ಭೀಕರ ಅಪಘಾತ : ರಸ್ತೆ ದಾಟುತ್ತಿದ್ದಾಗ ಟ್ರಕ್ ಹರಿದು, ಇಬ್ಬರು ಮಹಿಳೆಯರು ಸಾವು!

07/02/2026 9:36 PM

ಬಳ್ಳಾರಿ: ಫೆ.9ರಂದು ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

07/02/2026 9:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.